ನವದೆಹಲಿ: ಭಾರತ ಮತ್ತು ಚೀನಾ ನಡುವೆ ಗಡಿ ಕ್ಯಾತೆ ಹೊಗೆಯಾಡುತ್ತಿದ್ದಂತೆ ಲಾಜಿಸ್ಟಿಕ್ಸ್ ಪೂರೈಕೆಯನ್ನು ಬಲಪಡಿಸುವ ಉದ್ದೇಶದಿಂದ ಭಾರತೀಯ ವಾಯುಪಡೆ ಮತ್ತು ಭಾರತೀಯ ಸೇನೆಯು ‘ಆಪರೇಷನ್ ಹರ್ಕ್ಯುಲಸ್’ ಜಂಟಿ ಸಮರಾಭ್ಯಾಸ ನಡೆಸಿದೆ.
Advertisement
ಈ ಬಗ್ಗೆ ಮಾಹಿತಿ ನೀಡಿರುವ ರಕ್ಷಣಾ ಸಚಿವಾಲಯ, ಭಾರತೀಯ ವಾಯುಪಡೆಯ ಉತ್ತರ ಭಾಗದಲ್ಲಿ ಸೇನೆಯ ಲ್ಯಾಜಿಸ್ಟಿಕ್ಸ್ ಬಲಪಡಿಸುವ ಕಾರ್ಯಕ್ಕೆ ಮುಂದಾಗಿದ್ದು, ಈ ಮೂಲಕ ಹೆವಿ ಲಿಫ್ಟ್ ಸಾಮರ್ಥ್ಯದ ವಾಸ್ತವ ಪ್ರದರ್ಶನ ಕೈಗೊಂಡಿದೆ. ತುರ್ತು ಸಂದರ್ಭಗಳಲ್ಲಿ ತ್ವರಿತವಾಗಿ ಪ್ರತಿಕ್ರಿಯಿಸುವ ಸಾಮರ್ಥ್ಯವನ್ನು ಭಾರತ ಖಾತ್ರಿಪಡಿಸಿಕೊಳ್ಳುವ ಉದ್ದೇಶದಿಂದ ಈ ಸಮರಾಭ್ಯಾಸ ನಡೆಸಲಾಗಿದೆ ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: 4ಜಿ ಡೌನ್‍ಲೋಡ್ ವೇಗದಲ್ಲಿ ಜಿಯೋ ಫಸ್ಟ್
Advertisement
Advertisement
ಏರ್ ಲಿಫ್ಟ್ ಗಾಗಿ C-17, IL – 76 ಮತ್ತು AN – 32 ವಿಮಾನಗಳನ್ನು ಬಳಸಿಕೊಂಡಿದ್ದು, ಪೂರ್ವ ಏರ್ ಕಮಾಂಡ್ ವಾಯುನೆಲೆಯಿಂದ ಟೇಕ್ ಆಫ್ ಆಗಿ ಲಾಜಿಸ್ಟಿಕ್ಸ್ ಪೂರೈಕೆ ಮಾಡಿದೆ. ಮುಂದಿನ ಕೆಲ ತಿಂಗಳುಗಳವರೆಗೆ ಭಾರತದ ಉಳಿದ ಪ್ರದೇಶಗಳಿಂದ ಈ ಪ್ರದೇಶ ಕಡಿತಗೊಳ್ಳುವುದರಿಂದ ಭಾರತ ಈಗಾಗಲೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಭಾರತ ಮತ್ತು ಚೀನಾ ಕಡೆಯಿಂದ ಸುಮಾರು 50,000 ಸೈನಿಕರನ್ನು ನಿಯೋಜಿಸುವುದರೊಂದಿಗೆ ಲಡಾಖ್‍ನಲ್ಲಿ ಚೀನಾದೊಂದಿಗೆ ಬಿಕ್ಕಟ್ಟಿನ ಮಧ್ಯೆ ಈ ಜಂಟಿ ಸಮರಾಭ್ಯಾಸ ನಡೆಸುವ ಮೂಲಕ ಭಾರತ ಗಡಿ ಪ್ರದೇಶದಲ್ಲಿ ಸೈನ್ಯವನ್ನು ಬಲಪಡಿಸಿಕೊಳ್ಳುವತ್ತ ಹೆಜ್ಜೆ ಹಾಕಿದೆ. ಗಡಿ ಪ್ರದೇಶಗಳಲ್ಲಿ ಫಿರಂಗಿಗಳು, ಟ್ಯಾಂಕ್‍ಗಳು, ಕ್ಷಿಪಣಿಗಳು ಮತ್ತು ಯುದ್ಧೋಪಕರಣಗಳನ್ನು ಶೇಖರಿಸಿಡಲಾಗಿದೆ. ಈ ಮಧ್ಯೆ ಭಾರತ ಮತ್ತು ಚೀನಾ ನಡುವೆ ಗಡಿ ಬಿಕ್ಕಟ್ಟಿನ ಬಗ್ಗೆ ಮಾತುಕತೆ ಮುಂದುವರೆದಿದೆ. ಇದನ್ನೂ ಓದಿ: ‘ಜೈ ಭೀಮ್’ ನಟ ಸೂರ್ಯಗೆ ಜೀವ ಬೆದರಿಕೆ- ನಟನ ಮನೆಗೆ ಪೊಲೀಸ್ ಭದ್ರತೆ
Advertisement