ವಿಜಯನಗರ: ಬೆಂಗಳೂರಿನಲ್ಲಿ (Bengaluru) ಸದ್ದು ಮಾಡಿದ ಬುಲ್ಡೋಜರ್ (Operation Bulldozer) ಘರ್ಜನೆ ಈಗ ನೂತನ ಜಿಲ್ಲೆ ವಿಜಯನಗರಕ್ಕೂ ವ್ಯಾಪಿಸಿದೆ. ರಸ್ತೆ ಮೇಲೆ ಮನೆ ಕಟ್ಟಿದವರಿಗೆ ಇಲ್ಲಿನ ತಾಲೂಕು ಆಡಳಿತ ಬಿಗ್ ಶಾಕ್ ನೀಡಿದೆ. ಕಳೆದ ಒಂದು ತಿಂಗಳಿಂದ ಒತ್ತುವರಿ (Encroachment) ತೆರವು ಕಾರ್ಯಕ್ಕೆ ನಾಂದಿ ಹಾಡಿರುವ ತಾಲೂಕು ಆಡಳಿತ ಈಗ ಮತ್ತೆ ಬುಲ್ಡೋಜರ್ ಸದ್ದು ಮಾಡಲು ಸಿದ್ಧವಾಗಿವೆ.
ಹೌದು, ವಿಜಯನಗರದ (Vijayanagara) ಹೊಸಪೇಟೆ ಜಿಲ್ಲಾ ಕೇಂದ್ರ ಸ್ಥಾನವಾದ ಬಳಿಕ ನಗರದ ಸೌಂದರ್ಯ ಹಾಗೂ ನಗರದ ರಸ್ತೆ ಸುಗಮ ಸಂಚಾರಕ್ಕೆ ಹೆಚ್ಚಿನ ಒತ್ತು ನೀಡಲು ಸ್ಥಳೀಯ ಆಡಳಿತ ಮುಂದಾಗಿದೆ. ಈ ಕಾರಣ ತಮ್ಮ ಸ್ವಂತ ಜಾಗದ ಜೊತೆಗೆ ಸರ್ಕಾರಿ ಜಾಗದಲ್ಲಿ ಮೆಟ್ಟಿಲು, ಕಾಂಪೌಂಡ್ ಕಟ್ಟಿರುವ ಮನೆಗಳಿಗೂ ಶಾಕ್ ನೀಡಿದ್ದಾರೆ. ಅವುಗಳ ತೆರವಿಗೆ ನೋಟಿಸ್ ಜಾರಿ ಮಾಡಿರೋ ತಾಲೂಕು ಕಚೇರಿ 7 ದಿನಗಳ ಒಳಗೆ ಒತ್ತುವರಿ ಮಾಡಿರೋ ಜಾಗ ಬಿಟ್ಟುಕೊಡುವಂತೆ ಆದೇಶಿಸಿದೆ. ಇದನ್ನೂ ಓದಿ: ಗ್ಯಾಂಗ್‌ಸ್ಟಾರ್ ವಿರುದ್ಧ ಜೆಸಿಬಿ ಘರ್ಜನೆ – 4 ಕೋಟಿ ಮೌಲ್ಯದ 4 ಮಹಡಿಯ ಮನೆ ನೆಲಸಮ
Advertisement
Advertisement
ತಹಸೀಲ್ದಾರ್ ನೋಟೀಸ್ ಜಾರಿ ಮಾಡುತ್ತಿದ್ದಂತೆ ಕಂಗಾಲಾಗಿರೋ ನಿವಾಸಿಗಳು, ಏಕಾಏಕಿ ಬಂದು ತೆರವು ಮಾಡಿ ಅಂದ್ರೆ ಎಲ್ಲಿಗೆ ಹೋಗಬೇಕು ಅಂತ ಅಳಲು ತೋಡಿಕೊಂಡಿದ್ದಾರೆ.
Advertisement
Advertisement
ಕಳೆದ ಹಲವಾರು ವರ್ಷಗಳಿಂದ ಒತ್ತವರಿ ತೆರವು ಮಾಡುವ ಕೆಲಸಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ಈವರೆಗೂ ಪೂರ್ಣವಾಗಿಲ್ಲ. ರಾಜಕೀಯ ಒತ್ತಡ, ಕಾನೂನು ಹೋರಾಟ ಹೀಗೆ ಹತ್ತು ಹಲವಾರು ಕಾರಣಗಳಿಂದ ಒತ್ತವರಿ ನಿಂತುಹೋಯಿತು. ಆದರೆ ಈಗಲಾದರೂ ತಾಲೂಕು ಆಡಳಿತ ಒತ್ತವರಿ ತೆರವು ಮಾಡುತ್ತಾ ಕಾದು ನೋಡಬೇಕು. ಇದನ್ನೂ ಓದಿ: NIA ಮಿಡ್‌ನೈಟ್ ಆಪರೇಷನ್- ಬೆಂಗ್ಳೂರಿನಲ್ಲಿ ಶಂಕಿತ ಉಗ್ರ ಯಾಸಿರ್ ಅರೆಸ್ಟ್