ಯಾದಗಿರಿ: ನಗರಸಭೆ ಪೌರಾಯುಕ್ತ ಸಂಗಪ್ಪ ಉಫಾಸೆ ನೇತೃತ್ವದಲ್ಲಿ ಯಾದಗಿರಿಯಲ್ಲಿ ಆಪರೇಷನ್ ಪುಣ್ಯಕೋಟಿ (Operation Punyakoti) ನಡೆಸಲಾಯಿತು. ವಾಹನ ಸವಾರರಿಗೆ ಅಡ್ಡಿಯಾಗಿದ್ದ, ರಸ್ತೆ ಮೇಲೆ ಓಡಾಡ್ತಿದ್ದ ಜಾನುವಾರಗಳ ಸ್ಥಳಾಂತರ ಮಾಡಲಾಗಿದೆ.
Advertisement
ಯಾದಗಿರಿ (Yadagiri) ನಗರದಲ್ಲಿ ದನಗಳ ಹಾವಳಿಯಿಂದ ವಾಹನ ಸವಾರರು ಸಂಕಷ್ಟ ಎದುರಿಸುವಂತಾಗಿತ್ತು. ರಸ್ತೆ ಮೇಲೆ ಜಾನುವಾರುಗಳ ಓಡಾಟದಿಂದ ರಸ್ತೆ ಅಪಘಾತಗಳು ಹೆಚ್ಚಾಗುತ್ತಿತ್ತು. ನಗರದ ಗಾಂಧಿ ವೃತ್ತ, ಎಪಿಎಂಸಿ ಪ್ರದೇಶ ಸೇರಿದಂತೆ ವಿವಿಧ ಪ್ರಮುಖ ರಸ್ತೆಯಲ್ಲಿಯೇ ಜಾನುವಾರುಗಳು ರಾತ್ರಿ ಕಳೆಯುತ್ತಿದ್ದವು. ಈ ಹಿನ್ನೆಲೆಯಲ್ಲಿ ಇದೀಗ ಸಾರ್ವಜನಿಕರ ಹಿತ ದೃಷ್ಟಿಯಿಂದ ಜಾನುವಾರುಗಳನ್ನು ರಕ್ಷಣೆ ಮಾಡಿ ಗೋ ಶಾಲೆಗೆ ಸ್ಥಳಾಂತರ ಮಾಡಲಾಗಿದೆ.
Advertisement
Advertisement
ನಗರದಲ್ಲಿ ಓಡಾಡುತ್ತಿದ್ದ 15 ಗೋವುಗಳನ್ನ (Cow Shift) ರಕ್ಷಣೆ ಮಾಡಿ ಗೋಶಾಲೆಗೆ ಸ್ಥಳಾಂತರಿಸಲಾಗಿದೆ. ಗೋವುಗಳ ರಕ್ಷಣೆ ವೇಳೆ ಮಹಿಳೆಯೊಬ್ಬರ ಕಣ್ಣೀರು ಹಾಕಿದ ಪ್ರಸಂಗ ಕೂಡ ನಡೆಯಿತು. ತನ್ನ ಹಸುವನ್ನ ನಗರಸಭೆ ವಾಹನದಲ್ಲಿ ಹಾಕಿಕೊಂಡಾಗ ಮಹಿಳೆ ಕಣ್ಣೀರಿಟ್ಟರು. ನಮ್ಮ ಆಕಳನ್ನ ಲಾರಿಯಲ್ಲಿ ಹಾಕಿಕೊಂಡು ಹೋದ್ರೆ ಹೇಗೆ? ನಮ್ಮ ಆಕಳು ಬಿಡಿ, ಪುಣ್ಯ ಬರುತ್ತದೆ, ಆಕಳುಗಳಿಂದಲೇ ಜೀವನ ಸಾಗಿಸುತ್ತೇನೆ ಎಂದು ಕಣ್ಣೀರು ಹಾಕುತ್ತಲೇ ಲಾರಿ ಹತ್ತಿ ಕೆಲ ಹೊತ್ತು ಮಹಿಳೆ ಹೈಡ್ರಾಮಾ ಸೃಷ್ಟಿಸಿದರು. ಇದನ್ನೂ ಓದಿ: ಕೆಪಿಸಿಸಿಗೆ 50 ಸಾವಿರ ದಂಡ ವಿಧಿಸಿದ ಬಿಬಿಎಂಪಿ
Advertisement
ಈ ಹಿಂದೆಯೇ ಜಾನುವಾರುಗಳನ್ನ ರಸ್ತೆ ಮೇಲೆ ಬಿಡದಂತೆ ಸೂಚನೆ ಕೊಟ್ಟರೂ ಮಾಲೀಕರು ಎಚ್ಚೆತ್ತುಕೊಂಡಿರಲಿಲ್ಲ. ಹೀಗಾಗಿ ಪುಣ್ಯಕೋಟಿ ಹೆಸರಿನಲ್ಲಿ ನಗರಸಭೆ ಅಧಿಕಾರಿಗಳು ಆಪರೇಷನ್ ಮಾಡಿದ್ದು, ವಾಹನ ಸವಾರರು ನಿಟ್ಟುಸಿರು ಬಿಟ್ಟಿದ್ದಾರೆ.
Web Stories