– ಕುಂಭಮೇಳ ಕಾಲ್ತುಳಿತ ಚರ್ಚೆಗೆ ಆಗ್ರಹಿಸಿದ ಸಂಸದರ ನಡೆಗೆ ಓಂ ಬಿರ್ಲಾ ಅಸಮಾಧಾನ
ನವದೆಹಲಿ: ಮಹಾ ಕುಂಭಮೇಳದಲ್ಲಿ (Maha Kumbh Mela) ಕಾಲ್ತುಳಿತ ಸಂಭವಿಸಿ 30 ಜನರು ಸಾವನ್ನಪ್ಪಿ, 90ಕ್ಕೂ ಅಧಿಕ ಮಂದಿ ಗಾಯಗೊಂಡ ಪ್ರಕರಣದ ಬಗ್ಗೆ ಸರ್ಕಾರ ಉತ್ತರ ನೀಡಬೇಕು ಎಂದು ಒತ್ತಾಯಿಸಿ ಘೋಷಣೆ ಕೂಗುತ್ತಿದ್ದ ವಿಪಕ್ಷಗಳ ಸಂಸದರ ವಿರುದ್ಧ ಸ್ಪೀಕರ್ ಓಂ ಬಿರ್ಲಾ (Om Birla) ಹರಿಹಾಯ್ದಿದ್ದಾರೆ.
Advertisement
ಲೋಕಸಭೆಯಲ್ಲಿ (Lok Sabha) ಮೂರನೇ ದಿನದ ಕಲಾಪ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷದ ಸಂಸದರು ಒಟ್ಟಾಗಿ ಪ್ರಕರಣಕ್ಕೆ ಸಂಬಧಿಸಿದಂತೆ ಸರ್ಕಾರ ಉತ್ತರ ನೀಡಬೇಕು ಎಂದು ಘೋಷಣೆ ಕೂಗಲು ಆರಂಭಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸ್ಪೀಕರ್ ಓಂ ಬಿರ್ಲಾ, ಜನರು ಅವರನ್ನು ಘೋಷಣೆ ಕೂಗಲು ಕಳುಹಿಸಿದ್ದರೆ ಕೂಗಲು ಬಿಡಿ, ಸದನ ಮುಂದುವರಿಯಲಿ ಎಂದು ಹೇಳಿದರು. ಇದನ್ನೂ ಓದಿ: ರೈಲು ನಿಲ್ಲೋದಕ್ಕೂ ಮುನ್ನ ಇಳಿಯಲು ಹೋಗಿ ಅವಘಡ – ಹಳಿಗೆ ಸಿಲುಕಿ 2 ಕಾಲು ಕಟ್, ಯುವಕ ಸಾವು
Advertisement
Advertisement
ಪ್ರಶ್ನೋತ್ತರ ಅವಧಿಯು ಸರ್ಕಾರದ ಹೊಣೆಗಾರಿಕೆಯನ್ನು ಸರಿಪಡಿಸುವ ಮಹತ್ವದ ಸಮಯವಾಗಿದೆ. ಸದನ ನಡೆಯಲು ಅವಕಾಶ ನೀಡುವಂತೆ ಓಂ ಬಿರ್ಲಾ ಮೊದಲು ವಿರೋಧ ಪಕ್ಷದ ಸದಸ್ಯರಿಗೆ ಮನವಿ ಮಾಡಿದರು. ಸಮಾಜವಾದಿ ಪಕ್ಷದ ಕೆಲವು ಸದಸ್ಯರು ವೇದಿಕೆಯ ಬಳಿ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದಾಗ, ಓಂ ಬಿರ್ಲಾ, ಸಾರ್ವಜನಿಕರು ನಿಮ್ಮನ್ನು ಟೇಬಲ್ ಒಡೆಯಲು ಕಳುಹಿಸಿಲ್ಲ, ಪ್ರಶ್ನೆಗಳನ್ನು ಕೇಳಲು ಕಳುಹಿಸಲಾಗಿದೆ. ದೇಶದ ಜನರು ನಿಮ್ಮನ್ನು ಘೋಷಣೆಗಳನ್ನು ಕೂಗಲು ಕಳುಹಿಸಿದ್ದರೆ, ಅದೇ ಕೆಲಸವನ್ನು ಮಾಡಿ ಎಂದು ಹೇಳಿದರು. ಇದನ್ನೂ ಓದಿ: ಅರ್ಧ ಎಂಜಿನ್ ಆಪ್ ಸರ್ಕಾರದಿಂದ ದೆಹಲಿ ಹಾಳಾಗಿದೆ: ಚಂದ್ರಬಾಬು ನಾಯ್ಡು
Advertisement
ನೀವು ಸದನವನ್ನು ನಡೆಸಲು ಬಯಸಿದರೆ ಹೋಗಿ ನಿಮ್ಮ ಆಸನದಲ್ಲಿ ಕುಳಿತುಕೊಳ್ಳಿ. ಪ್ರಶ್ನೋತ್ತರ ಅವಧಿಯ ನಂತರ ಪ್ರತಿಪಕ್ಷದ ಸದಸ್ಯರಿಗೆ ಮಾತನಾಡಲು ಹಾಗೂ ನಿಮಗೆ ಸಾಕಷ್ಟು ಸಮಯ ಮತ್ತು ಅವಕಾಶವನ್ನು ನೀಡಲಾಗುವುದು ಎಂದರು. ಇದೇ ವಿಚಾರಕ್ಕೆ ರಾಜ್ಯಸಭೆಯಲ್ಲಿ ಗದ್ದಲ ನಡೆಯಿತು. ವಿರೋಧ ಪಕ್ಷಗಳ ಎಲ್ಲ ಸಂಸದರು ರಾಜ್ಯಸಭೆಯಿಂದ ಹೊರನಡೆದರು. ಇದನ್ನೂ ಓದಿ: ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಪಕ್ಷಿ ಗಣತಿ- 253 ಪ್ರಬೇಧ ಪತ್ತೆ