ಬೆಂಗಳೂರು: ಆಪರೇಷನ್ ಸಿಂಧೂರ (Operation Sindoor) ಕಾರ್ಯಾಚರಣೆಗೆ ಭಾರತ ಬೆಂಗಳೂರಿನ (Bengaluru) ಕಂಪನಿ ನಿರ್ಮಿಸಿದ SkyStriker ಸೂಸೈಡ್ ಡ್ರೋನ್‌ಗಳನ್ನು (Suicide Drone) ಬಳಕೆ ಮಾಡಿದೆ.
ಹೌದು. ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಆಲ್ಫಾ ಡಿಸೈನ್ ಮತ್ತು ಇಸ್ರೇಲ್‌ನ ಎಲ್ಬಿಟ್ ಸೆಕ್ಯುರಿಟಿ ಸಿಸ್ಟಮ್ಸ್ ಜಂಟಿಯಾಗಿ ಈ ಸ್ಕೈಸ್ಟ್ರೈಕರ್‌ನ್ನು ಅಭಿವೃದ್ಧಿ ಪಡಿಸಿದೆ. ಇದನ್ನೂ ಓದಿ: ಬಾಲಾಕೋಟ್, ಬ್ರಹ್ಮೋಸ್ ಬಳಿಕ ʻಆಪರೇಷನ್ ಸಿಂಧೂರʼ – ಪಾಕ್ ನಂಬಿದ್ದ ʻಮೇಡ್ ಇನ್ ಚೈನಾʼ ರೆಡಾರ್ ಫೇಲ್
ಯುಎಎಸ್‌ನಂತೆ (ಮಾನವರಹಿತ ವಿಮಾನ ವ್ಯವಸ್ಥೆ) ಹಾರುತ್ತದೆ ಮತ್ತು ಕ್ಷಿಪಣಿಯಂತೆ ಇದು ಹೊಡೆದು ಹಾಕುತ್ತದೆ. ದೂರದಲ್ಲೇ ಸ್ಕೈಸ್ಟ್ರೈಕರ್ ನಿಯಂತ್ರಣ ಮಾಡಬಹುದಾಗಿರುವ ಕಾರಣ ಭಾರತ ಸುಲಭವಾಗಿ ಗಡಿಯನ್ನು ದಾಟಿ ಉಗ್ರರ ನೆಲೆಗಳ ಮೇಲೆ ಅಪ್ಪಳಿಸಿ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ನೆಲೆಗಳು ಧ್ವಂಸಗೊಂಡಿವೆ. ಇದನ್ನೂ ಓದಿ: ಮೇ 11ರಂದು ಲಕ್ನೋದಲ್ಲಿ ಬ್ರಹ್ಮೋಸ್ ಕ್ಷಿಪಣಿ ಉತ್ಪಾದನಾ ಘಟಕ ಉದ್ಘಾಟನೆ – ಪಾಕ್‌ಗೆ ಶುರುವಾಯ್ತು ನಡುಕ
ವಿಮಾನದ ಮಾದರಿಯಲ್ಲಿರುವ ಈ ಡ್ರೋನ್ 100 ಕಿಮೀ ದೂರದಲ್ಲಿರುವ ಗುರಿಯಯನ್ನು ಧ್ವಂಸ ಮಾಡುವುದರ ಜೊತೆಗೆ 5 ಕೆಜಿ ಅಥವಾ 10 ಕೆಜಿ ಸಿಡಿತಲೆಯನ್ನು ಹೊತ್ತುಕೊಂಡು ಹೋಗುವ ಸಾಮರ್ಥ್ಯವನ್ನು ಹೊಂದಿದೆ. ಕಡಿಮೆ ಎತ್ತರದಲ್ಲಿ ಹಾರುವ ಮೂಲಕ ನಿಖರ ಗುರಿಯನ್ನು ತಲಪುವುದು ಇದರ ವಿಶೇಷತೆ.
ಭಾರತ 2021 ರಲ್ಲಿ 100 ಸ್ಕೈಸ್ಟ್ರೈಕರ್‌ಗಳಿಗಾಗಿ ತುರ್ತು ಖರೀದಿ ಆದೇಶವನ್ನು ನೀಡಿತ್ತು. ಇಲ್ಲಿಯವರೆಗೆ ಭಾರತದ ಯಾವುದೇ ದೊಡ್ಡ ಕಾರ್ಯಾಚರಣೆಯಲ್ಲಿ ಬಳಕೆಯಾಗಿರಲಿಲ್ಲ. ಆದರೆ ಮೊದಲ ಬಾರಿಗೆ ಈ ಸೂಸೈಡ್ ಡ್ರೋನ್ ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಬಳಕೆ ಮಾಡಲಾಗಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.