ನವದೆಹಲಿ: ಭಾರತದ ದಾಳಿಗೆ ಬೆದರಿದ ಪಾಕ್ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ (Asim Munir) ಜೀವಭಯದಿಂದ ಸೇನಾ ಬಂಕರ್ (Bunker )ಒಳಗಡೆ ಅಡಗಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.
ಹೌದು. ಪಾಕ್ ಸೇನೆಯ (Pakistan Army) ಕೇಂದ್ರ ಕಚೇರಿ ರಾವಲ್ಪಿಂಡಿಯಲ್ಲಿದೆ. ಭಾರತ ಸೇನೆ ಮೇ 9 ಮತ್ತು 10 ರ ನೂರ್ ಖಾನ್ ವಾಯುನೆಲೆಯ (Nur Khan Airbase) ಮೇಲೆ ದಾಳಿ ನಡೆಸಿತ್ತು. ರಾವಲ್ಪಿಂಡಿಯಲ್ಲಿರುವ ನೂರ್ ಖಾನ್ ನೆಲೆಯ ಮೇಲೆ ದಾಳಿ ನಡೆಸಿದ ಪರಿಣಾಮ ಮುನೀರ್‌ಗೆ ಭಯವಾಗಿದೆ.
ಮುಂದೆ ಭಾರತ ತನ್ನ ಮೇಲೂ ದಾಳಿ ನಡೆಸಬಹುದು ಎಂದು ಭಾವಿಸಿ ಮುನೀರ್ ಜನರಲ್ ಹೆಡ್‌ಕ್ವಾರ್ಟರ್ಸ್ (ಜಿಎಚ್‌ಕ್ಯು) ನಲ್ಲಿರುವ ಕೋಟೆಯ ಬಂಕರ್ ಒಳಗಡೆ ಅಡಗಿದ್ದರು ಎಂಬ ಮಾಹಿತಿ ಸರ್ಕಾರಿ ಮೂಲಗಳಿಂದ ಬಂದಿದೆ. ಸುಮಾರು 2 ರಿಂದ 3 ಗಂಟೆಗಳ ಕಾಲ ಮುನೀರ್ ಬಂಕರ್‌ನಲ್ಲೇ ಇದ್ದರು. ಪರಿಸ್ಥಿತಿ ಸುಧಾರಿಸಿದ ಬಳಿಕ ಮುನೀರ್ ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಪಾಕ್‍ಗೆ ನಾವು ಹೇಗಾದ್ರೂ ಪ್ರತಿಕ್ರಿಯಿಸುತ್ತೇವೆ, ಇದನ್ನು ಟ್ರಂಪ್ ಅರ್ಥ ಮಾಡಿಕೊಳ್ಳಲಿ: ಮೋದಿ
ರಾಜಧಾನಿ ಇಸ್ಲಾಮಾಬಾದ್‌ನಿಂದ 10 ಕಿ.ಮೀ ದೂರದಲ್ಲಿ ನೂರ್‌ಖಾನ್ ವಾಯುನೆಲೆಯಿದೆ. ಇಲ್ಲಿ IL-78 ಇಂಧನ ತುಂಬುವ ವಿಮಾನಗಳು ಮತ್ತು C-130 ಸರಕು ಸಾಗಣೆ ವಿಮಾನಗಳಿವೆ. ದಾಳಿ ವೇಳೆ C-130B/E ಹಾನಿಯಾಗಿದೆ.
ಮೇ 8 ಮತ್ತು 10 ರ ನಡುವೆ ಭಾರತನೂರ್ ಖಾನ್, ರಫೀಕಿ, ಮುರಿದ್, ಸುಕ್ಕೂರ್, ಸಿಯಾಲ್‌ಕೋಟ್, ಪಸ್ರೂರ್, ಚುನಿಯನ್, ಸರ್ಗೋಧಾ, ಭೋಲಾರಿ ಮತ್ತು ಜಾಕೋಬಾಬಾದ್ ಸೇರಿದಂತೆ 11 ನೆಲೆಗಳ ಮೇಲೆ ದಾಳಿ ಮಾಡಲಾಗಿದೆ.