ಮಂಡ್ಯ: ರಾಜ್ಯದಲ್ಲಿ ಸದ್ಯ ಕಾಂಗ್ರೆಸ್ (Congress) ಮುಂಬರುವ ಲೋಕಸಭಾ ಚುನಾವಣೆಯನ್ನು ಟಾರ್ಗೆಟ್ ಮಾಡಿದ್ದು, ಆಪರೇಷನ್ ಹಸ್ತಕ್ಕೆ ಕೈ ನಾಯಕರು ಮುಂದಾಗಿದ್ದಾರೆ ಎಂಬ ಸುದ್ದಿ ರಾಜಕೀಯ ಪಡಸಾಲೆಯಲ್ಲಿ ಜೋರಾಗಿ ಕೇಳಿ ಬರುತ್ತಿದೆ. ಅದೇ ರೀತಿ ಸಕ್ಕರೆನಾಡು ಮಂಡ್ಯದಲ್ಲಿ ಕಾಂಗ್ರೆಸ್ ತನ್ನ ಎಂಪಿ ಅಭ್ಯರ್ಥಿಗೆ ಜೆಡಿಎಸ್ (JDS) ನಾಯಕನಿಗೆ ಗಾಳ ಹಾಕಲು ಆಪರೇಷನ್‍ಗೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ಹೌದು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಿದ ಮೇಲೆ ಬಿಜೆಪಿ (BJP) ಹಾಗೂ ಜೆಡಿಎಸ್ ನಾಯಕರನ್ನು ಕರೆತಂದು ಎಂಪಿ ಅಭ್ಯರ್ಥಿಯನ್ನಾಗಿ ಮಾಡಿ ಲೋಕ ಸಮರ ಗೆಲ್ಲುವ ಲೆಕ್ಕಾಚಾರದಲ್ಲಿದೆ. ಮಂಡ್ಯದಲ್ಲಿ ಕಾಂಗ್ರೆಸ್‍ಗೆ ಸೂಕ್ತ ಎಂಪಿ ಅಭ್ಯರ್ಥಿ ಇಲ್ಲ. ಅಭ್ಯರ್ಥಿ ಇಲ್ಲದ ಕಾರಣ ಜೆಡಿಎಸ್‍ನ ನಾಯಕನೊಬ್ಬನನ್ನು ಕರೆತಂದು ಅಭ್ಯರ್ಥಿ ಮಾಡುವ ಪ್ಲಾನ್‍ನನ್ನು ಕೈ ನಾಯಕರು ಮಾಡ್ತಾ ಇದ್ದಾರೆ.
ಸದ್ಯ ಜೆಡಿಎಸ್ ಹಾಗೂ ರಾಜಕೀಯ ಮುಖಂಡರ ಪೈಕಿ ಪ್ರಭಾವಿ ನಾಯಕರೆಂದರೆ ಅದು ಸಿ.ಎಸ್.ಪುಟ್ಟರಾಜು. ಹೀಗಾಗಿ ಕಾಂಗ್ರೆಸ್ ಪುಟ್ಟರಾಜು (C S Puttarju) ಆಪರೇಷನ್‍ಗೆ ಕೈ ಹಾಕುವ ಪ್ರಯತ್ನದಲ್ಲಿದೆ ಎಂಬ ಮಾತುಗಳು ಕೇಳಿ ಬಂದಿವೆ. ಇದಕ್ಕೆ ಸಚಿವ ಚಲುವರಾಯಸ್ವಾಮಿಯವರ ಶುಕ್ರವಾರ ಮಂಡ್ಯ ಹೇಳಿಕೆ ಮತ್ತಷ್ಟು ಪುಷ್ಟಿ ನೀಡಿದೆ. ಆದರೆ ಈವರೆಗೆ ಪುಟ್ಟರಾಜು ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದನ್ನೂ ಓದಿ: ಸುಧಾಕರ್ ಮತ್ತೆ ಕಾಂಗ್ರೆಸ್‌ಗೆ ಬರಲು ನಾನು ಬಿಡಲ್ಲ: ಶಿವಶಂಕರ ರೆಡ್ಡಿ
ಇಂದು (ಶನಿವಾರ) ಸಹ ಪುಟ್ಟರಾಜುಗೆ ಕಾಂಗ್ರೆಸ್ ಗಾಳ ವಿಚಾರಕ್ಕೆ ಚಲುವರಾಯಸ್ವಾಮಿ ಪ್ರತಿಕ್ರಿಯಿಸಿದ್ದು, ನಮಗೆ ಆಡಳಿತ ನಡೆಸಲು ಯಾರ ಅವಶ್ಯಕತೆ ಇಲ್ಲ. ಈಗ ಯಾರ ಹೆಸರನ್ನು ಹೇಳಲ್ಲ, ವಾಲೆಂಟರಿಯಾಗಿ ಪಕ್ಷಕ್ಕೆ ಬಂದ್ರೆ ಸ್ವಾಗತ ಎಂದಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿರುವ ಪುಟ್ಟರಾಜು, ಚಲುವರಾಯಸ್ವಾಮಿ ಹೇಳೋದೆಲ್ಲ ನಿಜವಲ್ಲ. ಈ ಬಗ್ಗೆ ನನಗೆ ಮಾಹಿತಿ ಇಲ್ಲ. ನಾನು ಮಾತಾಡಲ್ಲ ಎಂದಿದ್ದಾರೆ.
ಪುಟ್ಟರಾಜುಗೆ ಕಾಂಗ್ರೆಸ್ ಗಾಳ ಹಾಕ್ತಿದೆ ಎಂಬ ವಿಚಾರಕ್ಕೆ ಹೆಚ್‍ಡಿಕೆ ಪ್ರತಿಕ್ರಿಯಿಸಿ, ಅವರು ಬರೋರಿದ್ದರೆ ಕರೆದುಕೊಂಡು ಹೋಗಿ. ಮೈಸೂರು ಪೇಟ ತೊಡಿಸಿ ಕರೆದುಕೊಂಡು ಹೋಗಿ ಅಂತ ಹೇಳಿದ್ದಾರೆ. ಒಟ್ಟಾರೆ ಲೋಕಸಭಾ ಚುನಾವಣೆ ಸಮೀಪ ಆಪರೇಷನ್ ವಿಚಾರ ಭಾರೀ ಚರ್ಚೆ ಆಗ್ತಿದ್ದು… ಯಾರು ಎಲ್ಲಿಗೆ ಹೋಗ್ತಾರೆ ಎಂಬುದಕ್ಕೆ ಉತ್ತರ ಲೋಕಸಭೆಗೆ ಚುನಾವಣೆ ದಿನಾಂಕ ನಿಗದಿ ಆದ್ಮೇಲೆ ಗೊತ್ತಾಗಲಿದೆ.
Web Stories