ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಆಪರೇಷನ್ ಬುಲ್ಡೋಜರ್ (Operation Buldozer) ಕಾರ್ಯಾಚರಣೆ 3ನೇ ದಿನಕ್ಕೆ ಮುಂದುವರಿದ್ದು, ಇಂದು ಬಿಜೆಪಿ (BJP) ಮುಖಂಡರೊಬ್ಬರು ತೆರವು ಕಾರ್ಯಕ್ಕೆ ಅಡ್ಡಿಪಡಿಸಿದ್ದಾರೆ.
ಸರ್ಕಾರ ಮುಲಾಜಿಲ್ಲದೇ ತೆರವು ಕ್ರಮದ ಹೇಳಿಕೆ ನೀಡಿದ್ರೆ, ಇತ್ತ ಬಿಜೆಪಿ ಮುಖಂಡನೇ ಒತ್ತುವರಿ ತೆರವಿಗೆ ಅಡ್ಡಿಯಾಗಿದ್ದಾರೆ. ಇಂದು ಮಹದೇವಪುರದಲ್ಲಿ ತೆರವು ವೇಳೆ ಬಿಜೆಪಿ ಮುಖಂಡ ನಂದೀಶ್ ರೆಡ್ಡಿ (Nandish Reddy) ಕಿರಿಕ್ ಮಾಡಿದ್ದಾರೆ. ಚಿನ್ನಪ್ಪನಹಳ್ಳಿ ಒತ್ತುವರಿ ತೆರವು ಕಾರ್ಯಚರಣೆ ವೇಳೆ ಮಧ್ಯಪ್ರವೇಶ ಮಾಡಿದ ಅವರು, ಪಾಲಿಕೆ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ.
Advertisement
Advertisement
ಇದೀಗ ನಿಮ್ಮದೇ ಪಕ್ಷದ ಮಾಜಿ ಶಾಸಕರು ಹೀಗ್ಯಾಕೆ ವರ್ತನೆ ಮಾಡ್ತಾರೆ?. ಬಿಬಿಎಂಪಿ (BBMP) ತೆರವು ಕೆಲಸಕ್ಕೆ ಅಡ್ಡಿ ಪಡಿಸುವ ಅಗತ್ಯತೆ ಏನಿದೆ ಎಂದು ಇದೀಗ ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ. ಇದನ್ನೂ ಓದಿ: ಆಪರೇಷನ್ ಬುಲ್ಡೋಜರ್‌ಗೆ 3ನೇ ದಿನ- ಇಂದೂ ನಡೆಯಲಿದೆ ನಲಪಾಡ್ ಅಕಾಡೆಮಿ ಒತ್ತುವರಿ ತೆರವು!
Advertisement
Advertisement
ಬೆಂಗಳೂರಿನಲ್ಲಿ ಮಳೆ ಅವಾಂತರ, ಒತ್ತುವರಿ ವಿರುದ್ಧ ಮೊನ್ನೆಯಷ್ಟೇ ಪ್ರತಿಭಟನೆ ನಡೆಸಿದ್ದ ಕಾಂಗ್ರೆಸ್ ರಾಜ್ಯ ಯುವ ಘಟಕದ ಅಧ್ಯಕ್ಷ ಮೊಹಮ್ಮದ್ ನಲಪಾಡ್ (Mohammad Nalapad) ನಿನ್ನೆಯಷ್ಟೇ ತಮ್ಮ ಅಕಾಡೆಮಿ ತೆರವು ಕಾರ್ಯಾಚರಣೆ ವೇಳೆ ದೊಡ್ಡ ಹೈಡ್ರಾಮ ನಡೆಸಿದ್ದರು. ರಾಜಕಾಲುವೆ ಒತ್ತುವರಿ ಆಗಿಲ್ಲ. ನೀವು ತಪ್ಪು ಮಾಡುತ್ತಿದ್ದೀರಿ’ ಎಂದು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ್ದರು.
ಹ್ಯಾರಿಸ್ ಮಾಲೀಕತ್ವದ ನಲಪಾಡ್ ಅಕಾಡೆಮಿ (Nalapad Academy) ಯ ಕಾಂಪೌಂಡ್‍ನ್ನು ಧರೆಗೆ ಉರುಳಿಸಲಾಗಿತ್ತು. ಈ ವೇಳೆ ಹ್ಯಾರಿಸ್ ಪಿಎ ಸ್ಥಳದಲ್ಲಿ ಒತ್ತುವರಿ ಸ್ಥಗಿತಗೊಳಿಸಲು ಹೈಡ್ರಾಮಾ ನಡೆಸಿದ್ದರು. ನೋಟಿಸ್ ಕೊಟ್ಟಿಲ್ಲ, ಹೇಗೆ ತೆರವು ಮಾಡುತ್ತೀರಾ ಎಂದು ಅವಾಜ್ ಹಾಕಿದ್ದರು. ಜೆಸಿಬಿ (JCB) ಕಾರ್ಯಾಚರಣೆ ನಡೆಸುತ್ತಿದ್ದಂತೆ ಸ್ಥಗಿತಕ್ಕೆ ಸೂಚನೆ ನೀಡಿದ್ದರು. ಬಿಬಿಎಂಪಿ ಅಧಿಕಾರಿಗೆ ಗೇಟು ತೆಗೆಯಲು ಕೂಡ ಅವಕಾಶ ಕೊಟ್ಟಿರಲಿಲ್ಲ. ಈ ವಿಚಾರ ‘ಪಬ್ಲಿಕ್ ಟಿವಿ’ ಭಿತ್ತರವಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ಆರಂಭಿಸಿದ್ದರು.