ನವದೆಹಲಿ: ಬಾಲಾಕೋಟ್ ಏರ್ ಸ್ಟ್ರೈಕ್ (Balakot Air Strike) ನಡೆದ ಬಳಿಕ ಭಾರತದಲ್ಲಿ ವಿರೋಧ ಪಕ್ಷಗಳು ದಾಳಿ ನಡೆದಿದೆ ಎನ್ನುವುದಕ್ಕೆ ಸಾಕ್ಷಿ (Proof) ಎಲ್ಲಿದೆ ಎಂದು ಕೇಳಿದ್ದವು. ಆದರೆ ಈ ಬಾರಿ ಈ ಪ್ರಶ್ನೆ ಕೇಳುವವರ ಬಾಯಿಯನ್ನೇ ನಮ್ಮ ರಕ್ಷಣಾ ಪಡೆ ಬಂದ್ ಮಾಡಿವೆ.
ಹೌದು. ಪುಲ್ವಾಮಾ (Pulwama) ದಾಳಿಯ ನಂತರ ಭಾರತದ ಪಾಕಿಸ್ತಾನ ಒಳಗಡೆ ನುಗ್ಗಿ ಉಗ್ರರ ನೆಲೆಗಳ ಮೇಲೆ ಏರ್‌ಸ್ಟ್ರೈಕ್ ಮಾಡಿತ್ತು. ಈ ಏರ್‌ಸ್ಟ್ರೈಕ್‌ನಲ್ಲಿ 100 ಕ್ಕೂ ಹೆಚ್ಚು ಮಂದಿ ಉಗ್ರರು ಹತ್ಯೆಯಾಗಿದ್ದರು. ಈ ದಾಳಿಯನ್ನು ಪಾಕಿಸ್ತಾನ ನಡೆದೇ ಇಲ್ಲ ಎಂಬಂತೆ ಹೇಳಿತ್ತು. ಆದರೆ ಉಪಗ್ರಹ ಚಿತ್ರಗಳ ಮೂಲಕ ಇದು ದೃಢಪಟ್ಟಿತ್ತು. ಇದನ್ನೂ ಓದಿ: ಪಿಕ್ಚರ್ ಅಭಿ ಬಾಕಿ ಹೈ: ಉಗ್ರರಿಗೆ ಎಚ್ಚರಿಕೆ ಕೊಟ್ಟ ಮಾಜಿ ಸಿಡಿಎಸ್ ನರವಾಣೆ
OPERATION SINDOOR#JusticeServed
Target 1 – Abbas Terrorist Camp at Kotli.
Distance – 13 Km from Line of Control (POJK).
Nerve Centre for training suicide bombers of Lashkar-e-Taiba (LeT).
Key training infrastructure for over 50 terrorists.
DESTROYED AT 1.04 AM on 07 May 2025.… pic.twitter.com/OBF4gTNA8q
— ADG PI – INDIAN ARMY (@adgpi) May 7, 2025
ಹೀಗಿದ್ದರೂ ಭಾರತದಲ್ಲಿ ಏರ್‌ಸ್ಟ್ರೈಕ್ ದೊಡ್ಡ ಮಟ್ಟ ರಾಜಕೀಯ ಚರ್ಚೆಗೆ ಕಾರಣವಾಗಿತ್ತು. ಕೇಂದ್ರದ ಮಂತ್ರಿಗಳು ಹೇಳಿದರೂ ವಿಪಕ್ಷಗಳು ಪದೇ ಪದೇ ಸಾಕ್ಷಿಯನ್ನು ಕೇಳುತ್ತಿದ್ದವು. 2019ರ ಲೋಕಸಭಾ ಚುನಾವಣೆಯಲ್ಲೂ ಇದು ದೊಡ್ಡ ಸುದ್ದಿಯಾಗಿತ್ತು. ಇದನ್ನೂ ಓದಿ: ಪಾಕ್ ಉಗ್ರರ ದಾಳಿಗೆ SCALP, HAMMER ಕ್ಷಿಪಣಿಯನ್ನೇ ಬಳಸಿದ್ದು ಯಾಕೆ?
ಕಳೆದ ಬಾರಿ ಸಾಕ್ಷಿ ಕೇಳಿದವರಿಗೆ ಈ ಬಾರಿ ನಮ್ಮ ಪಡೆಗಳು ಸಾಕ್ಷಿ ಸಮೇತ ಉತ್ತರ ನೀಡಿವೆ. ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದಲ್ಲಿ ನಡೆಸಿದ ಆಪರೇಷನ್ ಸಿಂಧೂರ(Operation Sindoor) ದಾಳಿ ನಡೆದ ಪ್ರತಿ ಜಾಗದ ವಿಡಿಯೋ/ ಫೋಟೊ ತೋರಿಸುವ ಮೂಲಕ ಪುರಾವೆ ನೀಡಿದೆ. ಇದಕ್ಕೆ ಪೂರಕ ಎಂಬಂತೆ ಪಾಕಿಸ್ತಾನವೇ ದಾಳಿ ನಡೆದಿದ್ದನ್ನು ಒಪ್ಪಿಕೊಂಡಿದೆ.