– ಅಯೋಧ್ಯೆ ಮಂದಿರ ಉದ್ಘಾಟನೆಗೆ ನಿಯಮ ಪಾಲಿಸಲು ಮನವಿ
ಅಯೋಧ್ಯೆ: ಜನವರಿ 22ರಂದು ನಡೆಯುವ ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಆಹ್ವಾನ ಪತ್ರಿಕೆ (Inivitation Card) ಹಂಚಿಕೆ ಕಾರ್ಯ ಮುಂದುವರಿದಿದ್ದು, ಬಿಗಿ ಬಂದೋಬಸ್ತ್‌ನಲ್ಲಿ ಕಾರ್ಯಕ್ರಮ ನಡೆಯಲಿದೆ. ಹೀಗಾಗಿ ಕಾರ್ಯಕ್ರಮಕ್ಕೆ ಆಹ್ವಾನ ನೀಡಿರುವ ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಕಾರ್ಯಕ್ರಮಕ್ಕೆ ಆಗಮಿಸುವ ಸಾಧು ಸಂತರಿಗೆ, ಗಣ್ಯರಿಗೆ ವಿಶೇಷ ಮನವಿ ಮಾಡಿದ್ದಾರೆ. ಇದರಲ್ಲಿ ಅಯೋಧ್ಯೆಯಲ್ಲಿ (Ayodhya) ಕಾರ್ಯಕ್ರಮಕ್ಕೆ ಬರುವುದಾದರೆ, ಸೂಚನೆಗಳನ್ನು ಪಾಲಿಸುವಂತೆ ಟ್ರಸ್ಟ್ ಕೋರಿಕೊಂಡಿದೆ.
ಸಾಧು ಸಂತರ ಬಳಿ ವಿನಮ್ರ ನಿವೇದನೆ:
Advertisement
- ನಿಮ್ಮ ಆಧಾರ್ ಕಾರ್ಡ್ (Aadhar Card) ನಿಮ್ಮ ಜೊತೆ ಇರಲಿ.
- ಭದ್ರತಾ ಕಾರಣಗಳಿಗಾಗಿ ಮೊಬೈಲ್, ಪರ್ಸ್, ಬ್ಯಾಗ್, ಛತ್ರಿ, ಸಿಂಹಾಸನ, ವೈಯಕ್ತಿಕ ಪೂಜೆ ಸಾಮಗ್ರಿ ಅಥವಾ ಗುರಪಾದುಕೆಯನ್ನು ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಕೊಂಡೊಯ್ಯುವುದು ಸಾಧ್ಯವಿಲ್ಲ.
- ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಬೆಳಗ್ಗೆ 11.00 ಗಂಟೆ ಮೊದಲು ಪ್ರವೇಶಿಸಿ.
- ಕಾರ್ಯಕ್ರಮ 3 ಗಂಟೆಗೂ ಅಧಿಕ ಕಾಲ ನಡೆಯಬಹುದು. ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಹೋಗಲು ಮತ್ತು ವಾಪಸ್ ಬರಲು ಸುಮಾರು 1 ಕಿಲೋಮೀಟರ್ ನಡೆಯಬೇಕು.
- ಇದು ವೈಯಕ್ತಿಕ ಆಮಂತ್ರಣ. ಒಂದು ಆಮಂತ್ರಣ ಪತ್ರಿಕೆ ಮೂಲಕ ಒಬ್ಬರಿಗೆ ಮಾತ್ರ ಪ್ರವೇಶ.
- ನಿಮ್ಮ ಸಹಾಯಿಗಳು, ಶಿಷ್ಯಂದಿರು ನಿಮ್ಮ ಜೊತೆ ಬಂದರೂ ಅವರು ಕಾರ್ಯಕ್ರಮ ನಡೆಯುವ ಸ್ಥಳದಿಂದ ಹೊರಗೆ ಉಳಿಯಬೇಕು. ಶಿಷ್ಯಂದಿರು ಅಥವಾ ಸೇವಕರಿಗೆ ಪ್ರತ್ಯೇಕ ಆಮಂತ್ರಣ ಪತ್ರ ನೀಡುವುದಿಲ್ಲ.
- ಯಾವುದೇ ಸಂತರು, ಸ್ವಾಮಿಗಳ ಜೊತೆ ಭದ್ರತಾ ಸಿಬ್ಬಂದಿ ಇದ್ದರೂ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಅವರಿಗೆ ಪ್ರವೇಶವಿಲ್ಲ. ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಪಾಲ್ಗೊಳ್ಳುವುದರಿಂದ ಈ ಸ್ಥಳ ಮೊದಲೇ ಸುರಕ್ಷಿತವಾಗಿರುತ್ತದೆ.
- ಪ್ರಧಾನ ಮಂತ್ರಿ ಮಂದಿರದಿಂದ ವಾಪಸ್ ಹೋದ ಬಳಿಕವಷ್ಟೇ, ಮಂದಿರದಲ್ಲಿ ವಿರಾಜಮಾನವಾಗಿರುವ ಸಂತ ಮಹಾಪುರುಷ ರಾಮಲಲ್ಲಾನ ದರ್ಶನ ಪಡೆಯಬಹುದು.