ವಿಪಕ್ಷ ನಾಯಕನ ಆಯ್ಕೆ ಕಗ್ಗಂಟು – ಇಂದು BJP ಕೇಂದ್ರ ನಾಯಕರು ಬೆಂಗ್ಳೂರಿಗೆ

Public TV
2 Min Read
BS Yediyurappa And Bommai

– ದೆಹಲಿ ಹೈವೋಲ್ಟೇಜ್ ಮೀಟಿಂಗ್ ಬಳಿಕ ಬಿಎಸ್‌ವೈ ಹೇಳಿದ್ದೇನು?

ಬೆಂಗಳೂರು: ವಿರೋಧ ಪಕ್ಷದ ನಾಯಕನ (Opposition Leader) ಆಯ್ಕೆ ಬಿಜೆಪಿ (BJP) ಹೈಕಮಾಂಡ್‌ಗೆ ಕಗ್ಗಂಟಾಗಿ ಪರಿಗಣಿಸಿದೆ. ರಾಜ್ಯ ವಿಧಾನಸಭೆ ಅಧಿವೇಶನ ಆರಂಭವಾದರೂ ವಿಪಕ್ಷ ನಾಯಕನ ಆಯ್ಕೆ ವಿಚಾರದಲ್ಲಿ ಒಮ್ಮತದ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ.

ವಿಪಕ್ಷ ನಾಯಕನ ಆಯ್ಕೆ ಸಂಬಂಧ ಭಾನುವಾರ ರಾತ್ರಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ (JP Nadda) ಜೊತೆಗೆ ಪ್ರತ್ಯೇಕವಾಗಿ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಬಿ.ಎಸ್ ಯಡಿಯೂರಪ್ಪ (BS Yediyurappa) ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಪರ ಬ್ಯಾಟ್ ಬೀಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ವಿಪಕ್ಷ ನಾಯಕರ ಆಯ್ಕೆ ಬಗ್ಗೆ ಕಾಂಗ್ರೆಸ್ ತಲೆ ಕೆರೆದುಕೊಳ್ಳುವುದನ್ನು ಬಿಡಲಿ: ಬಿಜೆಪಿ ತಿರುಗೇಟು

JP Nadda 2

ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್ ಆಯ್ಕೆಗೆ ವಿರೋಧ ವ್ಯಕ್ತಪಡಿಸಿದ್ದು, ಸುನೀಲ್ ಕುಮಾರ್, ಅಶ್ವಥ್ ನಾರಯಣ್ ಆಯ್ಕೆಯಾದ್ರು ಅಡ್ಡಿ ಇಲ್ಲ ಎಂದಿದ್ದಾರೆ. ಅಂತಿಮವಾಗಿ ನೀವೇ ನಿರ್ಧಾರ ಮಾಡಿ ಎಂದು ಬಿಎಸ್‌ವೈ ವರಿಷ್ಠರಿಗೆ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಮಹಿಳಾ ಶಕ್ತಿಗೆ ಜಗ್ಗಲಿಲ್ಲ- ಫ್ರೀ ಬಸ್‍ನಲ್ಲಿ ಪುರುಷ ಪ್ರಯಾಣಿಕರ ಸಂಖ್ಯೆ 13 ಲಕ್ಷಕ್ಕೆ ಏರಿಕೆ

ಬಿಎಸ್‌ವೈ ಅಭಿಪ್ರಾಯ ಪಡೆದ ಅಮಿತ್ ಶಾ (Amit Shah) ರಾಜ್ಯಕ್ಕೆ ಇಬ್ಬರು ವೀಕ್ಷಕರನ್ನ ಕಳುಹಿಸಲು ನಿರ್ಧರಿಸಿದ್ದು, ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ, ವಿನೋದ್ ತಾವಡೆ ಅವರನ್ನು ಸೋಮವಾರ ರಾಜ್ಯಕ್ಕೆ ಕಳುಹಿಸಲಿದ್ದಾರೆ. ಅವರು ಶಾಸಕರಿಂದ ವಿಪಕ್ಷ ನಾಯಕನ ಮತ್ತು ರಾಜ್ಯಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಶಾಸಕರಿಂದ ಅಭಿವೃದ್ಧಿ ಸಂಗ್ರಹಿಸಿ ಹೈಕಮಾಂಡ್ ರವಾನಿಸಲಿದ್ದಾರೆ. ಈವರದಿ ಆಧರಿಸಿ ಹೈಕಮಾಂಡ್ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ.

ಸಭೆಯ ಬಳಿಕ ಮಾತನಾಡಿದ ಬಿಎಸ್‌ವೈ, ನಾಳೆ ವಿಪಕ್ಷ ನಾಯಕನ ಘೋಷಣೆ ಆಗಲ್ಲ. ಇನ್ನು ಮೂರ್ನಾಲ್ಕು ದಿನ ಸಮಯ ಹಿಡಿಯಬಹುದು, ವೀಕ್ಷಕರು ಬಂದು ಮಾಹಿತಿ ಸಂಗ್ರಹಿಸಲಿದ್ದಾರೆ. ನಾನು ನನ್ನ ಅಭಿಪ್ರಾಯ ಹೇಳಿದ್ದೇನೆ ಅಗತ್ಯ ಬಿದ್ದರೆ ಮತ್ತೆ ಕರೆಯುವುದಾಗಿ ಹೇಳಿದ್ದಾರೆ ಎಂದರು.

Web Stories

Share This Article