ಬೆಂಗಳೂರು: ಕಾಂಗ್ರೆಸ್ ಶಾಸಕ ಭೀಮಾನಾಯ್ಕ್ ಮುಂಬೈನಿಂದ ಬೆಂಗಳೂರಿಗೆ ಬಂದ ಬೆನ್ನಲ್ಲೆ ಆಪರೇಷನ್ ಕಮಲ ಫೇಲ್ ಆಯ್ತು ಎಂದು ಹೇಳಲಾಗಿತ್ತು. ಆದ್ರೆ ಆಪರೇಷನ್ ಕಮಲ ಚಾಲ್ತಿಯಲ್ಲಿದೆ ಅನ್ನೋದು ಬಿಜೆಪಿ ಪಾಳಯದಲ್ಲಿ ನಡೆಯುತ್ತಿರುವ ಹೊಸ ಚರ್ಚೆ. ಇನ್ನೆರಡು ಬಿಜೆಪಿ ಶಾಸಕರು ಹರಿಯಾಣದ ಗುರುಗ್ರಾಮದ ರೆಸಾರ್ಟ್ ನಲ್ಲಿ ಇರಲಿದ್ದಾರೆ. ಇಂದು ಅಥವಾ ನಾಳೆ ಬಿಜೆಪಿ ಪಾಲಿಗೆ ಬಹು ದೊಡ್ಡ ದಿನವೇ ಎಂಬ ಮಾತುಗಳು ಕೇಳಿ ಬರುತ್ತಿವೆ.
ಏನದು ಹೊಸ ಲೆಕ್ಕ?
ಬೆಂಗಳೂರಿಗೆ ಬಂದ ಶಾಸಕ ಭೀಮಾನಾಯ್ಕ್ ನಾನು ಸ್ಮೇಹಿತರೊಂದಿಗೆ ಗೋವಾ ಪ್ರವಾಸಕ್ಕೆ ಹೋಗಿದ್ದರಿಂದ ಯಾರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ ಅಂತಾ ಹೇಳಿದ್ರೆ, ಬಂಡಾಯದ ಬಾವುಟ ಹಾರಿಸಿದ್ದ ಕುಂದಾ ನಗರಿ ಸಾಹುಕಾರ ರಮೇಶ್ ಜಾರಕಿಹೊಳಿ ಅವರ ಮನವೊಲಿಸುವಲ್ಲಿ ಕಾಂಗ್ರೆಸ್ ಬಹುತೇಕ ಯಶಸ್ವಿಯಾಗಿದೆ. ಆದರೂ ಮುಂಬೈನಲ್ಲಿ ಇನ್ನು 7 ಜನ ಕಾಂಗ್ರೆಸ್ ಶಾಸಕರಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗುತ್ತಿವೆ. ಇವರೊಂದಿಗೆ ಬಿಜೆಪಿಯ ಮೂವರು ನಾಯಕರು ಮತ್ತು ಪಕ್ಷೇತರ ಇಬ್ಬರು ಶಾಸಕರು ಮುಂಬೈನಿಂದ ಹೊರ ಬಂದಿಲ್ಲ. ಇದನ್ನೂ ಓದಿ: ಆಪರೇಷನ್ ಕಮಲದ ರಹಸ್ಯ ಬಿಚ್ಚಿಟ್ಟ ಯಡಿಯೂರಪ್ಪ
ಒಟ್ಟು 7 ಜನ ಶಾಸಕರು ಬಿಜೆಪಿ ಪರವಿದ್ದಾರೆ ಎಂದು ಹೇಳಲಾಗುತ್ತಿದೆ. ಸಿದ್ದಗಂಗಾ ಶ್ರೀಗಳ ಆರೋಗ್ಯ ವಿಚಾರಿಸಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಇಂದು ಗುರುಗ್ರಾಮಕ್ಕೆ ಹಿಂದಿರುಗಲಿದ್ದಾರೆ. ಇತ್ತ ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕಾಂಗದ ಸಭೆಯನ್ನು ನಾಳೆ(ಶುಕ್ರವಾರ) ಕರೆದಿದ್ದಾರೆ. ಈ ಸಭೆಗೆ ಎಲ್ಲ ಶಾಸಕರು ಭಾಗಿಯಾಗುವುದು ಕಡ್ಡಾಯ. ಈ ಸಭೆಗೆ ಯಾರೆಲ್ಲ ಬರುತ್ತಾರೆ? ಗೈರಾಗುವರರನ್ನು ಬಿಜೆಪಿಯತ್ತ ಸೆಳೆಯಲು ಕಮಲ ನಾಯಕರು ಪ್ರಯತ್ನಿಸುವ ಸಾಧ್ಯತೆಗಳಿವೆ. ಕಾಂಗ್ರೆಸ್ ಶಾಸಕಾಂಗ ಸಭೆ ಮುಗಿಯವರೆಗೂ ಕಾದು ನೋಡುವ ತಂತ್ರಕ್ಕೆ ಬಿಜೆಪಿ ಮುಂದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಬಿಜೆಪಿ ಕದ ತಟ್ಟಿ ಬಂದ ಕಾಂಗ್ರೆಸ್ ಶಾಸಕರಿಗೆ ಭರ್ಜರಿ ಗಿಫ್ಟ್!
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv