– ಅಧಿಕಾರಕ್ಕಾಗಿ ಅಲ್ಲ: ಸಭೆಯಲ್ಲಿ ಒಗ್ಗಟ್ಟು ಪ್ರದರ್ಶಿಸಿದ ವಿಪಕ್ಷಗಳು
ಪಾಟ್ನಾ: ಲೋಕಸಭಾ ಚುನಾವಣೆ (Lok Sabha Election) ಹತ್ತಿರವಾಗುತ್ತಿದ್ದಂತೆಯೇ ಪ್ರತಿಪಕ್ಷಗಳು (Opposition) ಮೈಕೊಡವಿ ಎದ್ದಿವೆ. ಬಿಜೆಪಿ (BJP) ವಿರುದ್ಧ ಪರಿಣಾಮಕಾರಿ ಒಕ್ಕೂಟ ರಚಿಸಿ ಹೋರಾಟ ನಡೆಸುವ ಕುರಿತು ಮೊದಲ ಹೆಜ್ಜೆ ಇಟ್ಟಿವೆ.
ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಏಕೈಕ ಗುರಿಯೊಂದಿಗೆ ಬಿಹಾರ ರಾಜಧಾನಿ ಪಾಟ್ನಾದಲ್ಲಿ (Patna) ವಿಪಕ್ಷ ನಾಯಕರು ಸಭೆ ಸೇರಿದರು. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ನಿತೀಶ್ ಕುಮಾರ್, ಲಾಲೂ ಪ್ರಸಾದ್ ಯಾದವ್, ಮಮತಾ ಬ್ಯಾನರ್ಜಿ, ಶರದ್ ಪವಾರ್, ಹೇಮಂತ್ ಸೊರೇನ್, ಉದ್ಧವ್ ಠಾಕ್ರೆ, ಸೀತಾರಾಂ ಯೆಚೂರಿ, ಅಖಿಲೇಶ್ ಯಾದವ್, ಎಎಪಿಯ ರಾಘವ್ ಚಡ್ಡಾ, ಮೆಹಬೂಬಾ ಮುಫ್ತಿ ಸೇರಿ 15 ಪಕ್ಷಗಳ ರಾಜಕೀಯ ಮುಖಂಡರು ಸಭೆ ಸೇರಿ, ಮೋದಿ ಸರ್ಕಾರವನ್ನು ಗದ್ದುಗೆಯಿಂದ ಇಳಿಸುವ ಬಗ್ಗೆ ಮಹತ್ವದ ಚರ್ಚೆ ನಡೆಸಿದರು.
Advertisement
Advertisement
ಕರ್ನಾಟಕ ಗೆಲುವಿನ ಜೋಶ್‌ನಲ್ಲಿರುವ ಕಾಂಗ್ರೆಸ್ ನಾಯಕರು, ನಾವೆಲ್ಲಾ ಒಗ್ಗೂಡಿದಲ್ಲಿ ಮೋದಿಯನ್ನು ಮನೆಗೆ ಕಳಿಸೋದು ದೊಡ್ಡ ವಿಚಾರವಲ್ಲ. ನಾವೆಲ್ಲಾ ಒಗ್ಗೂಡಿ ಹೋರಾಟ ನಡೆಸೋಣ ಎಂದು ಕರೆ ನೀಡಿದರು. ಇದೇ ವೇಳೆ ಸಭೆಯಲ್ಲಿ ತಮ್ಮೊಳಗೆ ಇರುವ ತಿಕ್ಕಾಟದ ಬಗ್ಗೆಯೂ ಚರ್ಚೆ ನಡೆದಿದೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ-ಕಾಂಗ್ರೆಸ್ ನಡುವೆ ಸೆಣಸಿದೆ. ದೆಹಲಿ, ಪಂಜಾಬ್‌ನಲ್ಲಿ ಎಎಪಿ ಮತ್ತು ಕಾಂಗ್ರೆಸ್ ನಡುವಿನ ತಿಕ್ಕಾಟದ ಬಗ್ಗೆ ಚರ್ಚೆ ನಡೆದಿದೆ. ಇದನ್ನೂ ಓದಿ: ಇನ್ಫೋಸಿಸ್ ಸುಧಾಮೂರ್ತಿಗೆ ಬಾಲ ಸಾಹಿತ್ಯ ಪುರಸ್ಕಾರ
Advertisement
ಈ ಸಭೆಯಲ್ಲಿ ಯಾವುದೇ ಪ್ರಮುಖ ನಿರ್ಧಾರ ಹೊರಬಿದ್ದಿಲ್ಲ. ಶೀಘ್ರವೇ ಶಿಮ್ಲಾದಲ್ಲಿ 2 ದಿನಗಳ ಸಭೆ ನಡೆಸಲು ಇಂದಿನ ಮೀಟಿಂಗ್‌ನಲ್ಲಿ ತೀರ್ಮಾನಿಸಲಾಗಿದೆ. ಶಿಮ್ಲಾ ಸಭೆಯಲ್ಲಿ ಸಂಚಾಲಕರನ್ನು ಆಯ್ಕೆ ಮಾಡುವ ಸಂಭವ ಇದೆ. ಆದರೆ 80 ಲೋಕಸಭಾ ಸ್ಥಾನಗಳಿರುವ ಉತ್ತರ ಪ್ರದೇಶದಿಂದ ಕೇವಲ ಸಮಾಜವಾದಿ ಪಕ್ಷ ಮಾತ್ರ ಈ ಕೂಟದಲ್ಲಿ ಕಾಣಿಸಿಕೊಂಡಿರೋದು ಚರ್ಚೆಗೆ ಗ್ರಾಸವಾಗಿದೆ.
Advertisement
ಈ ಸಭೆಗೆ ಬಿಎಸ್‌ಪಿ ನಾಯಕಿ ಮಾಯಾವತಿಯನ್ನು ಆಹ್ವಾನಿಸಿಲ್ಲ. ಕರ್ನಾಟಕದ ಜೆಡಿಎಸ್, ಆಂಧ್ರದ ವೈಎಸ್‌ಆರ್, ತೆಲುಗುದೇಶಂ, ತೆಲಂಗಾಣದ ಬಿಆರ್‌ಎಸ್, ಒಡಿಶಾದ ಬಿಜೆಡಿ ಈ ಕೂಟದಲ್ಲಿ ಕಾಣಿಸಿಕೊಂಡಿಲ್ಲ. ಇವರಿಗೆ ಜೆಡಿಯು ಕೂಡ ಆಹ್ವಾನ ನೀಡಿಲ್ಲ. ಈ ಪಕ್ಷಗಳನ್ನು ಹೊರಗಿಟ್ಟು ಬಿಜೆಪಿ ವಿರುದ್ಧ ಗೆಲ್ಲುವುದು ಸಾಧ್ಯವೇ ಎಂಬ ಪ್ರಶ್ನೆಯೂ ಈಗ ಎದ್ದಿದೆ. ಇದನ್ನೂ ಓದಿ: ವಿಧಾನ ಪರಿಷತ್ ಚುನಾವಣೆ – ಜಗದೀಶ್ ಶೆಟ್ಟರ್ ಸೇರಿ ಕಾಂಗ್ರೆಸ್‌ನ ಮೂವರೂ ಅವಿರೋಧ ಆಯ್ಕೆ
ಇದು ಆರಂಭ ಮಾತ್ರ ಆಗಿದ್ದು, ಮುಂದಿನ ದಿನಗಳಲ್ಲಿ ಏನು ಬೇಕಾದರೂ ಆಗಬಹುದು. ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ಮಾಡಿಕೊಳ್ಳುವ ಎಲ್ಲಾ ಸಾಧ್ಯತೆಗಳು ಗೋಚರಿಸುತ್ತಿದೆ.