ನವದೆಹಲಿ: ಬಿಜೆಪಿಯ (BJP) ಪುನರಾವರ್ತಿತ ವಿಜಯಗಳಿಂದ ಕಂಗೆಟ್ಟಿರುವ ವಿರೋಧ ಪಕ್ಷಗಳು ನಮ್ಮ ಮೇಲೆ ಹೆಚ್ಚು ಆಕ್ರಮಣ ಮಾಡುತ್ತವೆ. ನಾವು ಗೆದ್ದಷ್ಟು ಆಕ್ರಮಣವು ಕಠಿಣವಾಗಿರಲಿದೆ. ಇದನ್ನು ಎದುರಿಸಲು ನಾವು ಪ್ರಬಲವಾಗಿ ಸಿದ್ಧವಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಸಂಸದರಿಗೆ ಕರೆ ನೀಡಿದ್ದಾರೆ.
ಎರಡನೇ ಅವಧಿಯ ಬಜೆಟ್ ಅಧಿವೇಶನದ ಭಾಗವಾಗಿ ಮಂಗಳವಾರ ಸಂಸತ್ ಭವನದಲ್ಲಿ ಸಂಸದೀಯ ಸಭೆ ನಡೆಸಿದ ಅವರು ಸಂಸದರೊಂದಿಗೆ ಚರ್ಚೆ ನಡೆಸಿದರು. ಗುಜರಾತ್‌ನಲ್ಲಿ ಐತಿಹಾಸಿಕ ಗೆಲುವು ಸಿಕ್ಕಿದೆ. ಈಶಾನ್ಯ ರಾಜ್ಯಗಳಲ್ಲೂ ಬಿಜೆಪಿ ಅಧಿಕಾರಕ್ಕೇರಿದೆ. ಇದರಿಂದ ಅಸಮಾಧಾನಗೊಂಡಿರುವ ವಿಪಕ್ಷಗಳು ನಮ್ಮ ಮೇಲೆ ಹೆಚ್ಚಿನ ಆಕ್ರಮಣ ಮಾಡಬಹುದು ಎಂದು ಅವರು ತಮ್ಮ ಭಾಷಣದಲ್ಲಿ ಹೇಳಿದರು.
Advertisement
Advertisement
ಬಜೆಟ್ ಅಧಿವೇಶನ ಮುಂದೂಡಿಕೆ, ರಾಹುಲ್ ಗಾಂಧಿಯ ಅನರ್ಹತೆ ಪ್ರಶ್ನಿಸಿ ಪ್ರತಿಭಟನೆ ಮತ್ತು ಅದಾನಿ ಬಗ್ಗೆ ಜಂಟಿ ಸಂಸದೀಯ ಸಮಿತಿಯ ತನಿಖೆಗೆ ಒತ್ತಾಯಿಸುತ್ತಿರುವ ಪ್ರಕ್ಷುಬ್ಧ ಬೆಳವಣಿಗೆಗಳ ಬಗ್ಗೆ ಪ್ರಸ್ತಾಪಿಸಿ, ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿವೆ. ಸಂಸತ್ತಿನ ಎರಡೂ ಸದನಗಳು ಅಸ್ತವ್ಯಸ್ತಗೊಂಡಿವೆ ಮತ್ತು ಬಜೆಟ್ ವಿಧಿವಿಧಾನಗಳನ್ನು ಹೊರತುಪಡಿಸಿ ಯಾವುದೇ ಪ್ರಮುಖ ವ್ಯವಹಾರಗಳು ನಡೆದಿಲ್ಲ, ನಾವು ನಮ್ಮ ಕೆಲಸಗಳನ್ನು ಜನರವರೆಗೂ ತಲುಪಿಸಬೇಕು ಎಂದರು. ಇದನ್ನೂ ಓದಿ: ಸಾವರ್ಕರ್ ಬ್ರಿಟಿಷರಲ್ಲಿ ಕ್ಷಮೆಯಾಚಿಸಿದ್ದಾರೆ ಎಂಬುದನ್ನು ಸಾಬೀತುಪಡಿಸಲಿ: ರಾಗಾಗೆ ಸಾವರ್ಕರ್ ಮೊಮ್ಮಗ ಸವಾಲು
Advertisement
‘ಬೇಟಿ ಬಚಾವೋ ಬೇಟಿ ಪಢಾವೋ’ ಅಭಿಯಾನವು ಗುಜರಾತ್‌ನಲ್ಲಿ ಲಿಂಗ ಅನುಪಾತವನ್ನು ಸುಧಾರಿಸಲು ಸಹಾಯ ಮಾಡಿದೆ. ಮುಂದೆ ಜನರ ಹೃದಯ ಗೆಲ್ಲಲು ಸಾಮಾಜಿಕ ಭದ್ರತಾ ಯೋಜನೆಗಳ ಅನುಷ್ಠಾನದತ್ತ ಗಮನ ಹರಿಸಬೇಕು ಎಂದು ಪ್ರಧಾನಿ ಸಂಸದರಿಗೆ ಹೇಳಿದರು.
Advertisement
ಮುಂದಿನ ತಿಂಗಳು ಮನ್ ಕಿ ಬಾತ್‌ನ 100 ನೇ ಸಂಚಿಕೆ ಮತ್ತು ಮೇ 15-ಜೂನ್ 15 ರಿಂದ ಒಂಬತ್ತನೇ ವಾರ್ಷಿಕೋತ್ಸವದ ಆಚರಣೆ ಹಿನ್ನೆಲೆ ಈ ಬಗ್ಗೆ ಹೆಚ್ಚು ಕೇಂದ್ರೀಕರಿಸಲು ಬಿಜೆಪಿ ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮೋದಿ ಫೋಟೋ ಹರಿದಿದ್ದ ಶಾಸಕನಿಗೆ 99 ರೂ. ದಂಡ