ನವದೆಹಲಿ: ಆಪರೇಷನ್ ಅಜಯ್ ಮಿಷನ್ (Operation Ajay) ಮುಂದುವರಿದ್ದು, ಇಸ್ರೇಲ್‌ನಲ್ಲಿ (Israel) ಸಿಲುಕಿರುವ ಭಾರತೀಯರನ್ನು ಹೊತ್ತ 4ನೇ ವಿಮಾನ ಭಾರತಕ್ಕೆ ಬಂದಿಳಿದಿದೆ. 274 ಭಾರತೀಯರು ತಾಯ್ನಾಡಿಗೆ ವಾಪಸ್ ಆಗಿದ್ದಾರೆ.
ಎಲ್ಲರನ್ನೂ ಕೇಂದ್ರ ಸಚಿವ ವಿ.ಕೆ. ಸಿಂಗ್ ಸ್ವಾಗತಿಸಿದ್ದಾರೆ. ಈ ಪೈಕಿ 8 ಮಂದಿ ಕನ್ನಡಿಗರು ತಮ್ಮ ಮನೆ ಸೇರಿಕೊಂಡಿದ್ದಾರೆ. ‘ಪಬ್ಲಿಕ್ ಟಿವಿ’ ಜೊತೆ ಇಸ್ರೇಲ್‌ನಿಂದ ಆಗಮಿಸಿದ ಕನ್ನಡಿಗರು ತಮ್ಮ ಅನುಭವ ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ: ಅಖಾಡಕ್ಕಿಳಿದ ಇಸ್ರೇಲ್ ಪ್ರಧಾನಿ – ಹಮಾಸ್ ಬಂಡುಕೋರರಿಗೆ ನೇರ ಎಚ್ಚರಿಕೆ
ನಂದಾ ಹಾಗೂ ರೇಣುಕಾ ದಂಪತಿ ಮಾತನಾಡಿ, ದೆಹಲಿ ಬರ್ತಿದ್ದಂತೆ ಎಲ್ಲ ಭಾರ ಇಳಿದು ಮಾನಸಿಕ ನೆಮ್ಮದಿ ಸಿಕ್ಕಿತು. ಇಸ್ರೇಲ್‌ನಿಂದ ಬಂದಿದ್ದು, ನಮಗೆ ಯುದ್ಧದ ಅನುಭವೇ ಆಯ್ತು. ಈಗಲೂ ಸೈರನ್ ಸೌಂಡ್, ಕಟ್ಟಡ ಅಲುಗಾಡಿದಂತೆ ಭಾಸವಾಗುತ್ತಿದೆ ಎಂದು ಯುದ್ಧದ ಭೀಕರತೆ ಬಗ್ಗೆ ಕನ್ನಡಿಗರು ಬಿಚ್ಚಿಟ್ಟಿದ್ದಾರೆ.
ಅತ್ತ, ಹುಬ್ಬಳ್ಳಿಗೆ ಬಂದ ಡಾ. ಅಖಿಲೇಶ್ ಕಾರಗದ್ದೆ-ಕೃತಿ ದಂಪತಿ ಕನ್ನಡಿಗರಿಗೆ ಜಿಲ್ಲಾಡಳಿತ ಸ್ವಾಗತ ಕೋರಿದೆ. ಲೇಸರ್ ಟೆಕ್ನಾಲಜಿ ಪೋಸ್ಟ್ ಡಾಕ್ಟರಲ್ ಫೆಲೋ ವ್ಯಾಸಂಗಕ್ಕಾಗಿ ಕಳೆದ ಜೂನ್ ವೇಳೆ ದಂಪತಿ ಇಸ್ರೇಲ್‌ಗೆ ತೆರಳಿತ್ತು. ಇದನ್ನೂ ಓದಿ: ಯುದ್ಧ ಪೀಡಿತ ಇಸ್ರೇಲ್‍ನಿಂದ 197 ಜನರನ್ನು ಹೊತ್ತು ದೆಹಲಿಯೆಡೆಗೆ ಹಾರಿದ 3ನೇ ವಿಮಾನ
Web Stories