ಬೆಂಗಳೂರು: ರಾಜಕಾಲುವೆ (Rajakaluve) ಒತ್ತುವರಿ ತೆರವಿಗೆ ತಡೆವೊಡ್ಡಿ, ಪೆಟ್ರೋಲ್ (Petrol) ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವುದಾಗಿ ಬೆದರಿಕೆವೊಡ್ಡಿದ್ದ ದಂಪತಿಯನ್ನು ಸಿನಿಮಿಯ ರೀತಿಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.
ರಾಜ್ಯ ರಾಜಧಾನಿ ಬೆಂಗಳೂರಿನ (Bengaluru) ಕೆ. ಆರ್. ಪುರಂನಲ್ಲಿ ಜೆಸಿಬಿ (JCB) ಘರ್ಜನೆ ಆರಂಭವಾಗಿತ್ತು. ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿದ್ದ ಮನೆಗಳನ್ನು ತೆರವುಗೊಳಿಸಲು ಸಿದ್ಧಗೊಂಡಿದ್ದರು. ಆದರೆ ಅಷ್ಟರಲ್ಲೇ ಸೋನಾ ಸೇನ್ ಮತ್ತು ಸುನೀಲ್ ಸಿಂಗ್ ದಂಪತಿ ಕ್ಯಾನ್, ಬಾಟಲಿಯಲ್ಲಿ ಪೆಟ್ರೋಲ್ ಹಿಡಿದುಕೊಂಡು ಒತ್ತುವರಿ ತೆರವುಗೊಳಿಸಲು ವಿರೋಧ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ಸೋನಾ ಸೇನಾ ಪೆಟ್ರೋಲ್ ಸುರಿದುಕೊಂಡಿದ್ದಳು. ಆಕೆಯ ಪತಿ ಸುನೀಲ್ ಸಿಂಗ್ ಲೈಟರ್ ಹಿಡಿದರು ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದಾನೆ.
Advertisement
Advertisement
ಅಲ್ಲಿದ್ದ ಸ್ಥಳೀಯರು ಬೆಂಕಿ ಹಚ್ಚಿಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲದೇ ಪೊಲೀಸರು ಸ್ಥಳಕ್ಕೆ ಧಾವಿಸಿ ಮನವೊಲಿಸಲು ಪ್ರಯತ್ನಿಸಿದ್ದಾರೆ. ಯಾರೂ ಏನೇ ಹೇಳಿದರೂ ಕೇಳುವ ಪರಿಸ್ಥಿತಿಯಲ್ಲಿಲ್ಲದ ದಂಪತಿ ಇನ್ನೂ ಅತಿರೇಕದ ವರ್ತನೆಯನ್ನು ತೋರಿದ್ದಾರೆ. ಅಷ್ಟೇ ಅಲ್ಲದೇ ಸೋನಾ ಸೇನಾಳ ಕೈಯಲ್ಲಿದ್ದ ಪೆಟ್ರೋಲ್‍ನ್ನು ತೆಗೆದು ತನ್ನ ಪತಿ ಸುನೀಲ್ ಸಿಂಗ್‍ಗೂ ಹಾಕಿದ್ದಾಳೆ.
Advertisement
Advertisement
ಇದೇ ರೀತಿ ದಂಪತಿ ಸತತ 2 ಗಂಟೆಗಳ ಹೈಡ್ರಾಮಾ ನಡೆಸಿದ್ದಾರೆ. ಕೊನೆಗೂ ಈ ಹೈಡ್ರಾಮಾಕ್ಕೆ ಪೊಲೀಸರು ಸಿನಿಮಾ ರೀತಿಯಲ್ಲೇ ನೀರೆರೆಚುವ ಮೂಲಕ ಬ್ರೇಕ್ ಹಾಕಿದ್ದಾರೆ. ದಂಪತಿ ಬೆದರಿಕೆ ಹಾಕುತ್ತಿದ್ದ ವೇಳೆ ಜನರ ಸಹಾಯವನ್ನು ಪಡೆದು ಮೊದಲಿಗೆ ಕಾಂಪೌಂಡ್ ಹಿಂದಿನಿಂದ ಸೋನಾ ಸೇನಾಗೆ ಬಕೆಟ್‍ನಲ್ಲಿ ನೀರು ಹಾಕಿ ಮೇಲಕ್ಕೇತ್ತಿದ್ದಾರೆ. ಇತ್ತ ಅಗ್ನಿಶಾಮಕ ವಾಹನ ಬಂದು ಪತಿ ಸುನೀಲ್‍ಗೂ ಬೆಂಕಿ ನಂದಿಸುವ ಸೋಪಿನ ಹಾಯಿಸಿ ರಕ್ಷಣೆ ನಡೆಸಿದರು. ಇದನ್ನೂ ಓದಿ: ಒತ್ತುವರಿ ತೆರವಿಗೆ ವಿರೋಧ – ಪೆಟ್ರೋಲ್ ಸುರಿದು ಆತ್ಮಹತ್ಯೆ ಬೆದರಿಕೆ ಹಾಕಿದ ದಂಪತಿ
ಘಟನೆಗೆ ಸಂಬಂಧಿಸಿ ದಂಪತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆತ್ಮಹತ್ಯೆಗೆ ಯತ್ನ ಅಡಿಯಲ್ಲಿ ಹಾಗೂ ಸರ್ಕಾರಿ ಅಧಿಕಾರಿಗಳ ಕೆಲಸಕ್ಕೆ ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ಕೆ.ಆರ್.ಪುರಂ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಉದ್ದೇಶ ಪೂರ್ವಕವಾಗಿಯೇ ಟಿಪ್ಪು ಹೆಸರು ಬದಲಾಯಿಸಿದ್ದೇನೆ – ಸಿಂಹ ಗುಡುಗು