ಮಂಡ್ಯ: ಮುಡಾ ಹಗರಣ, ವಾಲ್ಮೀಕಿ ಹಗರಣ ಆಗಿದೆ. ತಮ್ಮ ತಪ್ಪುಗಳನ್ನ ಮುಚ್ಚಿಕೊಳ್ಳಲು, ವಿಷಯ ಡೈವರ್ಟ್ ಮಾಡಲು ವಿಪಕ್ಷ ನಾಯಕರನ್ನ ಟಾರ್ಗೆಟ್ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಕಿಡಿಕಾರಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸತ್ಯಶೋಧನಾ ಸಮಿತಿ ವರದಿ ಸ್ವೀಕಾರ ಹಿನ್ನೆಲೆ ಆಗಮಿಸಿದ್ದ ಬಿವೈ ವಿಜಯೇಂದ್ರ ಮಾತನಾಡಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರಿಗೆ ಅಭದ್ರತೆ ಕಾಡುತ್ತಿದೆ. ಮುಡಾ ಹಗರಣ (MUDA Scam), ವಾಲ್ಮೀಕಿ ಹಗರಣ (Valmiki Scam) ಆಗಿದೆ. ಸರ್ಕಾರದ ಮೇಲೆ ಭ್ರಷ್ಟಾಚಾರ ಆರೋಪಗಳು ಕೇಳಿಬರ್ತಿವೆ. ಭ್ರಷ್ಟಾಚಾರ ಮುಕ್ತ ಆಡಳಿತ ಕೊಡಲು ಈ ಸರ್ಕಾರ ವಿಫಲವಾಗಿದೆ. ರಾಜ್ಯದ ಜನರಿಗೆ ಗೊತ್ತಿದೆ. ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ. ತಮ್ಮ ತಪ್ಪುಗಳನ್ನ ಮುಚ್ಚಿಕೊಳ್ಳಲು, ವಿಷಯ ಡೈವರ್ಟ್ ಮಾಡಲು ವಿಪಕ್ಷ ನಾಯಕರನ್ನ ಟಾರ್ಗೆಟ್ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಸಮಾಜ ವಿರೋಧಿ ಚಟುವಟಿಕೆಗಳಿಗೆ ಬೆಂಬಲ ಕೊಡ್ತಿದ್ದಾರೆ ಎಂದರು.ಇದನ್ನೂ ಓದಿ: ತುಂಗಭದ್ರಾ ಜಲಾಶಯ ಭರ್ತಿಯಾದರೂ 1.75 ಲಕ್ಷ ಎಕರೆ ಜಮೀನಿಗೆ ನೀರಿಲ್ಲ – ರೈತರಿಂದ ಪ್ರತಿಭಟನೆ
Advertisement
Advertisement
ನಾಗಮಂಗಲ-ದಾವಣಗೆರೆ ಪ್ರಕರಣ:
ಕೆಲವು ತಿಂಗಳಿನಿಂದ ರಾಜ್ಯದಲ್ಲಿ ಒಂದಾದ ಮೇಲೆ ಒಂದು ಘಟನೆ ನಡೆಯುತ್ತಿದೆ. ನಾಗಮಂಗಲ ಕೇಸ್ ಭಯದಿಂದ ಜನರು ಊರು ಬಿಟ್ಟಿದ್ದಾರೆ. ನಿರಪರಾಧಿಗಳ ಮೇಲೆ ಕೇಸ್ ಹಾಕಲಾಗಿದೆ. ಕೃತ್ಯ ಮಾಡಿರೋರ ಮೇಲೆ ಕೇಸ್ ಹಾಕಿಲ್ಲ. ಇದರಲ್ಲಿ ಪೊಲೀಸರ ವೈಫಲ್ಯ ಇದೆ. ಸರ್ಕಾರದ ವೈಫಲ್ಯವೂ ಇದೆ. ಇಂತಹ ಕೇಸ್ ಬಂದಾಗ ದರ್ಶನ್ ಪ್ರಕರಣ ತಂದು ಬಿಡುತ್ತಿದ್ದರು. ಈಗ ಮುನಿರತ್ನ ಹಿಡಿದುಕೊಂಡು ಕೂತಿದ್ದಾರೆ. ಸಿಎಂ ಪರಿಹಾರ ಕೊಡೋದಾಗಿ ಹೇಳಿದ್ದಾರೆ. ಈ ಬಗ್ಗೆಯೂ ವರದಿಯಲ್ಲಿ ಉಲ್ಲೇಖ ಮಾಡಿದ್ದೇವೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ನಾಗಮಂಗಲದಲ್ಲಿ ಇತ್ತೀಚೆಗೆ ಕೋಮುಗಲಭೆ (Nagamangala Violence) ನಡೆದಿತ್ತು. ಹಿಂದೂ ಯುವಕರು ಗಣೇಶ ವಿಸರ್ಜನೆ ಮಾಡುವ ಸಮಯದಲ್ಲಿ ಏಕಾಏಕಿ ಮೆರವಣಿಗೆ ಮೇಲೆ ಒಂದು ಕೋಮಿನ ಜನರು ದಾಳಿ ಮಾಡಿದ್ದರು. ಅವರೆಲ್ಲ ದೇಶದ್ರೋಹಿಗಳು. ಕತ್ತಿ, ತಲವಾರ್, ಪೆಟ್ರೋಲ್ ಬಾಂಬ್ ಎಸೆದಿದ್ದರು. ಹಿಂದೂಗಳ ಅಂಗಡಿಗಳಿಗೆ ಬೆಂಕಿ ಹಚ್ಚಿದ್ದರು. ಇವೆಲ್ಲ ಪೊಲೀಸರ ಕಣ್ಣ ಮುಂದೆಯೇ ನಡೆದಿದೆ. ಘಟನೆಯಾದ ಮರು ದಿನ ನಾನು, ವಿಪಕ್ಷ ನಾಯಕರು ಭೇಟಿ ನೀಡಿದ್ದೇವೆ. ನಾವು ಎಲ್ಲರನ್ನು ಮಾತಾಡಿಸಿದ್ದೆವು. ಬಳಿಕ ಸತ್ಯಶೋಧನಾ ಸಮಿತಿಯನ್ನು ಅಶ್ವಥ್ ನಾರಾಯಣ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ದೇವೆ. ಸಮಿತಿ ಭೇಟಿ ಮಾಡಿ ಸತ್ಯಾಸತ್ಯತೆ ಬಗ್ಗೆ ವರದಿ ಕೊಟ್ಟಿದ್ದಾರೆ. ಇದು ವ್ಯವಸ್ಥಿತವಾದ ಪಿತೂರಿ. ಹೇಗೆ ಘಟನೆ ಆಯ್ತು ಅಂತಾ ವರದಿ ಕೊಟ್ಟಿದ್ದಾರೆ ಎಂದು ತಿಳಿಸಿದರು.
Advertisement
ನಾಗಮಂಗಲ (Nagamangala), ದಾವಣಗೆರೆ (Davanagere) ಘಟನೆ ಸರಿಯಾಗಿ ತನಿಖೆ ಆಗಬೇಕು. ಅಲ್ಪಸಂಖ್ಯಾತ ತುಷ್ಟೀಕರಣ ಬಿಡಿ. ಅಲ್ಪಸಂಖ್ಯಾತ ಒಲೈಕೆ ರಾಜಕೀಯ ಬಿಡಿ. ಎರಡು ಘಟನೆಗಳನ್ನು ಎನ್‌ಐಎಯಿಂದ ತನಿಖೆ ಮಾಡಿಸಿ. ಪೊಲೀಸರು ಮುಗ್ದ ಹಿಂದೂಗಳನ್ನು ಟಾರ್ಗೆಟ್ ಮಾಡಿ, ಕೇಸ್ ಹಾಕ್ತಿದ್ದಾರೆ. ಹೀಗಾಗಿ ಕೂಡಲೇ ಸರ್ಕಾರ ನಾಗಮಂಗಲ, ದಾವಣಗೆರೆ ಕೇಸ್ ಎನ್‌ಐಎ ತನಿಖೆಗೆ ವಹಿಸಬೇಕು. ಇಂತಹ ಸರ್ಕಾರದ ವಿರುದ್ಧ ನಾವು ಸುಮ್ಮನೆ ಕುಳಿತರೆ ದೇವರು ನಮ್ಮನ್ನ ಮೆಚ್ಚುವುದಿಲ್ಲ. ಮುಂದೆ ಏನು ಮಾಡಬೇಕು ಎಂದು ಹಿರಿಯರು ಕೂತು ಮುಂದಿನ ತೀರ್ಮಾನ ಮಾಡುತ್ತೇವೆ ಎಂದು ಸಿಎಂಗೆ ವಿಜಯೇಂದ್ರ ಆಗ್ರಹಿಸಿದರು.ಇದನ್ನೂ ಓದಿ: ಮತ್ತೊಂದು ಬಾಲಿವುಡ್ ಪ್ರಾಜೆಕ್ಟ್ ಒಪ್ಪಿಕೊಂಡ ನಟಿ- ‘ಆಶಿಕಿ 2’ ಹೀರೋಗೆ ಸಮಂತಾ ಜೋಡಿ
ತಿರುಪತಿ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ಪ್ರಕರಣ:
ಫೊರೆನ್ಸಿಕ್ ರಿಪೋರ್ಟ್(Forensic Report), ಮಾಧ್ಯಮಗಳ ವರದಿ ನೋಡಿದ್ರೆ ಇದು ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿರುವ ವಿಷಯವಾಗಿದೆ. ಅಂಧ್ರ ರಾಜ್ಯ ಸರ್ಕಾರ ಈ ಬಗ್ಗೆ ಸೂಕ್ತ ತನಿಖೆ ಮಾಡಿ ಕ್ರಮ ತೆಗೆದುಕೊಳ್ಳಬೇಕು. ಸತ್ಯ ಹೊರಗೆ ಬರಬೇಕು ಎಂದು ಹೇಳಿದ್ದಾರೆ.