-ಜೆಡಿಎಸ್‍ನ ಇಬ್ಬರು ಬಿಜೆಪಿ ಕಚೇರಿಯಲ್ಲಿ ಪ್ರತ್ಯಕ್ಷ
ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಹುನ್ನಾರ ಮಾಡ್ತಿದೆ ಅನ್ನೋ ಆರೋಪ ಪದೇ ಪದೇ ಕೇಳಿ ಬರುತ್ತಿರೋ ಬೆನ್ನಲ್ಲೇ, ರಾಜ್ಯ ರಾಜಕೀಯದಲ್ಲಿ ಹೊಸದೊಂದು ಆಡಿಯೋ ಇಂದು ಹರಿದಾಡುತ್ತಿದೆ. ಈ ಎಲ್ಲ ಘಟನೆಗಳ ನಡುವೆ ಜೆಡಿಎಸ್ ನ ಇಬ್ಬರು ನಾಯಕರು ಬಿಜೆಪಿ ಕಚೇರಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ಬಿಬಿಎಂಪಿಯಲ್ಲಿ ಆಪರೇಷನ್ ಕಮಲ ನಡೆಯುತ್ತಿದೆಯಾ ಎಂಬ ಮತ್ತೊಂದು ಪ್ರಶ್ನೆ ಹುಟ್ಟಿಕೊಂಡಿದೆ.
ಲಗ್ಗರೆ ವಾರ್ಡ್ ಸದಸ್ಯೆ ಮಂಜುಳಾರ ಪತಿ ಮತ್ತು ಬಿಟಿಎಂ ಲೇಔಟ್ ವಾರ್ಡ್‍ನ ಪಾಲಿಕೆ ಸದಸ್ಯ ದೇವದಾಸ್ ಬಿಜೆಪಿ ಕಚೇರಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರಿಗೆ ಬಿಬಿಎಂಪಿಯಲ್ಲಿ ಉಪಮೆಯರ್ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಬಿಜೆಪಿ ಜೊತೆ ಕೈ ಜೋಡಿಸಿದ್ರಾ ಎಂಬ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ.
Advertisement
Advertisement
ರಮಿಳಾ ಉಮಾಶಂಕರ್ ಅವರ ನಿಧನದಿಂದ ತೆರವಾದ ಉಪಮೇಯರ್ ಸ್ಥಾನಕ್ಕೆ ನಾಗಪುರ ವಾರ್ಡ್ ನ ಜೆಡಿಎಸ್ ಸದಸ್ಯ ಭದ್ರೆಗೌಡ ಹೆಸರು ಅಂತಿಮ ಗೊಂಡಿದೆ ಎನ್ನಲಾಗ್ತಿದೆ. ಇಂದು ಸಂಜೆ 6 ಗಂಟೆಗೆ ಜೆಡಿಎಸ್ ರಾಜ್ಯ ನಾಯಕರು ಹಾಗೂ ಕಾರ್ಪೋರೆಟರ್ ಗಳ ಸಭೆಯಲ್ಲಿ ಭದ್ರೇಗೌಡ ಹೆಸರನ್ನು ಅಧಿಕೃತವಾಗಿ ಪ್ರಕಟಿಸುತ್ತೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇಬ್ಬರು ನಾಯಕರು ಜಡಿಎಸ್ ಕೈ ಕೊಡುತ್ತಾರಾ ಎಂಬ ಪ್ರಶ್ನೆ ಮೂಡಿದೆ.
Advertisement
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv