ಬೀದರ್: ಖಚಿತ ಮಾಹಿತಿ ಮೇರೆಗೆ ಬೀದರ್ (Bidar) ಪೊಲೀಸರು ತಾಲೂಕಿನ ಬಾವಗಿ ಬಳಿ ದಾಳಿ ನಡೆಸಿ ಮೂವರು ಅಂತರರಾಜ್ಯ ಬೈಕ್ ಕಳ್ಳರನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 14 ಬೈಕ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬೀದರ್‍ನ ಐದು ಬೈಕ್‍ಗಳು, ಹೈದರಾಬಾದ್‍ನ (Hyderabad) ಎಂಟು ಬೈಕ್‍ಗಳು ಹಾಗೂ ಜಹೀರಾಬಾದ್‍ನ (Zahirabad) ಒಂದು ಬೈಕ್ (Bike) ಸೇರಿದಂತೆ ಸುಮಾರು 7.20 ಲಕ್ಷ ರೂ. ಮೌಲ್ಯದ ಬೈಕ್‍ಗಳನ್ನು ಜಪ್ತಿ ಮಾಡಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ವಾಕಿಂಗ್‌ಗೆ ಬಿಟ್ಟಿದ್ದ ನಾಯಿಯನ್ನು ಕದ್ದು ಪರಾರಿಯಾದ ಕಳ್ಳರು
ಹಲವು ದಿನಗಳಿಂದ ಜಿಲ್ಲೆಯಲ್ಲಿ ಅತಿ ಹೆಚ್ಚು ಬೈಕ್ ಕಳ್ಳತನ ಪ್ರಕರಣಗಳು ದಾಖಲಾಗಿದ್ದವು. ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಎಸ್ಪಿ ಚೆನ್ನಬಸವಣ್ಣ ಲಂಗೋಟೆ ವಿಶೇಷ ತಂಡ ರಚನೆ ಮಾಡಿದ್ದರು. ಇದನ್ನೂ ಓದಿ: ಬಿಜೆಪಿ ಶಾಸಕ ಅನಿಲ್ ಬೆನಕೆಗೆ ನಡು ರಸ್ತೆಯಲ್ಲೇ ಮತದಾರರಿಂದ ಕ್ಲಾಸ್