ಬೆಂಗಳೂರು: ಐದು ರಾಜ್ಯಗಳ ಚುನಾವಣಾ ಫಲಿತಾಂಶದ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿದೆ. ರಾಜ್ಯ ಬಿಜೆಪಿಯಲ್ಲೂ ಹೈಕಮಾಂಡ್ ಆಪರೇಷನ್ ಮಾಡುವ ಸಾಧ್ಯಗಳಿವೆ.
ಬಿಜೆಪಿಯ 2 ಮಹಾ ಟೀಂಗಳು ರಾಜ್ಯಕ್ಕೆ ಆಗಮಿಸಿವೆ. 18 ಸದಸ್ಯರನ್ನೊಳಗೊಂಡ ಮೋದಿ-ಶಾ ಜೋಡಿ ನಿಷ್ಠರ 2 ತಂಡ ಈಗಾಗಲೇ ರಾಜ್ಯಕ್ಕೆ ಬಂದಿದ್ದು, ಈ ತಂಡದ ಎಂಟ್ರಿಯಿಂದ ಬಿಜೆಪಿಯಲ್ಲಿ ಕುತೂಹಲ ಮೂಡಿದೆ. ಇದನ್ನೂ ಓದಿ: ರೇಣುಕಾಚಾರ್ಯ ಜೊತೆ ಸೆಲ್ಫಿಗೆ ಮುಗಿಬಿದ್ದ ವಿದ್ಯಾರ್ಥಿನಿಯರು..!
Advertisement
Advertisement
18 ಜನರನ್ನೊಳಗೊಂಡ ಬಿಜೆಪಿಯ 2 ತಂಡಗಳು ರಾಜ್ಯಕ್ಕೆ ಆಗಮಿಸಿವೆ. ಈ ತಂಡ ಶಾಸಕರು, ಮುಖಂಡರು, ಸಂಘದ ಪ್ರಮುಖರನ್ನು ಭೇಟಿ ಆಗಲಿದೆ. ರಾಜ್ಯ ಸರ್ಕಾರದ ಕಾರ್ಯವೈಖರಿ ಏನು..? ಸರ್ಕಾರದಲ್ಲಿ ಯಾರು ಏನ್ ಮಾಡ್ತಿದ್ದಾರೆ..?, ಸಚಿವರ ಕಾರ್ಯ ನಿರ್ವಹಣೆ ಹೇಗಿದೆ..?, ಯಾವ ಇಲಾಖೆ ಮುಂದು..?, ಯಾವುದು ಹಿಂದೆ..?, ಸಚಿವರ ಸುತ್ತ ಇರುವ ಜನರ್ಯಾರು..? ಸಚಿವರ ಆಡಳಿತದ ಬಗ್ಗೆ ಜನರ ಅನಿಸಿಕೆ ಹೇಗಿದೆ..?, ಪಕ್ಷದ ಪದಾಧಿಕಾರಿಗಳು, ರಾಜ್ಯಾಧ್ಯಕ್ಷರ ಕಾರ್ಯವೈಖರಿ ಬಗ್ಗೆಯೂ ಮಾಹಿತಿ ಕಲೆ ಹಾಕಲಿದೆ.
Advertisement
Advertisement
ಶೀಘ್ರದಲ್ಲೇ ತಂಡದಿಂದ ಹೈಕಮಾಂಡ್‍ಗೆ ಸಂಪೂರ್ಣ ವರದಿ ಸಲ್ಲಿಕೆಯಾಗಲಿದ್ದು, ಈ ತಂಡಗಳ ವರದಿ ಮೇಲೆ ರಾಜ್ಯದ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡಲಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ: ಇವನಿಂದ ನಾನೇನು ಕಲಿಯಬೇಕಾಗಿಲ್ಲ, ನನ್ನ ಸುದ್ದಿಗೆ ಇವನು ಬರಬೇಕಾಗಿಲ್ಲ – ಡಿ.ಕೆ.ಸುರೇಶ್‍ಗೆ ಏಕವಚನದಲ್ಲೇ ಹೆಚ್‍ಡಿಕೆ ವಾರ್ನಿಂಗ್