ಬೆಂಗಳೂರು: ಕೆ.ಆರ್.ಪುರಂನಲ್ಲಿ ಜೆಸಿಬಿ (JCB) ಘರ್ಜನೆ ಆರಂಭವಾಗುತ್ತಿದೆ. ಆದರೆ ಒತ್ತುವರಿ ತೆರವು ಮಾಡಬಾರದು ಎಂದು ದಂಪತಿ ಪೆಟ್ರೋಲ್ (Petrol) ಸುರಿದುಕೊಂಡಿದ್ದು, ಬೆಂಕಿ ಹಚ್ಚಿಕೊಳ್ಳುತ್ತೇನೆ ಬೆದರಿಕೆ ಹಾಕಿ ರಾಜಕಾಲುವೆ (Rajakaluve) ತೆರವಿಗೆ ತಡೆವೊಡ್ಡಿದ್ದಾರೆ.
ಬಿಬಿಎಂಪಿ ಅಧಿಕಾರಿಗಳು ಕೆ. ಆರ್. ಪುರಂನ ಗಾಯತ್ರಿ ಲೇಔಟ್‍ನಲ್ಲಿ ಒತ್ತುವರಿ ತೆರವಿಗೆ ಮುಂದಾಗಿತ್ತು. ಈ ವೇಳೆ ಸೋನಾ ಸೇನ್ ಮತ್ತು ಸುನೀಲ್ ಸಿಂಗ್ ದಂಪತಿ ಕ್ಯಾನ್‍ನಲ್ಲಿ, ಬಾಟಲಿಯಲ್ಲಿ ಪೆಟ್ರೋಲ್ ಹಿಡಿದು ಒತ್ತುವರಿ ತೆರವಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಕಷ್ಟಪಟ್ಟು ಮನೆ ಕಟ್ಟಿದ್ದೇವೆ. ಮನೆ ಕಟ್ಟಲು ಸಾಲ ಮಾಡಿದ್ದೆ. ಈಗ ಮನೆ ಒಡೆದು ಹಾಕಿದ್ರೆ ಹೇಗೆ? ನಿನ್ನೆ ಎಲ್ಲಾ ಕಾಂಪೌಂಡ್ ಒಡೆದಿದ್ದಾರೆ. ಇದಕ್ಕೆಲ್ಲಾ ನಮಗೆ ಪರಿಹಾರ ಬೇಕು. ಈ ಹಿನ್ನೆಲೆಯಲ್ಲಿ ಸಿಎಂ ಬರಬೇಕು. ಸಿಎಂ ಜೊತೆ ಮಾತನಾಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಮಂಗಳೂರಿನಲ್ಲಿ ಕಾಂತಾರ ಸಿನಿಮಾ ವೀಕ್ಷಣೆ ವೇಳೆ ಪ್ರೇಕ್ಷಕನಿಗೆ ಆವೇಶ
Advertisement
Advertisement
ಘಟನೆಗೆ ಸಂಬಂಧಿಸಿ ಸೋನಾ ಸೇನ್ ಪೇಟ್ರೋಲ್ ಸುರಿದುಕೊಂಡಿದ್ದಾಳೆ. ಆಕೆಗೆ ಪತಿ ಸುನೀಲ್ ಸಿಂಗ್ ಬೆಂಕಿ ಹಚ್ಚಲು ಹೋಗಿದ್ದಾರೆ. ಘಟನೆಗೆ ಸಂಬಂಧಿಸಿ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಜೊತೆಗೆ ಅಲ್ಲಿನ ಸ್ಥಳೀಯರು ಬೆಂಕಿ ಹಚ್ಚಿಕೊಳ್ಳಬೇಡಿ ಅಂತಾ ಮನವಿ ಮಾಡುತ್ತಿದ್ದಾರೆ. ಇದನ್ನೂ ಓದಿ: ಬೇರೆಯವರಿಂದ ಅಡ್ಡ ಮತದಾನ ಮಾಡಿಸಿ ನಮ್ಮ ವಿರುದ್ಧ ದೂರು: ಎಚ್‌ಡಿಕೆ, ಎಚ್‌ಡಿಆರ್ ವಿರುದ್ಧ ಶ್ರೀನಿವಾಸ್ ಆರೋಪ