ನವದೆಹಲಿ: ಆಪರೇಷನ್ ಬ್ಲೂ ಸ್ಟಾರ್ (Operation Blue Star) ತಪ್ಪು. ಅದಕ್ಕೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ (Indira Gandhi) ಅವರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟರು ಎಂದು ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಗೃಹ ಸಚಿವ ಪಿ.ಚಿದಂಬರಂ (P.Chidambaram) ಅಭಿಪ್ರಾಯಪಟ್ಟಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಇಲ್ಲಿ ಯಾವುದೇ ಮಿಲಿಟರಿ ಅಧಿಕಾರಿಗಳಿಗೆ ಅಗೌರವವಿಲ್ಲ. ಆದರೆ, ಅದು (ಬ್ಲೂ ಸ್ಟಾರ್) ಗೋಲ್ಡನ್ ಟೆಂಪಲ್ ಅನ್ನು ಹಿಂಪಡೆಯಲು ತಪ್ಪು ಮಾರ್ಗವಾಗಿತ್ತು. ಕೆಲವು ವರ್ಷಗಳ ನಂತರ, ಸೈನ್ಯವನ್ನು ಹೊರಗಿಡುವ ಮೂಲಕ ಗೋಲ್ಡನ್ ಟೆಂಪಲ್ ಅನ್ನು ಹಿಂಪಡೆಯಲು ಸರಿಯಾದ ಮಾರ್ಗವನ್ನು ನಾವು ಪ್ರದರ್ಶಿಸಿದ್ದೇವೆ. ಬ್ಲೂ ಸ್ಟಾರ್ ತಪ್ಪು ಮಾರ್ಗವಾಗಿತ್ತು. ಆ ತಪ್ಪಿಗೆ ಇಂದಿರಾ ಗಾಂಧಿಯವರು ತಮ್ಮ ಪ್ರಾಣವನ್ನೇ ತೆತ್ತರು ಎಂದು ಹೇಳಿದ್ದಾರೆ. ಇದನ್ನೂ ಓದಿ: ಪ್ರಧಾನಿ ಭೇಟಿಯಾದ ಸೆರ್ಗಿಯೊ ಗೋರ್ – ಟ್ರಂಪ್ ಮೋದಿಯನ್ನ ಗ್ರೇಟ್ ಫ್ರೆಂಡ್ ಅಂತ ಪರಿಗಣಿಸ್ತಾರೆ: ಯುಎಸ್ ರಾಯಭಾರಿ
ಅಮೃತಸರದ ಗೋಲ್ಡನ್ ಟೆಂಪಲ್ ಸಂಕೀರ್ಣದಿಂದ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ ನೇತೃತ್ವದ ಉಗ್ರಗಾಮಿಗಳನ್ನು ಹೊಡೆದುರುಳಿಸಲು ಇಂದಿರಾ ಗಾಂಧಿಯವರು 1984 ರ ಜೂನ್‌ನಲ್ಲಿ ಆಪರೇಷನ್ ಬ್ಲೂ ಸ್ಟಾರ್ ನಡೆಸಿದ್ದರು.
ಈ ಕಾರ್ಯಾಚರಣೆಯಿಂದ ಭಾರೀ ಸಾವು-ನೋವುಗಳು ಸಂಭವಿಸಿದವು. ಇದು ಸಿಖ್‌ರಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು. ಕೆಲವೇ ತಿಂಗಳುಗಳ ನಂತರ, ಪ್ರತೀಕಾರವಾಗಿ ಗಾಂಧಿಯನ್ನು ಅವರ ಸಿಖ್ ಅಂಗರಕ್ಷಕರು ಹತ್ಯೆ ಮಾಡಿದರು. ಇದು ದೇಶಾದ್ಯಂತ ಭೀಕರ ಸಿಖ್ ವಿರೋಧಿ ಗಲಭೆಗಳಿಗೆ ಕಾರಣವಾಯಿತು. ಇದನ್ನೂ ಓದಿ: ತಾಲಿಬಾನ್ ಸಚಿವನ ಸುದ್ದಿಗೋಷ್ಠಿಯಲ್ಲಿ ಮಹಿಳಾ ಪತ್ರಕರ್ತರಿಗೆ ನಿಷೇಧ – ನಮ್ಮ ಪಾತ್ರ ಇಲ್ಲ ಅಂತ ಕೇಂದ್ರ ಸ್ಪಷ್ಟನೆ
ಇಂದಿರಾ ಗಾಂಧಿಯವರ ಅಂಗರಕ್ಷಕರಾಗಿದ್ದ ಬಿಯಾಂತ್ ಸಿಂಗ್ ಮತ್ತು ಸತ್ವಂತ್ ಸಿಂಗ್, 1984ರ ಅಕ್ಟೋಬರ್ 31 ರಂದು ನಿವಾಸದಲ್ಲಿ ಇಂದಿರಾ ಗಾಂಧಿಯನ್ನು ಹತ್ಯೆ ಮಾಡಿದರು.