– ಪಂಜಾಬ್‌ನಲ್ಲಿ ಮೊದಲ ಬಾರಿಗೆ ಆಪ್ ಮುನ್ನಡೆ
– ಮಣಿಪುರ, ಗೋವಾದಲ್ಲಿ ಅತಂತ್ರ
ನವದೆಹಲಿ: ಉತ್ತರ ಪ್ರದೇಶ ಮತ್ತು ಉತ್ತರಾಖಂಡ್ ನಲ್ಲಿ ಬಿಜೆಪಿ ಜಯಗಳಿಸಲಿದೆ ಎಂದು ಟೈಮ್ಸ್ ನೌ ಸಮೀಕ್ಷೆ ಹೇಳಿದೆ.
ಪಂಚರಾಜ್ಯಗಳ ಚುನಾವಣೆ ದಿನಾಂಕ ಪ್ರಕಟವಾದ ಬೆನಲ್ಲೇ ಈ ಬಾರಿ ಯಾವ ರಾಜ್ಯದಲ್ಲಿ ಯಾರು ಜಯಗಳಿಸಬಹುದು ಎಂಬ ಲೆಕ್ಕಾಚಾರ ಆರಂಭವಾಗಿದೆ. ಹೀಗಾಗಿ ಟೈಮ್ಸ್ ನೌ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದ್ದು ಉತ್ತರಾಖಂಡ್, ಉತ್ತರ ಪ್ರದೇಶದಲ್ಲಿ ಬಿಜೆಪಿ ಸ್ಪಷ್ಟ ಬಹಮತ ಪಡೆಯಲಿದೆ ಎಂದು ಹೇಳಿದೆ.
Advertisement
ಗೋವಾ, ಮಣಿಪುರದಲ್ಲಿ ಅತಂತ್ರ ಫಲಿತಾಂಶ ಬರಲಿದ್ದು ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಏರಬಹುದು ಎಂದು ಭವಿಷ್ಯ ನುಡಿದಿದೆ.
Advertisement
Advertisement
ಉತ್ತರ ಪ್ರದೇಶ:
ಒಟ್ಟು 403 ಸ್ಥಾನಗಳಿದ್ದು ಬಹುಮತಕ್ಕೆ 202 ಅಗತ್ಯವಿದೆ. ಬಿಜೆಪಿ 227-254, ಎಸ್‌ಪಿ 136-151, ಬಿಎಸ್‌ಪಿ 08-18, ಕಾಂಗ್ರೆಸ್ 6-11 ಸ್ಥಾನಗಳನ್ನು ಗಳಿಸಬಹುದು. ಇದನ್ನೂ ಓದಿ: ಉತ್ತರಾಖಂಡದಲ್ಲಿ ಡಿಜಿಟಲ್ ರ‍್ಯಾಲಿಗಳಿಗೆ ಬಿಜೆಪಿ ಸಂಪೂರ್ಣ ತಯಾರಿ ನಡೆಸಿದೆ: ಅಜಯ್ ಭಟ್
Advertisement
ಉತ್ತರಾಖಂಡ:
ಒಟ್ಟು 70 ವಿಧಾನಸಭಾ ಕ್ಷೇತ್ರಗಳಿದ್ದು, ಬಹುಮತಕ್ಕೆ 36 ಸ್ಥಾನಗಳು ಅಗತ್ಯವಿದೆ. ಬಿಜೆಪಿ 44-50, ಕಾಂಗ್ರೆಸ್ 12-15, ಆಪ್ 5-8, ಇತರೇ 0-2 ಸ್ಥಾನಗಳಲ್ಲಿ ಜಯಗಳಿಸಬಹುದು.
ಪಂಜಾಬ್:
ಒಟ್ಟು 117 ಕ್ಷೇತ್ರಗಳಿದ್ದು ಬಹುಮತಕ್ಕೆ 59 ಸ್ಥಾನ ಅಗತ್ಯವಿದೆ. ಆಪ್ 54-58, ಕಾಂಗ್ರೆಸ್ 44-47, ಶಿರೋಮಣಿ ಅಖಾಲಿ ದಳ 11-15, ಬಿಜೆಪಿ 1-3 ಕ್ಷೇತ್ರಗಳನ್ನು ಗೆಲ್ಲಬಹುದು. ಇದನ್ನೂ ಓದಿ: ಪಂಜಾಬ್ ಚುನಾವಣೆ – ನಟ ಸೋನು ಸೂದ್ ಸಹೋದರಿ ಕಾಂಗ್ರೆಸ್ ಸೇರ್ಪಡೆ
ಗೋವಾ:
ಒಟ್ಟು 40 ಕ್ಷೇತ್ರಗಳು ಇರುವ ಗೋವಾದಲ್ಲಿ ಬಹುಮತಕ್ಕೆ 21 ಸ್ಥಾನಗಳ ಅಗತ್ಯವಿದೆ. ಬಿಜೆಪಿ 17-21, ಆಪ್ 08-11, ಕಾಂಗ್ರೆಸ್ 4-6 ಗಳಿಸಬಹುದು.
ಮಣಿಪುರ:
ಒಟ್ಟು 60 ಸ್ಥಾನಗಳಿದ್ದು, ಬಹುಮತಕ್ಕೆ 31 ಸ್ಥಾನಗಳನ್ನು ಗೆಲ್ಲಬೇಕು. ಬಿಜೆಪಿ 23-27, ಕಾಂಗ್ರೆಸ್ 22-27, ಎನ್‌ಸಿಎಫ್ 02-06, ಇತರರು 05-09 ಕ್ಷೇತ್ರಗಳಲ್ಲಿ ಜಯಗಳಿಸಬಹುದು.