ಮೈಸೂರು: ಆದಿವಾಸಿಗಳ ಒತ್ತಡಕ್ಕೆ ಮಣಿದು ಮೂವರನ್ನು ಬಲಿ ಪಡೆದ ನರಭಕ್ಷಕ ಹುಲಿಯನ್ನು ಸೆರೆ ಹಿಡಿಯಲು 30 ಮಂದಿ ಅರಣ್ಯ ಇಲಾಖೆ ಸಿಬ್ಬಂದಿಯಿಂದ ಅಪರೇಷನ್ ನರಭಕ್ಷಕವನ್ನು ಜಿಲ್ಲೆಯ ಎಚ್.ಡಿ ಕೋಟೆ ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ನಡೆಸಲಾಗುತ್ತಿದೆ.
ಅರಣ್ಯ ಇಲಾಖೆಯ ಸಿಸಿಎಫ್ ನಾರಾಯಣಸ್ವಾಮಿ ನೇತೃತ್ವದ ಆಪರೇಷನ್ ನರಭಕ್ಷಕ ಚುರುಕಾಗಿ ನಡೆಯುತ್ತಿದೆ. 3 ಮಂದಿ ಆದಿವಾಸಿಗಳ ಬಲಿ ಪಡೆದಿರುವ ಹುಲಿಯನ್ನು ಸೆರೆ ಹಿಡಿಯಲು ಸುಮಾರು 30 ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಒಂದು ತಿಂಗಳ ಹಿಂದೆ ಮಾನಿಮೂಲೆ ಹಾಡಿಯ ಜೆಡಿಯಾ, ಕಳೆದ ವಾರದ ಹುಲ್ಲುಮಟ್ಲು ಗ್ರಾಮದ ಚಿನ್ನಪ್ಪ ಹಾಗೂ ನಿನ್ನೆ ಹೊಸತಿಪ್ಪೂರಿನ ಕಡ್ಡಿ ಎಂಬವರನ್ನು ಹುಲಿ ಬಲಿ ಪಡೆದಿತ್ತು. ಆದ್ದರಿಂದ ಎಚ್.ಡಿ ಕೋಟೆ ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಬೀಡುಬಿಟ್ಟಿರುವ ಅರಣ್ಯ ಇಲಾಖೆ ಸಿಬ್ಬಂದಿ ಚುರುಕಾಗಿ ಕಾರ್ಯಾಚರಣೆ ಮಾಡಿ ನರಭಕ್ಷಕ ಹುಲಿಯನ್ನು ಸೆರೆಹಿಡಿಯಲು ಮುಂದಾಗಿದ್ದಾರೆ. ಇದನ್ನೂ ಓದಿ: ಮೈಸೂರಿನಲ್ಲಿ ಹುಲಿ ದಾಳಿಗೆ ಮತ್ತೊಬ್ಬ ಬಲಿ
Advertisement
Advertisement
ಕಾರ್ಯಾಚರಣೆ ಮಾಡಲು ಅರಣ್ಯ ಇಲಾಖೆ ಸಿಬ್ಬಂದಿ ಜೊತೆಗೆ ಶಾರ್ಪ್‍ಶೂಟರ್ಸ್ ಗಳನ್ನು ಕೂಡ ಕರೆದೊಯ್ಯಲಾಗಿದೆ. ಹುಲಿಯನ್ನು ಪತ್ತೆ ಹಚ್ಚಲು ಅರಣ್ಯ ಇಲಾಖೆ ಅಧಿಕಾರಿಗಳು ಐದು ಸಾಕಾನೆಗಳನ್ನು ಬಳಸಿಕೊಂಡು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೆ ಕಾರ್ಯಾಚರಣೆ ವೇಳೆ ಕಾಡು ದಾರಿಯಲ್ಲಿ ಓಡಾಡುವ ಶಾಲಾ ಮಕ್ಕಳಿಗೆ ತೊಂದರೆ ಆಗಬಾರದೆಂದು ಅರಣ್ಯ ಇಲಾಖೆ ವಾಹನಗಳಲ್ಲೇ ಸಿಬ್ಬಂದಿ ಸುರಕ್ಷಿತವಾಗಿ ಕರೆದೊಯ್ಯುತ್ತಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv