ಇಂದಿರಾ ವಿರುದ್ಧವೂ ಆಗಿತ್ತು ‘ಮಹಾಮೈತ್ರಿ’ – 1971 ರ ಚುನಾವಣೆ ಫಲಿತಾಂಶ ಏನಾಯ್ತು?

Public TV
3 Min Read
Lok Sabha Elections 1971

– ಕರ್ನಾಟಕದಲ್ಲಿ 27 ಕ್ಕೆ 27 ಕ್ಷೇತ್ರ ಗೆದ್ದು ಕಾಂಗ್ರೆಸ್‌ ದಾಖಲೆ
– ಗರೀಬಿ ಹಟಾವೋ v/s ಇಂದಿರಾ ಹಟಾವೋ

ಪಬ್ಲಿಕ್‌ ಟಿವಿ ವಿಶೇಷ
ಗಿನ ರಾಜಕೀಯ ಪರಿಸ್ಥಿತಿಯನ್ನು ನೆನಪಿಸುವಂತಿತ್ತು ದೇಶದ 5ನೇ ಲೋಕಸಭಾ ಚುನಾವಣೆ. ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಆಡಳಿತದ ವಿರುದ್ಧ ವಿಪಕ್ಷಗಳು ಮಹಾಮೈತ್ರಿ ಮಾಡಿಕೊಂಡಿರುವಂತೆಯೇ, 1971 ರ ಲೋಕಸಭಾ ಚುನಾವಣೆಯಲ್ಲೂ ಆಗಿನ ಪ್ರಧಾನಿ ಇಂದಿರಾ ಗಾಂಧಿ (Indira Gandhi) ವಿರುದ್ಧ ವಿಪಕ್ಷಗಳು ಒಗ್ಗಟ್ಟಾಗಿ ಚುನಾವಣೆ ಎದುರಿಸಿದ್ದವು. ಆಡಳಿತ ವಿರೋಧಿ ಅಲೆ, ಪಕ್ಷ ವಿಭಜನೆ, ಆಂತರಿಕ ಭಿನ್ನಾಭಿಪ್ರಾಯ ಎದುರಿಸಲು 15 ತಿಂಗಳ ಮುಂಚಿತವಾಗಿ ನಾಲ್ಕನೇ ಲೋಕಸಭೆಯನ್ನು ವಿಸರ್ಜಿಸಿ ಇಂದಿರಾ ಗಾಂಧಿ ಅವರು ಚುನಾವಣೆಗೆ ಹೋದರು.

14 ಬ್ಯಾಂಕ್‌ಗಳ ರಾಷ್ಟ್ರೀಕರಣ
ಆರ್ಥಿಕ ಸ್ಥಿರತೆ ದೃಷ್ಟಿಯಿಂದ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ಐದನೇ ಚುನಾವಣೆಗೂ ಮುನ್ನ ಅಂದರೆ 1969 ರ ಜುಲೈ 19 ರಂದು 14 ಬ್ಯಾಂಕ್‌ಗಳನ್ನು ರಾಷ್ಟ್ರೀಕರಣಗೊಳಿಸಿದ್ದರು. ಇದನ್ನೂ ಓದಿ: ಲೋಕಸಭೆ ಚುನಾವಣೆಗಳು ಭಾರತದಲ್ಲಿ ನಡೆದಿದ್ದೆಷ್ಟು ದಿನ..?

indira gandhi

ಒಂದು ದೇಶ, ಒಂದು ಚುನಾವಣೆಗೆ ಬ್ರೇಕ್‌!
ಸ್ವತಂತ್ರ ಭಾರತದ ಇತಿಹಾಸದಲ್ಲಿ ಲೋಕಸಭೆ ಮೊದಲ ಬಾರಿಗೆ 1971 ರಲ್ಲಿ (1971 Lok Sabha Election) ಅವಧಿಪೂರ್ವ ಚುನಾವಣೆ ಎದುರಿಸಿತ್ತು. ಅಲ್ಲಿಯವರೆಗೂ ಸಹಜವಾಗಿ ಜಾರಿಯಲ್ಲಿದ್ದ ‘ಒಂದು ದೇಶ, ಒಂದು ಚುನಾವಣೆ’ ಪದ್ಧತಿಗೆ ಬ್ರೇಕ್‌ ಬಿದ್ದಿತ್ತು.

ಕಾಂಗ್ರೆಸ್‌ ವಿಭಜನೆ
ಪಕ್ಷದಲ್ಲಿ ಇಂದಿರಾ ಗಾಂಧಿ ಸರ್ವಾಧಿಕಾರಿ ಧೋರಣೆಯಿಂದ ವರ್ತಿಸುತ್ತಿದ್ದಾರೆಂಬ ಆರೋಪ ಕೇಳಿಬಂದಿತ್ತು. ಆಂತರಿಕ ಭಿನ್ನಾಭಿಪ್ರಾಯದ ಕಟ್ಟೆಯೊಡೆದು 1969 ರಲ್ಲಿ ಕಾಂಗ್ರೆಸ್‌ ವಿಭಜನೆಯಾಯಿತು. ಇಂದಿರಾ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ (ಆರ್‌ – ರಿಕ್ವಿಜಿಷನ್‌) ಹಾಗೂ ಕೆ.ರಾಮರಾಜ್‌ ನೇತೃತ್ವದಲ್ಲಿ ಕಾಂಗ್ರೆಸ್‌ (ಒ- ಆರ್ಗನೈಸೇಷನ್‌) ಸೃಷ್ಟಿಯಾಯಿತು. ವಿಭಜನೆಗೊಂಡ 705 ಸದಸ್ಯರಲ್ಲಿ 446 ಮಂದಿ ಇಂದಿರಾ ನೇತೃತ್ವದ ಬಣವನ್ನು ಬೆಂಬಲಿಸಿದರು. ಇದನ್ನೂ ಓದಿ: ಹಲವು ಸಮಸ್ಯೆಗಳ ನಡುವೆ ಯಶಸ್ವಿಯಾಗಿ 3ನೇ ಲೋಕಸಭಾ ಚುನಾವಣೆ ನಡೆಸಿದ ಭಾರತ!

ಇಂದಿರಾ ಮಣಿಸಲು ‘ಮಹಾಮೈತ್ರಿ’
ಆಗಿನ ಪ್ರಧಾನಿ ಇಂದಿರಾ ಗಾಂಧಿ ಮಣಿಸಲು ಸಿ.ರಾಜಗೋಪಾಲಚಾರಿ ನೇತೃತ್ವದ ಸ್ವತಂತ್ರ ಪಕ್ಷ, ಕಾಂಗ್ರೆಸ್‌ (ಒ), ಭಾರತೀಯ ಜನಸಂಘ, ಎಡಪಕ್ಷಗಳು ಹಾಗೂ ಸಂಯುಕ್ತ ಪ್ರಜಾ ಸೋಷಿಯಲಿಸ್ಟ್‌ ಪಕ್ಷಗಳು ‘ಮಹಾಮೈತ್ರಿ’ ಮಾಡಿಕೊಂಡಿದ್ದವು.

1971 lok sabha election indira gandhi

ಗರೀಬಿ ಹಟಾವೋ
ಜನಸಂಖ್ಯಾ ಹೆಚ್ಚಳ, ಆರ್ಥಿಕ ಹಿಂಜರಿತ, ಆಹಾರದ ಅಭಾವ, ಬಡತನ ದೇಶವನ್ನು ಇನ್ನಿಲ್ಲದಂತೆ ಕಾಡಿತ್ತು. ಈ ಹೊತ್ತಿನಲ್ಲಿ 5 ನೇ ಲೋಕಸಭಾ ಚುನಾವಣೆ ಎದುರಾಯಿತು. ‘ಗರೀಬಿ ಹಟಾವೋ, ದೇಶ್‌ ಬಚಾವೋ’ (ಬಡತನ ತೊಡೆದುಹಾಕಿ, ದೇಶವನ್ನು ಉಳಿಸಿ) ಎಂಬ ಘೋಷವಾಕ್ಯದೊಂದಿಗೆ ಇಂದಿರಾ ಗಾಂಧಿ ಅವರು ಚುನಾವಣಾ ಪ್ರಚಾರ ನಡೆಸಿದರು.

ಇಂದಿರಾ ಹಟಾವೋ
ಮಹಾಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್‌ (ಒ), ಜನಸಂಘ, ಸ್ವತಂತ್ರ ಪಕ್ಷ ಮತ್ತು ಸಂಯುಕ್ತ ಸಮಾಜವಾದಿ ಪಕ್ಷಗಳು ‘ಇಂದಿರಾ ಹಟಾವೋ’ (ಇಂದಿರಾ ಕೆಳಗಿಳಿಸಿ) ಎಂಬ ಕೌಂಟರ್‌ ಘೋಷವಾಕ್ಯದೊಂದಿಗೆ ಇಂದಿರಾ ಗಾಂಧಿ ವಿರುದ್ಧ ಕಣಕ್ಕಿಳಿದವು.

10 ದಿನದ ಚುನಾವಣೆ
1971 ರ ಸಾರ್ವತ್ರಿಕ ಚುನಾವಣೆ 10 ದಿನಗಳ ಕಾಲ ನಡೆಯಿತು. ಮಾರ್ಚ್‌ 1 ರಿಂದ 10 ರ ವರೆಗೆ ಮತದಾನ ನಡೆಯಿತು.

indira gandhi oath 1971

ಮತದಾರರ ವಿವರ
54,79,49,809 – ದೇಶದ ಒಟ್ಟು ಜನಸಂಖ್ಯೆ.
27,41,89,132 – ಒಟ್ಟು ಮತದಾರರ ಸಂಖ್ಯೆ
14,35,64,829 – ಪುರುಷ ಮತದಾರರು
13,06,24,303 – ಮಹಿಳಾ ಮತದಾರರು

518 ಕ್ಷೇತ್ರಗಳು
ಒಟ್ಟು 27 ರಾಜ್ಯಗಳ 518 ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಈ ಪೈಕಿ ಎಸ್‌ಸಿ ಮೀಸಲು 76 ಹಾಗೂ ಎಸ್‌ಟಿ 36 ಮೀಸಲು ಕ್ಷೇತ್ರಗಳಿದ್ದವು. ಇದನ್ನೂ ಓದಿ: ಕೇವಲ 5 ದಿನದ ಚುನಾವಣೆ; ಕಾಂಗ್ರೆಸ್‌ ಕುಸಿದರೂ ಗೆದ್ದ ಇಂದಿರಾ

55% ಮತದಾನ
ಒಟ್ಟು 3,42,918 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಚುನಾವಣೆಯಲ್ಲಿ 55.27% ಮತದಾನ ಆಗಿತ್ತು. 15,15,36,802 ಮಂದಿ ಮತ ಚಲಾಯಿಸಿದ್ದರು.

ಅಭ್ಯರ್ಥಿಗಳ ವಿವರ
2,784 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು.

ಇಂದಿರಾಗೆ ಭರ್ಜರಿ ಗೆಲುವು
ಇಂದಿರಾ ಗಾಂಧಿ ಮಟ್ಟಹಾಕುವ ಹುಮ್ಮಸ್ಸಿನಲ್ಲಿದ್ದ ‘ಮಹಾಮೈತ್ರಿ’ ಕೂಟಕ್ಕೆ ಚುನಾವಣಾ ಫಲಿತಾಂಶ ಶಾಕ್‌ ನೀಡಿತು. ಇಂದಿರಾ ನೇತೃತ್ವದ ಕಾಂಗ್ರೆಸ್‌ (ಆರ್‌) ಬಣ ಅಗಾಧ ಬಹುಮತದೊಂದಿಗೆ ಗೆಲುವು ದಾಖಲಿಸಿತು. 352 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ (ಆರ್‌) ಗೆದ್ದಿತು. ಬಿಜೆಎಸ್‌ 22, ಸಿಪಿಐ 23, ಸಿಪಿಎಂ 25, ಎನ್‌ಸಿಒ 16, ಪಿಎಸ್‌ಪಿ 2, ಎಸ್‌ಎಸ್‌ಪಿ 3, ಎಸ್‌ಡಬ್ಲ್ಯೂಎ 8 ಸ್ಥಾನಗಳನ್ನು ಗೆದ್ದವು. ಪಕ್ಷೇತರರಾಗಿ ಸ್ಪರ್ಧಿಸಿದ್ದ 1,134 ಅಭ್ಯರ್ಥಿಗಳ ಪೈಕಿ 14 ಮಂದಿ ಈ ಚುನಾವಣೆಯಲ್ಲಿ ಜಯ ಸಾಧಿಸಿದರು.

ಕರ್ನಾಟಕದಲ್ಲಿ ಕಾಂಗ್ರೆಸ್‌ ಕ್ಲೀನ್‌ ಸ್ವೀಪ್‌
ರಾಜ್ಯದಲ್ಲಿ ಈಗ ಬಿಜೆಪಿ-ಜೆಡಿ(ಎಸ್) ಮೈತ್ರಿಕೂಟವು ಎಲ್ಲಾ 28 ಲೋಕಸಭಾ ಸ್ಥಾನಗಳನ್ನು ಗೆಲ್ಲಬೇಕು ಎಂದು ಪಣತೊಟ್ಟಿವೆ. 1971 ರಲ್ಲಿ ಕಾಂಗ್ರೆಸ್ ಈ ಸಾಧನೆಯನ್ನು ಒಮ್ಮೆ ಸಾಧಿಸಿ ತೋರಿಸಿದೆ. ಈ ಚುನಾವಣೆಯಲ್ಲಿ ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್, ತಮಿಳುನಾಡಿನ ಕೆ. ಕಾಮರಾಜ್ ಮತ್ತು ಕರ್ನಾಟಕದಲ್ಲಿ ಎಸ್. ನಿಜಲಿಂಗಪ್ಪ ಅವರಿಂದ ತೀವ್ರ ವಿರೋಧ ಎದುರಿಸಿತ್ತು. ಕರ್ನಾಟಕದಲ್ಲಿ 27 ಕ್ಕೆ 27 ಕ್ಷೇತ್ರಗಳನ್ನೂ ಗೆದ್ದು ಕಾಂಗ್ರೆಸ್‌ ಆರ್ಭಟಿಸಿತ್ತು.

Share This Article