ನವದೆಹಲಿ/ಇಸ್ಲಾಮಾಬಾದ್: ಭಾರತ ನಡೆಸಿದ ವಾಯು ದಾಳಿಗೆ ಪಾಕಿಸ್ತಾನದಲ್ಲಿ ಅಲ್ಲೋಲ ಕಲ್ಲೋಲವಾಗಿದೆ. ಭಾರತ ಪಾಕಿಸ್ತಾನದ ಹಲವು ವಾಯು ನೆಲೆಗಳ (Air Base) ಮೇಲೆ ದಾಳಿ ಮಾಡಿದೆ.
ರಾಜಧಾನಿ ಇಸ್ಲಾಮಾಬಾದ್ (Islamabad), ದೇಶದ ಮಿಲಿಟರಿ ಪ್ರಧಾನ ಕಚೇರಿಗೆ ಹೊಂದಿಕೊಂಡಿರುವ ರಾವಲ್ಪಿಂಡಿಯಲ್ಲಿರುವ (Rawalpindi) ನೂರ್ ಖಾನ್ ವಾಯುನೆಲೆ ಸೇರಿದಂತೆ ಮೂರು ವಾಯುನೆಲೆಯ ಮೇಲೆ ಭಾರತ ದಾಳಿ ಮಾಡಿದ ಎಂದು ಪಾಕ್ ಸೇನೆ ಅಧಿಕೃತವಾಗಿ ತಿಳಿಸಿದೆ.
ಇಸ್ಲಾಮಾಬಾದ್‌ನಿಂದ 10 ಕಿಲೋಮೀಟರ್‌ಗಿಂತಲೂ ಕಡಿಮೆ ದೂರದಲ್ಲಿರುವ ವಾಯು ನೆಲೆಯ ಮೇಲೆಯೇ ಭಾರತ ದಾಳಿ ನಡೆಸಿದೆ. ಭೀಕರ ದಾಳಿಗೆ ತತ್ತರಿಸಿದ ಪಾಕಿಸ್ತಾನ ಸರ್ಕಾರವು ಎಲ್ಲಾ ನಾಗರಿಕ ಮತ್ತು ವಾಣಿಜ್ಯ ವಿಮಾನ ಸಂಚಾರವನ್ನು ಬಂದ್ ಮಾಡಿದೆ.
VIDEO ⚠️
Pakistan’s Nur Khan base in Chaklala, Rawalpindi struck overnight by what Pak Govt says was an Indian air-to-surface missile. That’s the base at the HQ city of Pakistan’s military. pic.twitter.com/01rEyLABKB
— Shiv Aroor (@ShivAroor) May 9, 2025
ರಾವಲ್ಪಿಂಡಿಯ ವಾಯುನೆಲೆಯಲ್ಲಿ ಬೆಂಕಿ ಹೊತ್ತಿಕೊಂಡು ಸ್ಫೋಟಗೊಳ್ಳುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಹಿಂದೆ ಚಕ್ಲಾಲಾ ವಾಯುನೆಲೆ ಎಂದು ಕರೆಯಲಾಗುತ್ತಿದ್ದ ನೂರ್ ಖಾನ್ ನೆಲೆ ಪಾಕಿಸ್ತಾನದ ಅತ್ಯಂತ ಸೂಕ್ಷ್ಮ ಮಿಲಿಟರಿ ವಾಯುನೆಲೆಯಾಗಿದೆ.