ವಾಷಿಂಗ್ಟನ್: ಟೆಸ್ಲಾ ಹಾಗೂ ಸ್ಪೇಸ್‌ಎಕ್ಸ್ ಮುಖ್ಯಸ್ಥ ಎಲಾನ್ ಮಸ್ಕ್ ಅವರ 76 ವರ್ಷದ ತಂದೆ ತನ್ನ ದತ್ತುಪುತ್ರಿಯೊಂದಿಗೆ ಮಗು ಹೊಂದಿದ್ದ ರಹಸ್ಯ ಇದೀಗ ಬಯಲಾಗಿದೆ.
ಕಳೆದ ಮೂರು ವರ್ಷಗಳಿಂದ ಅವರೊಂದಿಗೆ ಸಂಪರ್ಕದಲ್ಲಿದ್ದು, 35 ವರ್ಷದ ದತ್ತುಪುತ್ರಿ ಜಾನಾ ಬೆಜುಡೆನ್‌ಹೌಟ್‌ನೊಂದಿಗೆ ರಹಸ್ಯವಾಗಿ 2ನೇ ಮಗು ಹೊಂದಿರುವ ಮಾಹಿತಿ ಬಹಿರಂಗವಾಗಿದೆ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಎರೋಲ್ ಮಸ್ಕ್ ಅವರೇ ಈ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ: ಸರ್ಕಾರಿ ಶಾಲಾ-ಕಾಲೇಜುಗಳ ಆಸ್ತಿ ರಕ್ಷಣೆಗೆ ಶಿಕ್ಷಣ ಇಲಾಖೆಯಿಂದ ವಿಶೇಷ ಅಭಿಯಾನ
Advertisement
Advertisement
76 ವರ್ಷ ವಯಸ್ಸಿನ ದಕ್ಷಿಣ ಆಫ್ರಿಕಾದ ಎಂಜಿನಿಯರ್ ಆಗಿರುವ ಮಸ್ಕ್, ನಾವು ಭೂಮಿಯ ಮೇಲಿರುವುದಕ್ಕೆ ಏಕೈಕ ಕಾರಣವೇ ಸಂತಾನೋತ್ಪತ್ತಿ ಮಾಡುವುದು ಎಂದಿದ್ದಾರೆ. ಜಾನಾ ಬೆಝುಯಿಡೆನ್‌ಹೌಟ್ ಎರೋಲ್ ಅವರ 2ನೇ ಪತ್ನಿ ಹೈಡೆ ಬೆಜುಡೆನ್ ಹೌಟ್ ಅವರ ಮಗಳು. 1979 ರಲ್ಲಿ ಎರೋಲ್ ಅವರ ತಾಯಿ ಮಾಯೆ ಹಾಲ್ಡೆಮನ್ ಮಸ್ಕ್ ಅವರೊಂದಿಗೆ ಬೇರ್ಪಟ್ಟ ನಂತರ ವಿವಾಹವಾದರು.
Advertisement
Advertisement
ಎರೋಲ್ ಮತ್ತು ಹೈಡೆ ಒಟ್ಟಿಗೇ ಇಬ್ಬರು ಸ್ವಂತ ಮಕ್ಕಳನ್ನು ಹೊಂದಿದ್ದರು. ಆದರೆ ಅವರು ಜಾನಾ 4 ವರ್ಷ ವಯಸ್ಸಿನವರಾಗಿದ್ದಾಗ ಅವರು ದತ್ತು ಪೋಷಕರೆಂಬುದು ಗೊತ್ತಾಗಿದೆ. ಎರೋಲ್ ಮತ್ತು ಹೈಡ್ ಅಂತಿಮವಾಗಿ 18 ವರ್ಷಗಳ ನಂತರ ವಿಚ್ಛೇದನ ಪಡೆದರು. ಆದರೆ ಇದು ಪ್ರಾಯೋಗಿಕವಾಗಿಲ್ಲ. ನಾನು ಇನ್ನೂ ಸುತ್ತಮುತ್ತಲಿದ್ದರೆ ಅವಳು ನನ್ನೊಂದಿಗೆ ಹಿಂದಿರುಗಬಹುದೂ ಎಂದೂ ಅವರು ಹೇಳಿದ್ದಾರೆ. ಇದನ್ನೂ ಓದಿ: 8 ವರ್ಷಗಳಿಂದ ಲಿವಿಂಗ್ ರಿಲೇಷನ್, 14 ಬಾರಿ ಗರ್ಭಪಾತ – ಮಹಿಳೆ ಆತ್ಮಹತ್ಯೆ, ಟೆಕ್ಕಿ ವಿರುದ್ಧ FIR
2017ರಲ್ಲಿ ಜನಾ ಅವರಿಗೆ ಮೊದಲ ಮಗುವಿನ ಗರ್ಭಧಾರಣೆ ಆಯಿತು. ಆದರೆ ಇದು ಇಡೀ ಮಸ್ಕ್ ಕುಡುಂಬವನ್ನೇ ಆಘಾತಗೊಳಿಸಿತು. ಎಲಾನ್ ಮಸ್ಕ್ ಸಹ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ಎರೋಲ್ ಹೇಳಿಕೊಂಡಿದ್ದಾರೆ. ಈ ಕುರಿತು ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಅವರ ಹೇಳಿಕೆಯನ್ನು ನಿರೀಕ್ಷಿಸಲಾಗಿದೆ.