ಬೆಂಗಳೂರು: ಆಪರೇಷನ್ ನಕ್ಷತ್ರ ಫೈವ್ ಸ್ಟಾರ್ ಫಿಲಂ ಲಾಂಛನದಲ್ಲಿ ನಿರ್ಮಾಣವಾಗಿರುವ ಚಿತ್ರ. ಈ ಚಿತ್ರಕ್ಕೆ ಮಧುಸೂದನ್ ಕೆ.ಆರ್. ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ನಂದಕುಮಾರ್ ಎನ್, ಅರವಿಂದ ಟಿ.ಎಸ್. ರಾಧಾಕೃಷ್ಣ ಸಿ.ಎಸ್, ಕಿಶೋರ್ ಕುಮಾರ್ ಮೇಗಳ ಮನೆ ಈ ಚಿತ್ರಕ್ಕೆ ಬಂಡವಾಳ ಹೂಡಿ, ನಿರ್ಮಾಣ ಮಾಡಿದ್ದಾರೆ. ನಿರ್ದೇಶಕರು ಸೇರಿ ಈ 5 ಜನರು ಹುಟ್ಟು ಹಾಕಿರುವ ಸಂಸ್ಥೆಯೇ ಫೈವ್ ಸ್ಟಾರ್ ಫಿಲಮ್ಸ್ ಈ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ರೇಣುಕಾಂಬಾ ಥಿಯೇಟರ್ ನಲ್ಲಿ ನೆರವೇರಿತು.
ನಿರಂಜನ್ ಒಡೆಯರ್, ಲಿಖಿತ್ ಸೂರ್ಯ, ಅದಿಥಿ ಪ್ರಭುದೇವ ಹಾಗೂ ಯಜ್ಞಾಶೆಟ್ಟಿ ಚಿತ್ರದ 4 ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಗೋವಿಂದೇಗೌಡ (ಕಾಮಿಡಿ ಕಿಲಾಡಿಗಳು), ಪ್ರಶಾಂತ್, ನಟನಾ, ಶ್ರೀನಿವಾಸ್ ಪ್ರಭು, ದೀಪಕ್ ರಾಜ್ ಶೆಟ್ಟಿ, ವಿಕ್ಟರಿ ವಾಸು ಕೂಡ ಈ ಚಿತ್ರದಲ್ಲಿದ್ದಾರೆ.
Advertisement
Advertisement
ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಮಧುಸೂದನ್ ಕಾನ್ಫಿಡಾದಲ್ಲಿ ಡೈರೆಕ್ಷನ್ ಕೋರ್ಸ್ ಮುಗಿಸಿದ ನಂತರ ಸ್ನೇಹಿತರೆಲ್ಲರ ಸಲಹೆಯ ಮೇರೆಗೆ ಥ್ರಿಲ್ಲರ್ ಕಥೆಯೊಂದನ್ನು ರೆಡಿ ಮಾಡಿದೆ. ಕಲಾವಿದರನ್ನೆಲ್ಲ ಫೈನಲ್ ಮಾಡಿಕೊಂಡು ಬೆಂಗಳೂರು, ಗೋವಾದಲ್ಲಿ 40 ದಿನಗಳ ಕಾಲ ಚಿತ್ರೀಕರಣ ನಡೆಸಿದ್ದೇವೆ. ಇದು ಮೈಂಡ್ ಗೇಮ್ ಮೇಲೆ ನಡೆಯುವ ಕಥೆ. 4 ಜನ ಪಾತ್ರಧಾರಿಗಳ ಜೀವನದಲ್ಲಿ ಬಂದು ಹೋಗುವ ಘಟನೆಗಳು ಅವರ ಜೀವನದಲ್ಲಿ ಹೇಗೆ ಟ್ವಿಸ್ಟ್ ಆಂಡ್ ಟರ್ನ್ ಕೊಡುತ್ತವೆ ಎಂದು ಆಪರೇಷನ್ ನಕ್ಷತ್ರ ಚಿತ್ರದ ಮೂಲಕ ಹೇಳಲು ಟ್ರೈ ಮಾಡಿದ್ದೇವೆ. ಈ ಎಲ್ಲಾ ಕ್ಯಾರೆಕ್ಟರ್‍ಗಳನ್ನು ಬಿಟ್ಟು ಮತ್ತೊಂದು ಪ್ರಮುಖ ಪಾತ್ರವಿದೆ. ಅದನ್ನು ತೆರೆಯ ಮೇಲೆ ನೋಡಬೇಕು ಎಂದು ಹೇಳಿದರು. ಜನರಿಗೆ ನಾವು ಮೋಸ ಮಾಡಲು ಪ್ರಯತ್ನಿಸಿದರೆ ಆಗ ನಾವೇ ಹೇಗೆ ಮೋಸ ಹೋಗ್ತೀವಿ ಎನ್ನುವುದೇ ಚಿತ್ರದ ಕಥೆ ಎನ್ನುವುದು ನಿರ್ದೇಶಕರ ಮಾತಾಗಿತ್ತು.
Advertisement
Advertisement
ಚಿತ್ರದ ನಿರ್ಮಾಪಕರಲ್ಲೊಬ್ಬರಾದ ಅರವಿಂದ್ ಮೂರ್ತಿ ಮಾತನಾಡಿ, ಈ ಕಥೆಯಲ್ಲಿರುವ ರೋಚಕ ಟ್ವಿಸ್ಟ್‍ಗಳು ನಮಗೆ ತುಂಬಾ ಇಷ್ಟವಾದವು. ಬಜೆಟ್ ಅಂದುಕೊಂಡದ್ದಕ್ಕಿಂತ ಸ್ವಲ್ಪ ಜಾಸ್ತಿಯಾದರೂ ಚಿತ್ರ ಚೆನ್ನಾಗಿ ಮೂಡಿಬಂದಿರುವುದರಿಂದ ನಮಗೆ ತೃಪ್ತಿಯಾಗಿದೆ ಎಂದು ಹೇಳಿದರು.
ನಾಯಕ ನಟ ನಿರಂಜನ್ ಒಡೆಯರ್ ಮಾತನಾಡಿ ಪ್ರತಿ ನಿಸ್ವಾರ್ಥ ಮುಖದ ಹಿಂದೆ ಸ್ವಾರ್ಥ ಮನಸ್ಸಿರುತ್ತದೆ. ಅದು ಏನೇನು ಮಾಡಬಹುದು. ಅದರಲ್ಲೂ ಹಣ ಅಂತ ಬಂದಾಗ ಏನು ಮಾಡುತ್ತದೆ ಈ ಚಿತ್ರದಲ್ಲಿ ಹೇಳಲಾಗಿದೆ. ಹಿನ್ನೆಲೆ ಸಂಗೀತವೇ ಈ ಚಿತ್ರದಲ್ಲಿ ಹೀರೋ, ಕಥೆ ಚಿತ್ರದ ಮತ್ತೊಬ್ಬ ನಾಯಕ ಎಂದು ಹೇಳಿದರು. ನಾಯಕಿ ಅದಿತಿ ಪ್ರಭುದೇವ ಮಾತನಾಡಿ ನನಗೆ ಮೊದಲಿನಿಂದಲೂ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳೆಂದರೆ ತುಂಬಾ ಇಷ್ಟ. ನನ್ನ ಪಾತ್ರದ ಹೆಸರು ತುಂಬಾ ಚೆನ್ನಾಗಿದೆ. ಜೀವನದಲ್ಲಿ ತುಂಬಾ ಎಥಿಕ್ಸ್ ಇಟ್ಟುಕೊಂಡ ಹುಡುಗಿ. ಇದು ನನಗೆ ಅದೃಷ್ಟದ ಸಿನಿಮಾ. ಏಕೆಂದರೆ ಇದರಲ್ಲಿ ಆಕ್ಟ್ ಮಾಡುವಾಗಲೇ ನನಗೆ ತುಂಬಾ ಆಫರ್‍ಗಳು ಬಂದವು ಎಂದು ಹೇಳಿದರು. ಮತ್ತೊಬ್ಬ ನಾಯಕಿ ಯಜ್ಞಶೆಟ್ಟಿ, ಸಂಗೀತ ನಿರ್ದೇಶಕ ವೀರ ಸಮರ್ಥ್, ನಟ ಲಿಖಿತ್ ಸೂರ್ಯ ಕೂಡ ಈ ಚಿತ್ರದ ಕುರಿತಂತೆ ಮಾತನಾಡಿದರು.