ತುಮಕೂರು: ಮನೆಯೊಂದಕ್ಕೆ ಚಿರತೆ ನುಗ್ಗಿದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಅಡುಗೆ ಮನೆಯ ಅಟ್ಟದ ಮೇಲೆ ಕುಳಿತಿದ್ದ ಚಿರತೆಗೆ ಎರಡು ಅರವಳಿಕೆ ಚುಚ್ಚುಮದ್ದು ನೀಡಿ ಚೀತಾವನ್ನು ಸೆರೆಹಿಡಿಯಲಾಗಿದೆ.
Advertisement
ಬೆಳಗ್ಗೆ 8 ಗಂಟೆಗೆ ತುಮಕೂರು ಜಿಲ್ಲೆಯ ಜಯನಗರದ ಬಡಾವಣೆಯ ರಂಗನಾಥ್ ಎಂಬವರ ಮನೆಯಲ್ಲಿ ಚಿರತೆ ಸೇರಿಕೊಂಡಿತ್ತು. ಚಿರತೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ರಂಗನಾಥರ ಪತ್ನಿ ವನಜಾಕ್ಷಿ ಹಾಗೂ ಸೊಸೆ ವಿನೂತಾ ಶೌಚಾಲಯದಲ್ಲಿ ಅಡಗಿ ಕುಳಿತಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಶೌಚಾಲಯಲದಲ್ಲಿ ಬಂಧಿಯಾಗಿದ್ದ, ಅತ್ತೆ-ಸೊಸೆ ಇಬ್ಬರನ್ನು ರಕ್ಷಿಸಲಾಗಿದೆ.
Advertisement
Advertisement
ಸತತ 9 ಗಂಟೆಗಳ ಕಾಲ ನಡೆದ ಆಪರೇಷನ್ ಚೀತಾ ಸಕ್ಸಸ್ ಆಗಿದೆ. ಹಾಸನದಿಂದ ಚಿರತೆಗೆ ಅರವಳಿಕೆ ನೀಡಲು ಅರವಳಿಕೆ ತಜÐರು ಬಂದಿದ್ದರು. ರಂಗನಾಥ್‍ರ ಮನೆಯಲ್ಲಿ ಓಡಾಡಿದ ಚಿರತೆ ಕೂಡ ಇಂದು ಬೆಳಗ್ಗೆ ಆಹಾರ ಸೇವನೆ ಮಾಡದೇ ಇದ್ದಿದರಿಂದ ಅಶಕ್ತವಾಗಿತ್ತು. ಚುಚ್ಚುಮದ್ದು ನೀಡಿದ ಬಳಿಕ ಪ್ರಜ್ಞೆ ತಪ್ಪಿದ ಚಿರತೆಯನ್ನು ಅರಣ್ಯ ಇಲಾಖೆ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಚಿರತೆ ಮನೆ ಸೇರಿಕೊಂಡ ಬಳಿಕ ಸಾವಿರಾರು ಸಂಖ್ಯೆಯಲ್ಲಿ ಜನ ಮನೆಯತ್ತ ನೆರೆದಿದ್ದರು.