ಮಡಿಕೇರಿ: ಹಿಜಬ್ ಹಾಕಿಕೊಂಡು ಶಾಲಾ, ಕಾಲೇಜುಗಳಿಗೆ ಬರುವ ಹಾಗೆ ಇಲ್ಲ ಎಂದು ನಿನ್ನೆ ಹೈಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ಖಾಸಗಿ ನ್ಯೂಸ್ ವೆಬ್ ಪೋರ್ಟಿನಲ್ಲಿ ಹಾಕಿದ್ದ ಸುದ್ದಿಗೆ ಕಮೆಂಟ್ ಮಾಡಿದ್ದ ಯುವಕನೋರ್ವನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೊಡಗು ಜಿಲ್ಲೆಯ ಕಲ್ಲುಗುಂಡಿ ಗ್ರಾಮದ ಅಬ್ದುಲ್ ಮುತಾಲಿಬ್ ಆರೋಪಿ. ಚಂಬು ಗ್ರಾಮದ ಇಂದ್ರೇಶ್ ಎಂಬುವರು ನೀಡಿದ ದೂರು ಆಧರಿಸಿ ಯುವಕನನ್ನು ವಶಕ್ಕೆ ಪಡೆಯಲಾಗಿದೆ. ಅಬ್ದುಲ್ ಮುತಾಲಿಕ್ ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡಿ, ಹಿಜಬ್ ಇಸ್ಲಾಂನ ಅತ್ಯಗತ್ಯ ಭಾಗವಲ್ಲ ಎಂದು ಯಾವ ಆಧಾರದಲ್ಲಿ ಹೇಳಿದ್ದು ಸ್ಪಷ್ಟನೆ ನೀಡಿ ಎಂದು ಕಮೆಂಟ್ ಮಾಡಿದ ಬಳಿಕ ಕೇಸರಿ ಶಾಲು ಸಂಘಿಗಳ ಧರ್ಮದ ಅತ್ಯಗತ್ಯ ಭಾಗವಾಗಿರಬಹುದು ಎಂಬ ಹೇಳಿಕೆಯನ್ನು ನೀಡಿ ಅವಾಚ್ಯ ಶಬ್ದವನ್ನು ಉಪಯೋಗಿಸಿದ್ದ. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ವೀಕ್ಷಿಸಲು ಸರ್ಕಾರಿ ನೌಕರರಿಗೆ ಅರ್ಧ ದಿನ ರಜೆ: ಅಸ್ಸಾಂ ಸಿಎಂ
Advertisement
Advertisement
ಅಬ್ದುಲ್ ಕೋರ್ಟ್ ತೀರ್ಪನ್ನು ನಿಂದನೆ ಮಾಡಿದ್ದನ್ನು ಗಮನಿಸಿದ ಇಂದ್ರೇಶ್ ಸ್ಕ್ರೀನ್ ಶಾಟ್ ಸೇರಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಂತೆ ಅಬ್ದುಲ್ ಸಾಮಾಜಿಕ ಜಾಲತಾಣದಲ್ಲಿರುವ ತನ್ನೆಲ್ಲಾ ಪೋಸ್ಟ್‌ನ್ನು ಡಿಲೀಟ್ ಮಾಡಿದ್ದಾನೆ. ಈ ಹಿನ್ನೆಲೆಯಲ್ಲಿ ಅಬ್ದುಲ್‍ನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ವಾಜಪೇಯಿಯಂತೇ ಮೋದಿ ಹೇಳಿಕೆ ನೀಡ್ತಾರೆ, ಆದರೆ..: ಶಶಿ ತರೂರ್