– ಸರ್ಕಾರ ಹಿಂದೂಗಳನ್ನ 2ನೇ ದರ್ಜೆಯ ಪ್ರಜೆಗಳನ್ನಾಗಿ ಕಾಣ್ತಿದೆ ಎಂದ ಸುಧಾಕರ್
ಚಿಕ್ಕಬಳ್ಳಾಪುರ: ಮುಂದಿನ ಸಂಸತ್ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ವಕ್ಫ್ ಬೋರ್ಡ್ ಎಂಬ ರಾಕ್ಷಸನನ್ನ ಸಂಹಾರ ಮಾಡ್ತಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ (R. Ashok) ಗುಡುಗಿದರು.
ನಗರದಲ್ಲಿ ವಕ್ಫ್ ಬೋರ್ಡ್‌ನಿಂದ (Waqf Board) ಶಾಲೆ, ದೇವಸ್ಥಾನ ಆಸ್ತಿ ಅತಿಕ್ರಮಣ ಖಂಡಿಸಿ ಚಿಕ್ಕಬಳ್ಳಾಪುರ ಬಿಜೆಪಿ ಘಟಕ ಬೃಹತ್ ಪ್ರತಿಭಟನೆ ನಡೆಸಿತು. ಈ ವೇಳೆ ಮಾತನಾಡಿದ ಆರ್. ಅಶೋಕ್, ವಕ್ಫ್ ಬೋರ್ಡ್ ಎಂಬುದು ತಿಮಿಂಗಲ, ಪಿಶಾಚಿ, ಕೊಳ್ಳಿ ದೆವ್ವ, ರಾಕ್ಷಸ ಇದ್ದ ಹಾಗೆ. ಈ ವಕ್ಫ್ ಬೋರ್ಡ್ ಎಂಬ ರಾಕ್ಷಸನನ್ನು ಪ್ರಧಾನಿ ಮೋದಿ ಸಂಹಾರ ಮಾಡ್ತಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: PublicTV Explainer: ಆಗಸದಲ್ಲೂ ಹಾರುತ್ತೆ, ನೀರಲ್ಲೂ ಲ್ಯಾಂಡ್ ಆಗುತ್ತೆ; ಏನಿದು ಸೀ ಪ್ಲೇನ್? – ಕರ್ನಾಟಕಕ್ಕೂ ಜಲ ವಿಮಾನ ಬರುತ್ತಾ?
ವಕ್ಫ್ ಕೊಳ್ಳಿ ದೆವ್ವ ಇದ್ದ ಹಾಗೆ, ಅವರು ಕಾಲಿಟ್ಟ ಜಾಗವೆಲ್ಲ ಅವರದ್ದೇ ಅಂತಾರೆ. ಇಂತಹ ಬೋರ್ಡ್ ಇರಬೇಕಾ? ಖಂಡಿತಾ ವಜಾ ಆಗಬೇಕು. ಹಿಂದೂ, ಬೌದ್ಧರು, ಕ್ರೈಸ್ತರಿಗಿಲ್ಲದ ವಿಶೇಷ ಸ್ಥಾನಮಾನ ಇವರಿಗೆ ಯಾಕೆ? ಅಂಬೇಡ್ಕರ್ ಸಂವಿಧಾನ ಇವರಿಗೆ ಅನ್ವಯ ಆಗಲ್ವಾ? ಇದು ಕಾಂಗ್ರೆಸ್ ಮನೆಹಾಳು ಬುದ್ದಿ ಹಾಗಾಗಿ ಅಧಿವೇಶನದಲ್ಲಿ ನಾವು ಸಹ ವಕ್ಫ್ ಬೋರ್ಡ್ ವಜಾ ಮಾಡಬೇಕು ಅಂತ ಹೋರಾಟ ಮಾಡ್ತೇವೆ ಎಂದು ಗುಡುಗಿದರು. ಇದನ್ನೂ ಓದಿ: ಸರ್ಕಾರದ ಬೊಕ್ಕಸ ಖಾಲಿ ಮಾಡಿರೋದೆ ಸಿದ್ದರಾಮಯ್ಯ ಸಾಧನೆ – ಸಿಎಂ ವಿರುದ್ಧ ಜೆಡಿಎಸ್ ಕಿಡಿ
ವಕ್ಫ್ ಬೋರ್ಡ್‌ಗೆ ತಿಮಿಂಗಲ ಬೋರ್ಡ್ ಅಂತ ಹೆಸರಿಡಬೇಕು. ತಿಮಿಂಗಲದ ಕೆಲಸ ಎಲ್ಲವನ್ನೂ ನುಂಗಿ ಹಾಕೋದು. ಅದೇ ರೀತಿ ವಕ್ಫ್ ಬೋರ್ಡ್ ಸಹ ರೈತರ ಎಲ್ಲರ ಜಮೀನು ನುಂಗಿ ಹಾಕುತ್ತಿದೆ. ಹಾಗಾಗಿ ಅಧಿವೇಶನದ ಸಮಯದಲ್ಲಿ ಜನ ಬೀದಿಗಿಳಿದು ಹೋರಾಟ ಮಾಡಿ, ಸಂಸತ್ ಅಧಿವೇಶನದಲ್ಲಿ ವಕ್ಫ್ ಬೋರ್ಡ್ ರಾಕ್ಷಸನನ್ನ ಮೋದಿ ಸಂಹಾರ ಮಾಡ್ತಾರೆ ಎಂದು ನುಡಿದರು.
ಇನ್ನೂ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಸದ ಡಾ.ಕೆ ಸುಧಾಕರ್ (Dr. K.Sudhakar), ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಲ್ಯಾಂಡ್ ಜಿಹಾದ್ ಘೋಷಣೆ ಮಾಡಿದೆ. ರೈತರ ಜಮೀನು ಉಳಿಸುವ ಸಲುವಾಗಿ ಬಿಜೆಪಿ ವತಿಯಿಂದ ಹೋರಾಟ ಮಾಡ್ತಿದ್ದೇವೆ. ಮರಳಿ ರೈತರಿಗೆ ವಾಪಾಸ್ ಕೊಡಿಸುವ ಕ್ರಮ ವಹಿಸುತ್ತಿದ್ದೇವೆ. ಬ್ರಿಟಿಷರು ಹೊಡೆದು ಆಳುತ್ತಿದ್ದರು ಅದನ್ನೇ ಕಾಂಗ್ರೆಸ್ ಸರ್ಕಾರ ಕಲಿತಿದೆ. ಜನರನ್ನ ಹೊಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: 1,000 ದಿನ ಪೂರೈಸಿದ ರಷ್ಯಾ-ಉಕ್ರೇನ್ ಯುದ್ಧ; ಪರಮಾಣು ಶಸ್ತ್ರಾಸ್ತ್ರ ಬಳಕೆ ಎಚ್ಚರಿಕೆ ನೀಡಿದ ಪುಟಿನ್
ಹಿಂದೂಗಳನ್ನ 2ನೇ ದರ್ಜೆ ಪ್ರಜೆಗಳನ್ನಾಗಿ ಕಾಣ್ತಿದೆ:
ಹನುಮ ಧ್ವಜ ಕಟ್ಟಿದರೆ ಇಳಿಸ್ತಾರೆ, ಅಯೋಧ್ಯೆ ರಾಮಮಂದಿರ ಕಟ್ಟಿದ್ರೆ ಹೋಗಲ್ಲ ಅಂತಾರೆ, ಕರ ಸೇವಕರನ್ನ ಬಂಧಿಸ್ತಾರೆ, ವಿನಾಯಕ ಮೆರವಣಿಗೆ ಮಾಡಿದ್ರೆ ಗಣೇಶನನ್ನ ಬಂಧಿಸ್ತಾರೆ. ಡಿಜೆ ಹಾಕೋ ಆಗಿಲ್ಲ ಅಂತ ಆಕ್ರೋಶ ಹೊರ ಹಾಕಿದರು. ಎಸ್ಪಿ, ಡಿವೈಎಸ್ಪಿ, ಎಸ್‌ಐ ಕಾಂಗ್ರೆಸ್‌ನವರ ತರ ಆಳ್ವಿಕೆ ಮಾಡ್ತಿದ್ದಾರೆ. ರೈತರ ಜಮೀನು ವಕ್ಫ್ ಆಸ್ತಿ ಆಗ್ತಿದೆ, ದೇವಾಲಯ ಖಬರಸ್ತಾನ್ ಆಗ್ತಿದೆ. ಇದಕ್ಕೆ ಪುಷ್ಟಿ ಕೊಡ್ತಿರೋದು ಕಾಂಗ್ರೆಸ್ ಸರ್ಕಾರ. ಹಿಂದೂಗಳ ಮೇಲೆ ವಕ್ಪ್ ಗಧಾಪ್ರಹಾರ ಮಾಡ್ತಿದೆ, ವಕ್ಫ್‌ಗೆ ಸಾವಿರಾರು ಎಕೆರೆಗಳಿವೆ ನೂರಾರು ಕೋಟಿ ಆದಾಯ ಇದೆ. ಆದ್ರೆ ಅವರಿಗೊಂದು ನ್ಯಾಯ ನಮಗೊಂದು ನ್ಯಾಯ ಎಂಬಂತೆ ಹಿಂದೂಗಳನ್ನು 2ನೇ ದರ್ಜೆ ಪ್ರಜೆಗಳನ್ನಾಗಿ ಸರ್ಕಾರ ಕಾಣ್ತಿದೆ ಅಂತ ತೀವ್ರ ವಾಗ್ದಾಳಿ ನಡೆಸಿದರು.