ನವದೆಹಲಿ: ಅದಾನಿ ಗ್ರೂಪ್ (Adani Group) ಕಂಪನಿಗಳ ವಿರುದ್ಧದ ವಂಚನೆ ಆರೋಪದ ಕುರಿತು ಚರ್ಚೆ ನಡೆಸುವಂತೆ ಪ್ರತಿಪಕ್ಷಗಳ ಸದಸ್ಯರ ಅಗ್ರಹದ ನಡುವೆ ಲೋಕಸಭೆ (Lok Sabha) ಮತ್ತು ರಾಜ್ಯಸಭೆಯನ್ನು (Rajya Sabha) ಶುಕ್ರವಾರಕ್ಕೆ ಮುಂದೂಡಲಾಯಿತು. ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಸೇರಿದಂತೆ ಇತರೆ ಪ್ರತಿಪಕ್ಷಗಳು ಚರ್ಚೆಗೆ ಅವಕಾಶ ಕೋರಿ ಪ್ರತಿ ಪ್ರತಿಭಟನೆ ನಡೆಸಿದ ಬಳಿಕ ಕಲಾಪಗಳನ್ನು ಮುಂದೂಡಲಾಯಿತು.
ಗುರುವಾರ ಬೆಳಗ್ಗೆಯೇ ಎರಡು ಸದನಗಳ ಸಭಾಧ್ಯಕ್ಷರಿಗೆ ಕಾಂಗ್ರೆಸ್ (Congress) ಸೇರಿದಂತೆ ಇತರೆ ವಿಪಕ್ಷಗಳು ಅದಾನಿ ಗ್ರೂಪ್ ಕಂಪನಿಗಳ ವಿರುದ್ಧದ ವಂಚನೆ ಆರೋಪದ ಕುರಿತು ಚರ್ಚೆ ನಡೆಸುವಂತೆ ಮನವಿ ಮಾಡಿದವು. ಇದಕ್ಕೆ ಸಭಾಧ್ಯಕ್ಷರು ಒಪ್ಪದ ಹಿನ್ನಲೆ ವಿಪಕ್ಷಗಳ ನಾಯಕರು ಬಾವಿಗಿಳಿದು ಪ್ರತಿಭಟನೆ ನಡೆಸಿದವು. ಪ್ರತಿಭಟನೆ ಬಳಿಕ ಲೋಕಸಭೆ ಮತ್ತು ರಾಜ್ಯಸಭೆಯನ್ನು ಮಧ್ಯಾಹ್ನ ಎರಡು ಗಂಟೆಗೆ ಮುಂದೂಡಲಾಯಿತು.
Advertisement
करोड़ों लोगों का पैसा LIC और राष्ट्रीय बैंकों में लगा है।
क्यों सरकार ऐसी कंपनियों में सरकारी संस्थानों को निवेश या क़र्ज़ देने को मज़बूर करती है जिनका #HindenburgReport में ख़ुलासा किया है ?
हमारी माँग है कि –
1. Joint Parliamentary Committee (JPC) का गठन किया जाना चाहिए।
— Mallikarjun Kharge (@kharge) February 2, 2023
Advertisement
ಎರಡು ಗಂಟೆಗೆ ಸದನ ಆರಂಭವಾದ ಬಳಿಕ ರಾಜ್ಯಸಭೆ ಸಂಸದ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸೇರಿದ ಎಲ್ಲ ವಿಪಕ್ಷಗಳು ಜಂಟಿ ಸಂಸತ್ತಿನ ಸಮಿತಿ ಅಥವಾ ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯಿಂದ ತನಿಖೆ ನಡೆಸಬೇಕೆಂದು ಒತ್ತಾಯಿಸಿದವು. ಈ ವೇಳೆ ಉಂಟಾದ ಗದ್ದಲದಿಂದಾಗಿ ಎರಡು ಕಲಾಪಗಳನ್ನು ಮುಂದೂಡಲಾಯಿತು. ಇದನ್ನೂ ಓದಿ: ಹೂಡಿಕೆದಾರರ ಹಿತಾಸಕ್ತಿಯೇ ನನಗೆ ಮುಖ್ಯ – 20,000 ಕೋಟಿ ಮೌಲ್ಯದ FPO ಹಿಂಪಡೆದ ಬಳಿಕ ಅದಾನಿ ಮೊದಲ ಪ್ರತಿಕ್ರಿಯೆ
Advertisement
ಹಿಂಡೆನ್‌ಬರ್ಗ್ ವರದಿ ಬಳಿಕ ಷೇರು ಮಾರುಕಟ್ಟೆಯಲ್ಲಿ ಅದಾನಿ ಒಡೆತನದ ಎಲ್ಲ ಕಂಪನಿಗಳ ಷೇರುಗಳ ಮೌಲ್ಯ ತೀವ್ರ ಕುಸಿತ ಕಂಡಿವೆ. ಅದಾನಿ ಕಂಪನಿಗಳ ಎಲ್‌ಐಸಿ, ಎಸ್‌ಬಿಐ ಸೇರಿದಂತೆ ಹಲವು ಸಾರ್ವಜನಿಕ ಸಂಸ್ಥೆಗಳು ಬಲವಂತವಾಗಿ ಹೂಡಿಕೆ ಮಾಡಿವೆ. ಭಾರತದ ಹೂಡಿಕೆದಾರರು ಅಪಾಯದಲ್ಲಿದ್ದಾರೆ. ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಈ ಬಗ್ಗೆ ತನಿಖೆ ನಡೆಯಬೇಕು ಎಂದು ವಿಪಕ್ಷಗಳು ಆಗ್ರಹಿಸಿವೆ.
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k