-ಕಾಂಗ್ರೆಸ್ 14 ಶಾಸಕರು ಬಿಜೆಪಿ ಸೇರ್ತಾರಾ?
ಬೆಂಗಳೂರು: ಈ ತಿಂಗಳ ಆರಂಭದಿಂದಲೂ ಆಪರೇಷನ್ ಕಮಲದ ಮಾತುಗಳು ಕೇಳಿ ಬರುತ್ತಿವೆ. ಇತ್ತ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೂಚನೆಯ ಮೇರೆಗೆ ರಾಜ್ಯದ ಕಮಲ ಶಾಸಕರು ಗುರುಗ್ರಾಮ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಇತ್ತ ಕಾಂಗ್ರೆಸ್ ನ ಕೆಲ ಅತೃಪ್ತ ಶಾಸಕರು ಮುಂಬೈನಲ್ಲಿದ್ದಾರೆ. ಮುಂಬೈನಲ್ಲಿರುವ ಕಾಂಗ್ರೆಸ್ ಶಾಸಕರೊಂದಿಗೆ ಬಿಜೆಪಿ ಹೈಕಮಾಂಡ್ ನಾಯಕರು ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.
ಮುಂಬೈ ಐಶಾರಾಮಿ ರೆಸಾರ್ಟ್ ನಲ್ಲಿ ಒಟ್ಟು 14 ಶಾಸಕರಿದ್ದಾರೆ ಎಂಬ ಅಂಕಿ ಅಂಶಗಳು ಲಭ್ಯವಾಗುತ್ತಿದ್ದು, ಎಲ್ಲರಿಂದಲೂ ರಾಜೀನಾಮೆ ಕೊಡಿಸಲು ಬಿಜೆಪಿ ಮಹಾತಂತ್ರವನ್ನು ರಚಿಸಿದೆಯಂತೆ. ಜೆಡಿಎಸ್ ಮತ್ತು ಕಾಂಗ್ರೆಸ್ ತಮ್ಮ ಶಾಸಕರನ್ನು ಸೆಳೆಯಬಾರದು ಎಂಬ ಉದ್ದೇಶದಿಂದಲೇ ಎಲ್ಲರನ್ನು ರಕ್ಷಿಸುವ ಸಲುವಾಗಿಯೇ ಗುರುಗ್ರಾಮದಲ್ಲಿ ಇರಿಸಲಾಗಿದೆಯಂತೆ. ಬಿಜೆಪಿ ಶಾಸಕರು ಉಳಿದುಕೊಂಡಿರುವ ರೆಸಾರ್ಟ್ ನ ಒಂದು ದಿನದ ಬಾಡಿಗೆ ಹಣ ಕೇಳಿದ್ರೆ ನೀವು ಶಾಕ್ ಆಗ್ತೀರಿ. ಹಾಗಾಗಿ ಇದೊಂದು ದುಬಾರಿ ಅಪರೇಷನ್ ಎಂಬ ಮಾತುಗಳು ಕೇಳಿ ಬರುತ್ತಿವೆ.
Advertisement
Advertisement
ರೆಸಾರ್ಟ್ ಹೆಸರು: ಐಟಿಸಿ ಗ್ರ್ಯಾಂಡ್ ಭಾರತ್
ಅರಾವಳಿ ಬೆಟ್ಟಗಳ ನಡುವೆ ಇರುವ ದುಬಾರಿ ರೆಸಾರ್ಟ್
(ಹರಿಯಾಣದ ಗುರುಗ್ರಾಮ)
ಒಬ್ಬರಿಗೆ ದಿನದ ವೆಚ್ಚ : 47,360 ರೂ.
ಒಟ್ಟು ಬಿಜೆಪಿ ಶಾಸಕರ ವೆಚ್ಚ: 49,25,440 ರೂ.
(ಅಂದ್ರೆ ಹೆಚ್ಚು ಕಮ್ಮಿ ಬರೋಬ್ಬರಿ ಅರ್ಧ ಕೋಟಿ)
Advertisement
ಬಿಜೆಪಿ ಶಾಸಕರು ವಾಸ್ತವ್ಯ ಹೂಡಿರುವ ರೆಸಾರ್ಟ್ ಗೆ ಬಿಗಿಭದ್ರತೆ ನೀಡಲಾಗಿದ್ದು, ಯಾರನ್ನು ಒಳಗೆ ಬಿಡುತ್ತಿಲ್ಲ. ರಾಜ್ಯ ರಾಜಕಾರಣದಲ್ಲಿ ಈ ಸಂಬಂಧ ಚರ್ಚೆಗಳು ನಡೆದಿವೆ. ಆಪರೇಷನ್ ಕಮಲವನ್ನು ಬಿಜೆಪಿ ಮೂರು ಹಂತಗಳಲ್ಲಿ ನಡೆಸಲು ತೀರ್ಮಾನಿಸಿದೆ ಸೋಮವಾರ ಪಬ್ಲಿಕ್ ಟಿವಿ ಸುದ್ದಿಯನ್ನು ಬಿತ್ತರಿಸಿತ್ತು.
Advertisement
ದೆಹಲಿಯಲ್ಲಿ ಬಿಜೆಪಿ ಶಾಸಕರು ವಾಸ್ತವ್ಯ ಹೂಡಿದ್ರೆ, ಕಾಂಗ್ರೆಸ್ 14 ಮಂದಿ ಅತೃಪ್ತ ಶಾಸಕರು ಮುಂಬೈನಲ್ಲಿ ಬೀಡುಬಿಟ್ಟಿದ್ದಾರೆ. ಮುಂಬೈನ ಪೂವೈ ಏರಿಯಾ ಹೋಟೆಲ್‍ನಲ್ಲಿ ತಂಗಿದ್ದು, ಇನ್ನೂ ಓರ್ವ ಶಾಸಕರಿಗಾಗಿ ಕಾಯುತ್ತಿದ್ದಾರೆ. ಅಲ್ಲದೆ ಇಂದು ಬಿಜೆಪಿ ನಾಯಕ, ಕೇಂದ್ರ ಸಚಿವ ನಿತಿನ ಗಡ್ಕರಿ ಕಾಂಗ್ರೆಸ್ ಅಸಮಾಧಾನಿತರನ್ನು ಭೇಟಿಯಾಗಲಿದ್ದಾರೆ. ನಂತರ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನಾವಿಸ್ ಕೂಡಾ ಭೇಟಿಯಾಗಲಿದ್ದಾರೆ ಎನ್ನಲಾಗುತ್ತಿದೆ.
ಬಿಜೆಪಿ ತಂತ್ರಕ್ಕೆ ತಿರುಗೇಟು ಕೊಟ್ಟಿರುವ ಕಾಂಗ್ರೆಸ್ ಹೈಕಮಾಂಡ್ ಅತೃಪ್ತ ಕಾಂಗ್ರೆಸ್ ಶಾಸಕರ ಮನವೊಲಿಸುವಂತೆ ರಾಜ್ಯ ನಾಯಕರಿಗೆ ಸೂಚಿಸಿದೆ. ಅದ್ರಂತೆ ಇಂದು ದೋಸ್ತಿಗಳ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಅತೃಪ್ತರ ಮನವೊಲಿಕೆಗೆ ಮುಂಬೈಗೆ ಹೋಗ್ತಿದ್ದಾರೆ. ಹೀಗಾಗಿ ಬಿಜೆಪಿ ಡಿಕೆಶಿ ಆಗಮನಕ್ಕೂ ಮುನ್ನವೇ ಕಾಂಗ್ರೆಸ್ ಅತೃಪ್ತ ಶಾಸಕರನ್ನು ಗೋವಾ ಅಥವಾ ಹೈದ್ರಾಬಾದ್‍ಗೆ ಶಿಫ್ಟ್ ನಡೆಸಲು ಪ್ಲಾನ್ ಮಾಡಿದೆ ಅಂತಾ ಹೇಳಲಾಗ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv