ಅಮರಾವತಿ: ನಾಳೆಯಿಂದ ಆಗಸ್ಟ್ 15ರವರೆಗೆ ಸಾಲು ಸಾಲು ರಜೆ ಇರುವುದರಿಂದ ತಿರುಪತಿಗೆ ಹೋಗಲು ಟಿಕೆಟ್ ಬುಕ್ ಮಾಡಿದವರಿಗೆ ಮಾತ್ರ ಅವಕಾಶವಿದೆ ಎಂದು ಟಿಟಿಡಿ ತಿಳಿಸಿದೆ.
ಶ್ರಾವಣಮಾಸ ಹಾಗೂ ನಾಳೆಯಿಂದ ಆಗಸ್ಟ್ 15ರವರೆಗೆ ಹಲವು ರಾಜ್ಯಗಳಲ್ಲಿ ಸತತ ರಜೆಗಳು ಇವೆ. ಹೀಗಾಗಿ ತಿರುಪತಿ ತಿರುಮಲಕ್ಕೆ ಅಧಿಕ ಸಂಖ್ಯೆ ಭಕ್ತರು ಬರುವ ನಿರೀಕ್ಷೆ ಇದೆ. ಹೀಗಾಗಿ ಭಕ್ತರು ಯಾವುದೇ ಸಿದ್ಧತೆ, ಯೋಜನೆಗಳು ಇಲ್ಲದೇ ಈ 5 ದಿನ ತಿರುಪತಿಗೆ ಬರಬೇಡಿ ಎಂದು ಟಿಟಿಡಿ ಮನವಿ ಮಾಡಿದೆ.
Advertisement
Advertisement
ಮೊದಲೇ ದರ್ಶನದ ಟಿಕೆಟ್ ಬುಕ್ ಆಗಿದ್ದರೇ, ಇರಲು ವಸತಿ ಸೌಲಭ್ಯವನ್ನು ಮಾಡಿಕೊಂಡಿದ್ದರೇ ಮಾತ್ರ ಬನ್ನಿ. ಇಲ್ಲ ಅಂದರೆ ಬಂದು ಕಷ್ಟ ಪಡಬೇಡಿ. ಚಿಕ್ಕಮಕ್ಕಳು, ವೃದ್ಧರು, ವಿಶೇಷ ಚೇತನರು ತಿರುಮಲ ಯಾತ್ರೆಯನ್ನು ಮುಂದೂಡಿ ಎಂದು ಸೂಚಿಸಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿಯವರ ಸಾಧನೆ ಕಾಂಗ್ರೆಸ್‌ಗೆ ಅಜೀರ್ಣ: ಸಿ.ಸಿ ಪಾಟೀಲ್
Advertisement
ರಷ್ ಜಾಸ್ತಿ ಇದ್ದಲ್ಲಿ ಭಕ್ತರಿಗೆ, ನಿಗದಿತ ಸಮಯದಲ್ಲಿ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಸರತಿ ಸಾಲಿನಲ್ಲಿ, ಕಂಪಾರ್ಟ್‍ಮೆಂಟ್‍ಗಳಲ್ಲಿ ತುಂಬಾ ಹೊತ್ತು ಕಾಯಬೇಕಾಗುತ್ತದೆ ಎಂದು ಟಿಟಿಡಿ ಎಚ್ಚರಿಸಿದೆ. ಇದನ್ನೂ ಓದಿ: ಸಿದ್ದರಾಮೋತ್ಸವಕ್ಕೆ ಬಸ್ ವ್ಯವಸ್ಥೆ ಮಾಡಿದ್ದನ್ನು ಒಪ್ಪಿಕೊಂಡ ಶಾಸಕ ಶಿವಲಿಂಗೇಗೌಡ