ಬೆಂಗಳೂರು: ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಕಸರತ್ತು ನಡೆಸುತ್ತಿದೆ. ‘ಟಾರ್ಗೆಟ್ 2023’ಗೆ ಕಾಂಗ್ರೆಸ್ ಈಗಿನಿಂದಲೇ ಗೇಮ್ ಪ್ಲಾನ್ ಮಾಡುತ್ತಿದೆ. ಆಪರೇಷನ್ ಎಲೆಕ್ಷನ್‍ಗೆ ‘ಕೈ’ ಹಾಕಿರುವ ಕಾಂಗ್ರೆಸ್ ರಹಸ್ಯ ಏನು..?, ಡಿಕೆಶಿ, ಸಿದ್ದರಾಮಯ್ಯ ಅಂಡರ್ ಸ್ಟ್ಯಾಂಡಿಂಗ್ ಗೇಮ್ ಶುರು ಮಾಡಿದ್ರಾ ಎಂಬ ಪ್ರಶ್ನೆ ಮೂಡಿದೆ.
Advertisement
ಹೌದು. ಬಿಜೆಪಿ, ಜೆಡಿಎಸ್ ಶಾಸಕರ ಸೆಳೆಯಲು ಕಾಂಗ್ರೆಸ್ ರಣತಂತ್ರ ಹೂಡಿದೆ. ಮೈಸೂರು ಜಿಲ್ಲೆಯಲ್ಲಿ ಓರ್ವ ಜೆಡಿಎಸ್, ಓರ್ವ ಬಿಜೆಪಿ ಶಾಸಕರಿಗೆ ಗಾಳ ಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮಂಡ್ಯದಲ್ಲಿ ಇಬ್ಬರು ಶಾಸಕರಿಗೆ ಹಸ್ತಲಾಘವಕ್ಕೆ ತೆರೆಮರೆ ಕಸರತ್ತು ನಡೆಯುತ್ತಿದ್ದು, ಹಾಸನದಲ್ಲಿ 2 ಕ್ಷೇತ್ರಗಳ ಮೇಲೆ ಕಾಂಗ್ರೆಸ್ ಕಣ್ಣು ಹಾಕಿದೆ ಎಂದು ಹೇಳಲಾಗುತ್ತಿದೆ.
Advertisement
Advertisement
ಇತ್ತ ಚಿತ್ರದುರ್ಗ, ತುಮಕೂರು ಜಿಲ್ಲೆಯ ಇಬ್ಬರು ಶಾಸಕರು, ಚಿಕ್ಕಮಗಳೂರು ಕ್ಷೇತ್ರದಲ್ಲಿ ಓರ್ವ ಬಿಜೆಪಿ ಶಾಸಕನ ಸೆಳೆಯಲು ಹಾಗೂ ಬೆಳಗಾವಿಯಲ್ಲೂ 2 ಕ್ಷೇತ್ರಗಳಲ್ಲಿ ಗೆಲ್ಲೋ ಶಾಸಕರ ಆಪರೇಷನ್‍ಗೆ ತಂತ್ರ ಮಾಡಿಕೊಂಡಿದೆ. ಇದನ್ನೂ ಓದಿ: ಬಾಲಕಿ ಮೇಲೆ ಲೈಂಗಿಕ ಕಿರುಕುಳ ಪ್ರಕರಣ – ಠಾಣೆ ಬಳಿ ಓಡೋಡಿ ಬಂದಿದ್ದ ಶಾಸಕ ಬೈರತಿ ಸುರೇಶ್
Advertisement
ಒಟ್ಟಿನಲ್ಲಿ ಬಿಜೆಪಿ, ಜೆಡಿಎಸ್‍ನ 15-20 ಶಾಸಕರಿಗೆ ಡಿಕೆಶಿ ಗಾಳ ಹಾಕುತ್ತಿದ್ದಾರೆ ಎನ್ನಲಾಗುತ್ತಿದ್ದು, ಇದಕ್ಕೆ ಪುಷ್ಠಿ ಎಂಬಂತೆ ಬಿಜೆಪಿಯ ಕೆಲ ಪ್ರಭಾವಿ ಸಚಿವರನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯ ಜೊತೆ ಚರ್ಚಿಸಿಯೇ ಈ ಆಪರೇಷನ್ ನಡೆಯುತ್ತಿದೆ ಎಂಬುದಾಗಿಯೂ ತಿಳಿದುಬಂದಿದೆ.
ಚಾಮುಂಡೇಶ್ವರಿಯ ಜಿ.ಟಿ. ದೇವೇಗೌಡ, ಕೋಲಾರದ ಶ್ರೀನಿವಾಸಗೌಡ, ಹೊಸದುರ್ಗದ ಗೂಳಿಹಟ್ಟಿ ಶೇಖರ್, ಮೂಡಿಗೆರೆಯ ಎಂ.ಪಿ ಕುಮಾರಸ್ವಾಮಿ, ಹಿರಿಯೂರಿನ ಆರ್. ಪೂರ್ಣಿಮಾ ಹಾಗೂ ನಂಜನಗೂಡಿನ ಹರ್ಷವರ್ಧನ್ ಇವರುಗಳನ್ನು ಡಿಕೆಶಿ ಸಂಪರ್ಕಿಸಿದ್ದಾರೆ ಎಂದು ಕಾಂಗ್ರೆಸ್ ಮೂಲಗಳಿಂದ ತಿಳಿದುಬಂದಿದೆ.