ನವದೆಹಲಿ: ತಮ್ಮ ಫೋನ್‌ಗಳ ಮೇಲೆ ಸರ್ಕಾರಿ ಪ್ರಾಯೋಜಕತ್ವದ ದಾಳಿ ನಡೆಯುತ್ತಿದೆ, ಕೇಂದ್ರದಿಂದ ಫೋನ್ ಕದ್ದಾಲಿಕೆ ನಡೆಯುತ್ತಿದೆ ಎಂದು ಪ್ರತಿಪಕ್ಷಗಳ ವಿವಿಧ ನಾಯಕರು ಕೇಂದ್ರ ಸರ್ಕಾರದ (Union Government) ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ (Mahua Moitra), ಕಾಂಗ್ರೆಸ್ ನಾಯಕ ಶಶಿ ತರೂರ್, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹಾಗೂ ಶಿವಸೇನಾದ (ಉದ್ಧವ್ ಬಣ) ಪ್ರಿಯಾಂಕಾ ಚತುರ್ವೇದಿ (Priyanka Chaturvedi) ಅವರು ತಮ್ಮ ಐ-ಫೋನ್‌ಗಳ (iPhone) ಮೇಲೆ ಸರ್ಕಾರಿ ಪ್ರಾಯೋಜಿತ ದಾಳಿಕೋರರು ಟಾರ್ಗೆಟ್ ಮಾಡುತ್ತಿರಬಹುದು ಎಂದು ಆಪಲ್ ಕಂಪನಿಯಿಂದ ಫೋನ್ ಹಾಗೂ ಇ-ಮೇಲ್‌ಗಳಿಗೆ (E-mail) ಎಚ್ಚರಿಕೆ ಸಂದೇಶ ಬಂದಿರುವುದಾಗಿ ಹೇಳಿದ್ದಾರೆ.
Advertisement
Advertisement
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಅವರ ಕಚೇರಿಯಲ್ಲಿನ ಕೆಲವರಿಗೂ ಈ ಸಂದೇಶ ಬಂದಿದೆ ಎನ್ನಲಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸರ್ಕಾರ, ಈ ಸಂದೇಶಗಳ ಬಗ್ಗೆ ಅರಿವಿದೆ. ಐಫೋನ್‌ಗಳಲ್ಲಿ ಬೆದರಿಕೆ ಪತ್ತೆ ಮಾಡುವ ತಂತ್ರಜ್ಞಾನವು ಕೆಲವೊಮ್ಮೆ ಅಸಮಗ್ರ ಹಾಗೂ ಅಪೂರ್ಣವಾಗಿರುತ್ತದೆ ಎಂದು ಹೇಳಿದೆ.
Advertisement
ಆಪಲ್‌ನಿಂದ ಬಂದ ಸಂದೇಶದಲ್ಲಿ ಏನಿದೆ?
ನೀವು ಸರ್ಕಾರಿ ಪ್ರಾಯೋಜಿತ ದಾಳಿಕೋರರಿಂದ ಗುರಿಯಾಗುತ್ತಿದ್ದೀರಿ. ಅವರು ನಿಮ್ಮ ಆಪಲ್ ಐಡಿಗೆ (Apple ID) ಸಂಬಂಧಿಸಿದ ಐಫೋನ್‌ಗೆ ದೂರದಿಂದ ಕದ್ದಾಲಿಕೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆಪಲ್‌ನ ಸಂದೇಶ ಹೇಳಿದೆ.
Advertisement
ಈ ದಾಳಿಕೋರರು ನೀವು ಯಾರು ಅಥವಾ ನೀವು ಏನು ಮಾಡುತ್ತೀರಿ ಎಂಬ ಆಧಾರದಲ್ಲಿ ನಿಮ್ಮನ್ನು ವ್ಯಕ್ತಿಗತವಾಗಿ ಟಾರ್ಗೆಟ್ ಮಾಡುತ್ತಿರುವ ಸಾಧ್ಯತೆ ಇದೆ. ಇದರಿಂದ ನಿಮ್ಮ ಸೂಕ್ಷ್ಮ ಡೇಟಾ, ಸಂಹವನಗಳು ಅಥವಾ ಕ್ಯಾಮೆರಾ ಮತ್ತು ಮೈಕ್ರೋಫೋನ್‌ಗಳನ್ನು ಕದಿಯಲು ಅವರಿಗೆ ಸಾಧ್ಯವಾಗಲಿದೆ. ಇದು ಸುಳ್ಳು ಎಚ್ಚರಿಕೆಯಾಗುವ ಸಾಧ್ಯತೆ ಇದ್ದರೂ, ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿ ಎಂದು ಸಂದೇಶದಲ್ಲಿದೆ.
ಬಿಜೆಪಿ ಪ್ರತಿಕ್ರಿಯೆ ಏನು?
ತಮ್ಮ ಫೋನ್‌ಗಳನ್ನು ಹ್ಯಾಕ್ ಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿರುವ ವಿಪಕ್ಷ ನಾಯಕರ ವಿರುದ್ಧ ಹರಿಹಾಯ್ದಿರುವ ಬಿಜೆಪಿ ಐಟಿ ಘಟಕದ ಮುಖ್ಯಸ್ಥ ಅಮಿತ್ ಮಾಳವೀಯ, ಆಪಲ್‌ನ ಸ್ಪಷ್ಟೀಕರಣ ಬರುವವರೆಗೂ ಕಾಯುವಂತೆ ಮನವಿ ಮಾಡಿದ್ದಾರೆ.
Web Stories