ಬೆಂಗಳೂರು: ಜಿಮ್ ಕಾರ್ಬೆಟ್ ಅವರ ಸಂಗ್ರಹಾನುವಾದ ಕೃತಿ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಅವರ `ರುದ್ರಪ್ರಯಾಗದ ಭಯಾನಕ ನರಭಕ್ಷಕ’ ಕೃತಿಯಲ್ಲಿ ಬರುವ ಥ್ರಿಲ್ಲಿಂಗ್ ದೃಶ್ಯಗಳು ಈಗ ಬೆಂಗಳೂರಿನಲ್ಲಿ (Bengaluru) ನೇರವಾಗಿಯೇ ಕಂಡಂತಿದೆ.
Advertisement
ಅಂದೊಂದು ಕಾಲದಲ್ಲಿ ಉತ್ತರಪ್ರದೇಶದ ರುದ್ರ ಪ್ರಯಾಗದಲ್ಲಿ 6 ಗಂಟೆಯಾಗ್ತಿದ್ದಂತೆ ಯಾರೊಬ್ಬರೂ ಮನೆಯಿಂದಾಚೆ ಬರುತ್ತಿಲ್ಲ. ನಾಳೆ ಬೆಳಗಾಗುವಷ್ಟರಲ್ಲಿ ಯಾರು ಜೀವಂತವಾಗಿರುತ್ತಿದ್ದರೂ ಅನ್ನೋದೇ ಅನುಮಾನವಿತ್ತು. ಏಕೆಂದರೆ ಅದೊಂದು ಚಿರತೆ ನೂರಾರು ಜನರನ್ನ ಬಲಿ ಪಡೆದಿತ್ತು. ದಾಖಲೆಯಾಗದ ಇನ್ನೂ ಅನೇಕ ನರಬಲಿಗಳು ನಡೆದಿವೆ ಎಂದು ಉಲ್ಲೇಖಿಸಲಾಗಿತ್ತು. ಈಗ ಬೆಂಗಳೂರಿನಲ್ಲಿ ಅಂತಹದ್ದೇ ಪರಿಸ್ಥಿತಿ ಎದುರಾಗಿದೆ. ಚಿರತೆ ಹಾವಳಿ ಹೆಚ್ಚಾಗಿದ್ದು, ಒಬ್ಬೊಬ್ಬರೇ ಓಡಾಡೋದು ಜೀವಕ್ಕೆ ಕಂಟಕವಾದಂತೆ ಪರಿಣಮಿಸಿದೆ.
Advertisement
Advertisement
5ನೇ ದಿನಕ್ಕೆ ಬಂದ್ರು ಕಾಣಿಸದ ಚಿರತೆ:
ಹೌದು. ಕಳೆದ ಗುರುವಾರ ಬೆಳಗ್ಗೆ ಜಿಂಕೆಯೊಂದನ್ನ ಚಿರತೆಯೊಂದು ಬೇಟೆಯಾಡಿ ತಿಂದು ಹೋಗಿದ್ದ ಕುರುವು ತುರಹಳ್ಳಿ ಅರಣ್ಯದ ಭಾಗದಲ್ಲಿ ಕಾಣಿಸಿಕೊಂಡಿತ್ತು. ಅದೇ ಭಾಗದಲ್ಲಿ ಚಿರತೆಯ ಸಂಚಾರವಾಗ್ತಿದೆ ಅನ್ನೋ ಮಾತುಗಳು ಕೇಳಿ ಬಂದಿತ್ತು. ಅರಣ್ಯ ಇಲಾಖೆಗೆ ಚಿರತೆ ಕಾಡಿನಿಂದ ಹೊರ ಬಂದು ಸಿಲಿಕಾನ್ ಸಿಟಿಯ ಜನರ ಅದರಲ್ಲೂ ಈ ಭಾಗದ ಜನರ ಭಯಕ್ಕೆ ಕಾರಣವಾಗ್ತಿದೆ ಅನ್ನೋದು ತಿಳಿಯೋಕೆ ಹೆಚ್ಚು ಸಮಯ ಹಿಡಿಯಲಿಲ್ಲ.
Advertisement
ಕಳೆದ ಗುರುವಾರದಿಂದ ಅರಣ್ಯ ಇಲಾಖೆಯ ಸಿಬ್ಬಂದಿ ಚಿರತೆಯನ್ನ (Leopard) ಸೆರೆಹಿಡಿಯಲು ತುರಹಳ್ಳಿ ಅರಣ್ಯವಲಯದ (Turahalli Forest) ನಾನಾ ಕಡೆ ಬೋನ್ ಇಟ್ಟು ಕಾಯ್ತಿದ್ದಾರೆ. ಜೊತೆಗೆ ರಾತ್ರಿ ಸಮಯದಲ್ಲಿ ಪೆಟ್ರೋಲಿಂಗ್ ಕೂಡ ಮಾಡ್ತಿದ್ದಾರೆ. ಆದರೆ ಚಿರತೆ ಮಾತ್ರ ಸರೆಯಾಗ್ತಿಲ್ಲ. ಚಿರತೆ ಓಡಾಟ ಮಾಡಿದೆ ಅನ್ನೋದಕ್ಕೆ ಅದರ ಹೆಜ್ಜೆ ಗುರುತುಗಳು ಮಾತ್ರ ಅರಣ್ಯ ಅಧಿಕಾರಿಗಳಿಗೆ ಸಿಗ್ತಿದೆ. ಹಾಗಾದ್ರೆ ಚಿರತೆ ಇನ್ನೂ ಸೆರೆಸಿಗದೇ ಇರೋದಕ್ಕೆ ಕಾರಣವೇನು? ಚಿರತೆಯ ಕಾರ್ಯಾಚರಣೆ ಸರಿಯಾಗಿ ಆಗ್ತಿಲ್ವಾ? ಚಿರತೆ ತುರಹಳ್ಳಿ ಫಾರೆಸ್ಟ್ ಬಿಟ್ಟು ಹೋಗಿದ್ಯಾ? ಹೀಗೆ ಅನೇಕ ಪ್ರಶ್ನೆಗಳು ಸಾರ್ವಜನಿಕರಲ್ಲಿ ಕೇಳಿ ಬರ್ತಿದೆ. ಅದಕ್ಕೆ ಕೆಲವು ಕಾರಣಗಳನ್ನು ವನ್ಯಜೀವಿ ತಜ್ಞರು (Wildlife Experts) ಹಾಗೂ ಅರಣ್ಯಾಧಿಕಾರಿಗಳು (Forest Officers) ತಿಳಿಸಿದ್ದಾರೆ.
ಚಿರತೆ ಸೆರೆಯಾಗದಿರಲು ಕಾರಣಗಳೇನು?
ಚಿರತೆ ವನ್ಯ ಜೀವಿಗಳಲ್ಲೇ ಅತ್ಯಂತ ಬುದ್ಧಿವಂತ, ಕ್ಷಣಾರ್ಧದಲ್ಲಿ ಕಣ್ಣಿಗೆ ಕಾಣಿಸದಂತೆ ಮಾಯವಾಗುವ ಚಾಣಾಕ್ಷ ಜೀವಿ. ಯಾವುದೇ ವಾತಾವರಣದಲ್ಲೂ ನಿರಾಳವಾಗಿ ಇರಬಲ್ಲ ಜೀವಿ. ರಾತ್ರಿ ವೇಳೆಯಲ್ಲೇ ಸಂಚಾರ ಮಾಡುತ್ತೆ. ಬೆಳಗ್ಗಿನ ಜಾವ ಸಂಚಾರ ಮಾಡೋದು ಬಹುತೇಕ ಕಡಿಮೆ. ದಟ್ಟ ಅರಣ್ಯಗಳಲ್ಲಿ ಚಿರತೆಗಳು ತಮ್ಮದೇ ಆದ ಟೆರಿಟರಿ ಹಾಕಿಕೊಂಡಿರುತ್ತೆ. ಬೆಂಗಳೂರಿನ ತುರಹಳ್ಳಿ ಅರಣ್ಯ ಸಣ್ಣ ಅರಣ್ಯವಾಗಿರೋದ್ರಿಂದ ಎಲ್ಲ ಕಡೆ ಸಂಚಾರ ಮಾಡೋ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ.
ತುರಹಳ್ಳಿಯಲ್ಲಿ ಮೂರು ಕಿರು ಅರಣ್ಯ ಪ್ರದೇಶ (ಕಾಡು ಪ್ರಾಣಿಗಳು ತೀರಾ ಕಡಿಮೆ ಇರೋ ಪ್ರದೇಶ), ರಾಜ್ಯ ಅರಣ್ಯ ಪ್ರದೇಶ ಹಾಗೂ ಮೀಸಲು ಅರಣ್ಯ ಪ್ರದೇಶವಿದೆ. ಮೂರು ಅರಣ್ಯಕ್ಕೂ ಕಾರಿಡರ್ ಇದೆ. ಹಾಗಾಗಿ ಚಿರತೆ ನಿರಂತರವಾಗಿ ಈ ಮೂರು ಅರಣ್ಯದಲ್ಲಿ ಸಂಚಾರ ಮಾಡ್ತಿರಬಹುದು. ಕಾಡಿನ ಸಮೀಪದಲ್ಲಿ ಜನರ ದಟ್ಟಣೆ ಹೆಚ್ಚಾಗಿರೋದು ಚಿರತೆ ಕಾಣಿಸಿಕೊಳ್ಳದೇ ಇರೋದಕ್ಕೂ ಕಾರಣವಾಗಿರಬಹುದು.
ಕಾಡಿನ ಒಳಗೆ ಅಥವಾ ಅಂಚಿನಲ್ಲಿ ಅವಿತು ಕುಳಿತಿದ್ರೂ ತಿಳಿಯೋದಕ್ಕೆ ಕಷ್ಟ. ಬೋನ್ ಬಳಿ ಬರೋ ವೇಳಗೆ ಚಿರತೆ ಬೇಟೆಯಾಡಿದ್ರೇ ಬೋನ್‌ನಲ್ಲಿರೋ ಪ್ರಾಣಿ ಬಳಿಗೆ ಬರೋದಿಲ್ಲ. ಕಾಡಿನಲ್ಲಿ ಜನರ ಸಂಚಾರವಾಗ್ತಿದ್ರೂ ಚಿರತೆ ಕಾಣಿಸಿಕೊಳ್ಳದೇ ಇರಬಲ್ಲ ವನ್ಯ ಜೀವಿ. ನಿರಂತರವಾಗಿ ಜಾಗದ ಬದಲಾವಣೆ ಮಾಡಬಲ್ಲದು. ಬೇರೆ ಪ್ರದೇಶಕ್ಕೆ ಹೋಗಿರಬಹುದು ಎಂದು ಅಂದಾಜಿಸಲಾಗಿದೆ.
ಇವೆಲ್ಲಾ ಕಾರಣಗಳಿಂದ ಚಿರತೆ ಇನ್ನೂ ಸೆರೆ ಸಿಕ್ಕಿಲ್ಲ. ಚಿರತೆ ಸೆರೆ ಸಿಗೋದಕ್ಕೆ ಬಹಳ ದಿನಗಳು ಬೇಕಾಗುತ್ತೆ ಅನ್ನೋದು ವನ್ಯ ಜೀವಿ ತಜ್ಞರ ಮಾತು. ಇದಕ್ಕೆ ಕಣ್ಮುಂದೆ ಇರೋ ಉದಾಹರಣೆ ಅಂದ್ರೆ ಟಿ. ನರಸೀಪುರದಲ್ಲಿ 15 ದಿನದಿಂದ ಚಿರತೆ ಸೆರೆಯ ಕಾರ್ಯಾಚರಣೆ ನಡೆಯುತ್ತಿದ್ದರೂ ಅದು ಇನ್ನೂ ಪತ್ತೆಯಾಗದೇ ಇರೋದು. ತಾಳ್ಮೆ ಎಚ್ಚರಿಕೆ ಎರಡೂ ಅತ್ಯಗತ್ಯ. ಚಿರತೆ ಸೆರೆಯಾಗುವವರೆಗೆ ಅರಣ್ಯ ಇಲಾಖೆಯ ಕಾರ್ಯಾಚರಣೆ ಮುಂದುವರಿಯೋದಂತು ಪಕ್ಕಾ.