ನವದೆಹಲಿ: ವಿಮಾನಗಳಲ್ಲಿ ಪ್ರಯಾಣಿಸುವವರು ಒಂದು ಹ್ಯಾಂಡ್ ಬ್ಯಾಗ್ ಮಾತ್ರ ತೆಗೆದುಕೊಂಡು ಹೋಗಬಹುದು ಎಂದು ನಾಗರಿಕ ವಿಮಾನಯಾನ ಸುರಕ್ಷತಾ ಬ್ಯೂರೋ (ಬಿಸಿಎಎಸ್) ಹೊಸ ನಿಯಮವನ್ನು ಜಾರಿಗೊಳಿಸಿದೆ.
Advertisement
ಒಬ್ಬ ಪ್ರಯಾಣಿಕ ಒಂದೇ ಹ್ಯಾಂಡ್ ಬ್ಯಾಗ್ ತರಬಹುದು. ಪ್ರಯಾಣಿಕರು ಒಂದಕ್ಕಿಂತ ಹೆಚ್ಚು ಬ್ಯಾಗ್ ತೆಗೆದುಕೊಂಡು ಹೋಗುವಂತಿಲ್ಲ. ಟಿಕೆಟ್ ಕೌಂಟರ್‌ನಲ್ಲಿ ಈ ಬಗ್ಗೆ ಮಾಹಿತಿ ಕೊಡಬೇಕು. ಏರ್‌ಪೋರ್ಟ್‌ನಲ್ಲೂ ಈ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದೆ. ಇದನ್ನೂ ಓದಿ: ಗೋವಾ ಚುನಾವಣೆ- ಜಗದೀಶ್ ಶೆಟ್ಟರ್ ಪ್ರಚಾರ, ಮತಯಾಚನೆ
Advertisement
All airlines and airport operators may be instructed to take steps to implement the ‘One Hand Bag rule’ meticulously on the ground to ease out the congestion and other security concerns: CISF IG (airport sector) Vijay Prakash in a letter to DG, Bureau of Civil Aviation Security pic.twitter.com/bNPujr8itV
— ANI (@ANI) January 21, 2022
Advertisement
ಏರ್‌ಪೋರ್ಟ್‍ನಲ್ಲಿ ಬ್ಯಾಗ್ ಪರಿಶೀಲನೆಗೆ ಹೆಚ್ಚು ಸಮಯ ವ್ಯರ್ಥವಾಗುತ್ತದೆ. ಸುರಕ್ಷಿತ ದೃಷ್ಟಿಯಿಂದಲೂ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಮಹಿಳೆಯರ ಹ್ಯಾಂಡ್ ಬ್ಯಾಗ್, ಕ್ಯಾಮೆರಾ, ವಾಕಿಂಗ್ ಸ್ಟಿಕ್, ಬುಕ್, ಲ್ಯಾಪ್‍ಟಾಪ್ ಹೀಗೆ ಹಲವು ಬ್ಯಾಗ್‍ಗಳಿಗೆ ಮಾತ್ರ ಅನುಮತಿ ಇದೆ ಎಂದು ಬಿಸಿಎಎಸ್ ತಿಳಿಸಿದೆ. ಇದನ್ನೂ ಓದಿ: ಕೋವಿನ್ ಖಾಸಗಿ ಮಾಹಿತಿ ಸೋರಿಕೆ ಆಗಿಲ್ಲ: ಕೇಂದ್ರ
Advertisement
ಈಗಾಗಲೇ ಪಟ್ಟಿ ಮಾಡಲಾದ ವಸ್ತುಗಳನ್ನು ಹೊರತುಪಡಿಸಿ ಒಂದಕ್ಕಿಂತ ಹೆಚ್ಚು ಕೈ ಬ್ಯಾಗ್‍ಗಳನ್ನು ಸಾಗಿಸಲು ಯಾವುದೇ ಪ್ರಯಾಣಿಕರಿಗೆ ಅನುಮತಿ ನೀಡಬಾರದು ಎಂದು ಬಿಸಿಎಎಸ್ ಬುಧವಾರ ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಿದೆ. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಆರೋಗ್ಯ ಪ್ರೋಟೋಕಾಲ್‍ಗಳನ್ನು ಖಚಿತಪಡಿಸಿಕೊಳ್ಳಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಜಾತಿ, ಧರ್ಮ, ದೇಶ ಗಡಿ ದಾಟಿದ ಪ್ರೇಮ ಕಥೆ