ಚಿಕ್ಕೋಡಿ: ತನ್ನ ಪ್ರೀತಿಗೆ (Love) ನಿರಾಕರಣೆ ಮಾಡಿದ್ದಕ್ಕೆ ಸಿಟ್ಟಿಗೆದ್ದ ಯುವಕ ಪ್ರೀತಿಸಿದ ಯುವತಿಯ ತಾಯಿ ಹಾಗೂ ಆಕೆಯ ತಮ್ಮನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಿಪ್ಪಾಣಿ (Nippani) ತಾಲೂಕಿ ಅಕ್ಕೋಳ ಗ್ರಾಮದಲ್ಲಿ ನಡೆದಿದೆ.
ಮಂಗಲ ನಾಯಕ್ ( 45 ), ಪ್ರಜ್ವಲ್ ನಾಯಕ್ ( 18 ) ಮೃತ ದುರ್ದೈವಿಗಳು. ನಿಪ್ಪಾಣಿ ತಾಲೂಕಿನ ಅಕ್ಕೋಳ ಗ್ರಾಮದ ಹೊರ ವಲಯದ ಮನೆಯಲ್ಲಿ ಬುಧವಾರ ರಾತ್ರಿ ಘಟನೆ ನಡೆದಿದ್ದು, ಜನ ಬೆಚ್ಚಿ ಬಿದ್ದಿದ್ದಾರೆ. ಇದನ್ನೂ ಓದಿ: ಕಚ್ಚಾಡುವುದರಿಂದ ಯಾರಿಗೂ ಲಾಭವಿಲ್ಲ: ಯತ್ನಾಳ್ ವಿಚಾರಕ್ಕೆ ಬಿಎಸ್‍ವೈ ಪ್ರತಿಕ್ರಿಯೆ
Advertisement
ಕೃತ್ಯ ಎಸಗಿರುವ ಪಾಗಲ್ ಪ್ರೇಮಿ ರವಿ ಎಂದು ತಿಳಿದುಬಂದಿದೆ. ಈತ ಯುವತಿಯನ್ನು ಪ್ರೀತಿ ಮಾಡುತ್ತಿದ್ದ. ಆದರೆ ಇವರ ಪ್ರೀತಿಗೆ ಮನೆಯವರು ತುಂಬಾ ವಿರೋಧ ಮಾಡಿದ್ದರು. ಯಾವುದೇ ಕಾರಣಕ್ಕೂ ಮದುವೆಗೆ ಒಪ್ಪಿಗೆ ಸಿಗದ ಕಾರಣ ಕೊಲೆ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಸೂರ್ಯ ಘರ್: ಇನ್ನೆಂಟು ತಿಂಗಳಲ್ಲಿ 2 ಲಕ್ಷ ತಂತ್ರಜ್ಞರಿಗೆ ತರಬೇತಿ
Advertisement
Advertisement
ಘಟನೆಗೆ ಸಂಬಂಧಿಸಿದಂತೆ ಆರೋಪಿ ರವಿ, ಆತನ ಸ್ನೇಹಿತ ಹಾಗೂ ಹತ್ಯೆಗೆ ಒಳಗಾದ ಮಂಗಲ ಅವರ ಮಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ನಿಪ್ಪಾಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಪವರ್ ಶೇರಿಂಗ್| ಅವರಿಬ್ಬರೇ ಎಲ್ಲಾ ಒಪ್ಪಂದ ಮಾಡಿಕೊಳ್ಳೋದಾದ್ರೆ ನಾವ್ಯಾಕೆ ಇರೋದು: ಪರಮೇಶ್ವರ್ ಪ್ರಶ್ನೆ
Advertisement