ಬೆಂಗಳೂರು: ಅಂದು ಜತೆಯಲ್ಲಿ ಕರೆದುಕೊಂಡು ಹೋಗಿ ಅವರೆಲ್ಲ ಕಾವಲು ಕಾದಿದ್ರು. ಆದ್ರೆ ಇಂದು ಕೈಗೆ ಸಿಗದೇ ಅವರೆಲ್ಲಾ ಗ್ರೇಟ್ ಎಸ್ಕೇಪ್. ಇದು ಬಿಜೆಪಿಯಲ್ಲೀಗ ನಡೆಯುತ್ತಿದ್ಯಾ ಬೆಕ್ಕು ಇಲಿ ಆಟದ ಹೊಸ ವರಸೆ. ಆಪರೇಷನ್ ಕಮಲದ ಅಪರೇಟರ್ ಗಳು ಎಸ್ಕೇಪ್ ಆಗಿರುವ ಸುದ್ದಿ ಬಿಜೆಪಿಯಲ್ಲಿ ಹೆಚ್ಚು ಸದ್ದು ಮಾಡ್ತಿದೆ.
ಅಂದಹಾಗೆ ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರ ಕೆಡವಲು ಹರಸಾಹಸ ಮಾಡಿದ್ರು ಬಿಜೆಪಿಯ ಕೆಲ ನಾಯಕರು. ಕಾಂಗ್ರೆಸ್, ಜೆಡಿಎಸ್ ಶಾಸಕರು ಮುಂಬೈಗೆ ಹಾರಲು ಆಪರೇಷನ್ ಮಾಸ್ಟರ್ಸ್ ಗೇಮ್ ನಡೆದಿತ್ತು. ಮುಂಬೈಗೆ ಶಾಸಕರನ್ನ ಕರೆದುಕೊಂಡು ಹೋಗಲು ಒಬ್ಬರ ಟೀಂ, ಮುಂಬೈ ಹೋಟೆಲ್‍ನಲ್ಲಿ ಶಾಸಕರ ಕಾವಲು ಕಾಯಲು ಒಬ್ಬರ ಟೀಂ, ಶಾಸಕರ ಮನವೊಲಿಸಿ ನಂಬರ್ ಒಟ್ಟು ಮಾಡಲು ಒಬ್ಬರ ಟೀಂ, ಹೀಗೆ ಮೂರು ಟೀಂಗಳಲ್ಲಿ ಬಿಜೆಪಿಯ ಲೀಡರ್ಸ್ ಓಡಾಡಿದ್ದೇ ಓಡಾಡಿದ್ದು. ಆಪರೇಷನ್ ಅಪರೇಟಿಂಗ್ ಟೀಂ ಮೆಂಬರ್ಸ್ ಆಗ ಫುಲ್ ಬ್ಯುಸಿ ಇದ್ರು. ಅಷ್ಟೇ ತಲೆಕೆಡಿಸಿಕೊಂಡಿದ್ರು.
Advertisement
Advertisement
ಆದ್ರೀಗ ಆ ಆಪರೇಷನ್ ಅಪರೇಟ್ಸರ್ ಮಿತ್ರಮಂಡಳಿ ಕೈಗೆ ಸಿಗದೇ ಎಸ್ಕೇಪ್ ಆಗಿದ್ದಾರೆ ಅನ್ನೋದು ಲೇಟೆಸ್ಟ್ ಸುದ್ದಿ. ಮಿತ್ರಮಂಡಳಿಗೆ ಕೊಟ್ಟ ಮಾತನ್ನ ನಡೆಸಿಕೊಡುವ ಬಗ್ಗೆ ಬಿಎಸ್‍ವೈ ಕಡೆ ತೋರಿಸಿ ಎಸ್ಕೇಪ್ ಆಗಿದ್ದಾರಂತೆ ಆಪರೇಷನ್ ಅಪರೇಟರ್ಸ್. ಅದರಲ್ಲೂ ಆರ್.ಅಶೋಕ್, ಡಿಸಿಎಂ ಅಶ್ವಥ್‍ನಾರಾಯಣ್, ಬಿಎಸ್‍ವೈ ಪಿಎ ಸಂತೋಷ್ ತಪ್ಪಿಸಿಕೊಳ್ತಿದ್ದಾರಂತೆ. ಅಂದು ಇದ್ದ ಉತ್ಸಾಹ ಇಂದು ಇಲ್ಲದಿರೋದನ್ನ ನೋಡಿ ಮಿತ್ರಮಂಡಳಿ ಕೆಂಡಾಮಂಡಲವಾಗಿದೆ.
Advertisement
* ಆಪರೇಷನ್ ಅಪರೇಟರ್ ನಂಬರ್ – 1:
> ಆರ್.ಅಶೋಕ್, ಹಾಲಿ ಕಂದಾಯ ಸಚಿವ
– ಬೆಂಗಳೂರು ಶಾಸಕರ ಮನವೊಲಿಕೆ ಜವಾಬ್ದಾರಿ
– ಪಕ್ಷೇತರ ಶಾಸಕರನ್ನ ಮುಂಬೈಗೆ ಕರೆದುಕೊಂಡು ಹೋಗಿದ್ರು
Advertisement
* ಆಪರೇಷನ್ ಅಪರೇಟರ್ ನಂಬರ್ – 2:
> ಡಾ.ಸಿ.ಎನ್.ಅಶ್ವಥ್‍ನಾರಾಯಣ, ಹಾಲಿ ಡಿಸಿಎಂ
– ಮುಂಬೈನಲ್ಲಿ ಶಾಸಕರ ಜತೆ ಇದ್ದು ಕಾವಲಿದ್ದವರು
– ಶಾಸಕರ ಜತೆ ತಿಂಗಳ ತನಕವೂ ಹೋಟೆಲ್‍ನಲ್ಲಿ ತಂಗಿದ್ರು
* ಆಪರೇಷನ್ ಅಪರೇಟರ್ ನಂಬರ್ – 3:
> ಸಂತೋಷ್, ಬಿಎಸ್‍ವೈ ಆಪ್ತ ಸಹಾಯಕ
– ಮುಂಬೈಗೆ ಪಕ್ಷೇತರ ಶಾಸಕರನ್ನ ಕರೆದುಕೊಂಡು ಹೋಗಿದ್ದು
– ಬೆಂಗಳೂರಿನಿಂದ ಕೆಲ ಶಾಸಕರನ್ನ ವಿಶೇಷ ವಿಮಾನದಲ್ಲಿ ಶಿಫ್ಟ್ ಮಾಡಿದ್ರು