ಬೆಂಗಳೂರು: ನನ್ನ ಹೆಸರಿಗೆ ಮಸಿ ಬಳಿಯಲು, ನನ್ನ ವಿರುದ್ದ ಹೊಟ್ಟೆ ಕಿಚ್ಚಿನಿಂದ ವಿಪಕ್ಷಗಳು ಮುಡಾ ಹಗರಣದಲ್ಲಿ (MUDA Scam) ರಾಜಕೀಯ ಮಾಡ್ತಿವೆ ಸಿಎಂ ಸಿದ್ದರಾಮಯ್ಯ (Karnataka CM Siddaramaiah) ಬಿಜೆಪಿ-ಜೆಡಿಎಸ್ ಅಹೋರಾತ್ರಿ ಧರಣಿ ವಿರುದ್ದ ಕಿಡಿಕಾರಿದ್ದಾರೆ.
ವಿಧಾನ ಪರಿಷತ್ ಕಲಾಪ ಪ್ರಾರಂಭವಾದ ಕೂಡಲೇ ವಿಪಕ್ಷಗಳು ಸದನದ ಬಾವಿಗಿಳಿದು ಮೂಡಾ ಹಗರಣ ಬಗ್ಗೆ ಚರ್ಚೆಗೆ ಅವಕಾಶ ಕೇಳಿದ್ರು. ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿ ಅವರು ವಿಷಯವೇ ಇಲ್ಲದ್ದನ್ನ ವಿಷಯ ಮಾಡ್ತಿದ್ದಾರೆ. ಸುಮ್ಮನೆ ಮುಡಾ ವಿಷಯ ಇಟ್ಟುಕೊಂಡು ಪ್ರತಿಭಟನೆ ಮಾಡ್ತಿದ್ದಾರೆ. ನಿಯಮಾವಳಿ ಪ್ರಕಾರವೇ ಸೈಟ್ ಪಡೆಯಲಾಗಿದೆ. ಕಾನೂನು ಪ್ರಕಾರವೇ ಎಲ್ಲಾ ಆಗಿದೆ. ಮುಡಾ ಸೈಟ್ ಕೊಟ್ಟಾಗ ಬಿಜೆಪಿಯೇ ಅಧಿಕಾರದಲ್ಲಿ ಇತ್ತು. ಅದರೂ ಈಗ ಪ್ರತಿಭಟನೆ ಮಾಡಿಸ್ತಿದ್ದಾರೆ ಅಂತ ವಿಪಕ್ಷಗಳ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಪ್ರೇಯಸಿಯೊಂದಿಗೆ ಹೆಡ್ ಕಾನ್‌ಸ್ಟೇಬಲ್ ಸರಸ ಸಲ್ಲಾಪ; ರೆಡ್‌ಹ್ಯಾಂಡಾಗಿ ಹಿಡಿದ ಪತ್ನಿ
ಅವರು ಕೊಟ್ರು, ನಾವು ತಗೊಂಡ್ವಿ!: ಮುಡಾ ಕೇಸ್ ತನಿಖೆಗೆ ನಿವೃತ್ತಿ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. ತನಿಖೆ ಮಾಡೋವಾಗ ಚರ್ಚೆ ಮಾಡೋದು ಸರಿಯಲ್ಲ ಅಂತ ಸಭಾಪತಿ ರೂಲಿಂಗ್ ಅನ್ನ ಸಮರ್ಥನೆ ಮಾಡಿಕೊಂಡರು. ಸೈಟ್ ತೆಗೆದುಕೊಂಡಿರೋದ್ರಲ್ಲಿ ನನ್ನ ತಪ್ಪಿಲ್ಲ. 50:50 ನಿಯಮ ಮಾಡಿದ್ದು ಬಿಜೆಪಿ ಅವಧಿಯಲ್ಲಿ. ನಮ್ಮ ಜಮೀನಿಗೆ ಪರ್ಯಾಯವಾಗಿ ನಾವು ಸೈಟ್ ಕೇಳಿದಾಗ ಮೂಡಾ ಸೈಟ್ ಕೊಟ್ಟಿದೆ. ನಾವು ಇದೇ ಜಾಗ ಕೊಡಿ ಅಂತ ನಾವು ಕೇಳಿರಲಿಲ್ಲ. ಅವರು ಕೊಟ್ಟರು, ನಾವು ತಗೊಂಡ್ವಿ ಅಂತ ತಿಳಿಸಿದರು. ಇದನ್ನೂ ಓದಿ: ಜೈಲಿಂದ ಹೊರಬಂದ ಬಳಿಕ ಹೆಚ್‌ಡಿಕೆ ಭೇಟಿಯಾದ ದೇವರಾಜೇಗೌಡ – ಪೆನ್‌ಡ್ರೈವ್ ಕೇಸ್ ಬಗ್ಗೆ ಮಾತುಕತೆ
ವಿಪಕ್ಷಗಳ ಪ್ರತಿಭಟನೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ನನ್ನ ಹೆಸರಿಗೆ ಮಸಿ ಬಳಿಯಲು ಹೀಗೆ ಮಾಡ್ತಿದ್ದಾರೆ. 40 ವರ್ಷಗಳಿಂದ ನನ್ನ ಮೇಲೆ ಯಾವುದೇ ಕಪ್ಪು ಚುಕ್ಕಿ ಇಲ್ಲ. ಹೀಗಾಗಿ ವಿಪಕ್ಷಗಳಿಗೆ ಹೊಟ್ಟೆ ಕಿಚ್ಚು. ಹೊಟ್ಟೆ ಕಿಚ್ಚಿಗೆ ಹೀಗೆ ಮಾಡ್ತಿದ್ದಾರೆ. ಕಾನೂನು ರೀತಿ ಸೈಟ್ ಹಂಚಿಕೆ ಆಗಿದೆ ಎಂದು ಮುಡಾ ಸೈಟ್ ಹಂಚಿಕೆಯನ್ನು ಸಮರ್ಥನೆ ಮಾಡಿಕೊಂಡರು.