ನವದೆಹಲಿ: ಆಪರೇಷನ್ ಸಿಂಧೂರದ ಮೂಲಕ ದೇಶದ ಸಾಮರ್ಥ್ಯ ವಿಶ್ವಕ್ಕೆ ಗೊತ್ತಾಗಿದೆ. ಈ ಕಾರ್ಯಾಚರಣೆಯ ಯಶಸ್ಸಿಗೆ ಕಾರಣರಾದ ನಮ್ಮ ಸೈನಿಕರಿಗೆ ಸೆಲ್ಯೂಟ್ ಹೊಡೆಯುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶಂಸಿದ್ದಾರೆ.
ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಯಶಸ್ವಿಯಾದ ಬೆನ್ನಲ್ಲೇ ಮೋದಿ ಇಂದು ದೇಶವನ್ನು ಉದ್ದೇಶಿಸಿ ಮಾತನಾಡಿದರು.
ಮೋದಿ ಹೇಳಿದ್ದೇನು?
ಆಪರೇಷನ್ ಸಿಂಧೂರ ಕೇವಲ ಹೆಸರಲ್ಲ. ಇದು ದೇಶದ ಲಕ್ಷಾಂತರ ಜನರ ಭಾವನೆಗಳ ಪ್ರತಿಬಿಂಬವಾಗಿದೆ. ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ತಾಣಗಳ ಮೇಲೆ ದಾಳಿ ಮಾಡಿದವು. ಭಾರತ ಇಷ್ಟೊಂದು ದೊಡ್ಡ ಹೆಜ್ಜೆಗಳನ್ನು ಇಡುತ್ತದೆ ಎಂದು ಭಯೋತ್ಪಾದಕರು ಕನಸು ಕಂಡಿರಲಿಲ್ಲ.ಭಾರತೀಯ ಕ್ಷಿಪಣಿಗಳು ಮತ್ತು ಡ್ರೋನ್‌ಗಳು ಪಾಕಿಸ್ತಾನದಲ್ಲಿರುವ ಆ ತಾಣಗಳ ಮೇಲೆ ದಾಳಿ ಮಾಡಿದಾಗ, ಅದು ಭಯೋತ್ಪಾದಕರ ಕಟ್ಟಡಗಳ ಮೇಲೆ ಮಾತ್ರವಲ್ಲ, ಅವರ ಧೈರ್ಯವನ್ನು ಪುಡಿಪುಡಿ ಮಾಡಲಾಯಿತು.
ಭಯೋತ್ಪಾದಕರನ್ನು ನಾಶಮಾಡಲು ನಾವು ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದ್ದೇವೆ. ಭಯೋತ್ಪಾಕರನ್ನು ಅವರ ಮಣ್ಣಲ್ಲಿ ಹೂತು ಹಾಕುತ್ತೇವೆ.
ಆಪರೇಷನ್ ಸಿಂಧೂರ್ ಮೂಲಕ ವಿಶ್ವ ಪಾಕಿಸ್ತಾನದ ಸತ್ಯವನ್ನು ನೋಡಿದೆ. ಭಯೋತ್ಪಾದಕರ ಅಂತ್ಯಕ್ರಿಯೆಯಲ್ಲಿ ಪಾಕ್ ಸೇನೆ ಮುಖ್ಯಸ್ಥರು ಭಾಗಿಯಾಗಿದ್ದಾರೆ. ಇದು ಪಾಕ್ ಪ್ರಾಯೋಜಿತ ಭಯೋತ್ಪಾದಕತೆ ಎನ್ನುವುದಕ್ಕೆ ಮತ್ತೊಂದು ಸಾಕ್ಷಿ.