ಮುಂಬೈ: ನ್ಯೂಜಿಲೆಂಡ್ ವಿರುದ್ಧ ಹ್ಯಾಮಿಲ್ಟನ್‍ನಲ್ಲಿ ಬುಧವಾರ ನಡೆದ ಏಕದಿನ ಪಂದ್ಯದಲ್ಲಿ ಕೆ.ಎಲ್.ರಾಹುಲ್ ಅಜೇಯ 88 ರನ್ ಗಳಿಸಿರುವುದನ್ನು ಭಾರತದ ಮಾಜಿ ಕ್ರಿಕೆಟರ್, ನಿರೂಪಕ ಸಂಜಯ್ ಮಂಜ್ರೇಕರ್ ಶ್ಲಾಘಿಸಿದ್ದಾರೆ.
ಕೆ.ಎಲ್.ರಾಹುಲ್ ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಇನ್ನಿಂಗ್ಸ್ ನ 49ನೇ ಓವರಿನಲ್ಲಿ ಜೇಮ್ಸ್ ನೀಶಮ್ ಅವರು ಎಸೆದ ಬಾಲ್ ಅನ್ನು ರಿವರ್ಸ್ ಸ್ವೀಪ್ ಮೂಲಕ ಸಿಕ್ಸ್ ಸಿಡಿಸಿದ್ದರು. ಈ ಹೊಡೆತವನ್ನು ನೋಡಿ ಮಂಜ್ರೇಕರ್ ಪ್ರಭಾವಿತರಾಗಿದ್ದು, ಕೆ.ಎಲ್.ರಾಹುಲ್ ಅವರನ್ನು ‘ಮಿಸ್ಟರ್ 360’ ಡಿಗ್ರಿ ಬ್ಯಾಟ್ಸ್‌ಮನ್ ಎಂದು ಬಣ್ಣಿಸಿದ್ದಾರೆ. ಅವರ ಪ್ರಕಾರ, ರಾಹುಲ್ ಮಾತ್ರ ಅಂತಹ ಬ್ಯಾಟ್ಸ್‌ಮನ್ ಆಗಿದ್ದು, ಅವರು ವಿಭಿನ್ನ ರೀತಿಯ ಹೊಡೆತಗಳನ್ನು ಆಡಿದ ನಂತರವೂ ಶಾಸ್ತ್ರೀಯವಾಗಿ ಕಾಣುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೆಎಲ್ ಅಂದ್ರೆ ಖಡಕ್ ಲಡ್ಕಾ- ರಾಹುಲ್‍ರನ್ನ ಹೊಗಳಿದ ಸೆಹ್ವಾಗ್
Advertisement
Only K L Rahul can make 360 degrees batting look orthodox and classical.
— Sanjay Manjrekar (@sanjaymanjrekar) February 6, 2020
Advertisement
ಹ್ಯಾಮಿಲ್ಟನ್‍ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ರಾಹುಲ್ ಮತ್ತೊಮ್ಮೆ ಬದಲಾದ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರು. ಆದರೆ ಇದು ಅವರ ಬ್ಯಾಟಿಂಗ್ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಐದನೇ ಸ್ಥಾನಕ್ಕೆ ಬಂದ ಬ್ಯಾಟ್ಸ್‌ಮನ್ ಸ್ಟ್ರೈಕ್ ರೇಟ್ 137.50ನಲ್ಲಿ 64 ಎಸೆತಗಳಲ್ಲಿ ಅಜೇಯ 88 ರನ್ ಗಳಿಸಿದರು. ಈ ವೇಳೆ ರಾಹುಲ್ ಮೂರು ಬೌಂಡರಿ ಮತ್ತು 6 ಸಿಕ್ಸರ್ ಬಾರಿಸಿದರು. ಅವರ ಇನ್ನಿಂಗ್ಸ್ ನಿಂದಾಗಿ ಭಾರತ ನಿಗದಿತ 50 ಓವರ್‍ಗಳಲ್ಲಿ 4 ವಿಕೆಟ್‍ಗಳ ನಷ್ಟದಲ್ಲಿ 347 ರನ್ ಗಳಿಸಿತ್ತು. ಇದನ್ನೂ ಓದಿ: ಮಿಂಚಿನ ವೇಗದಲ್ಲಿ ರನೌಟ್ ಮಾಡಿದ ರಾಹುಲ್- ವಿಡಿಯೋ
Advertisement
10 ಇನ್ನಿಂಗ್ಸ್ ಗಳಲ್ಲಿ 5 ಅರ್ಧಶತಕ:
ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ರಾಹುಲ್ ಅದ್ಭುತ ಬ್ಯಾಟಿಂಗ್ ಕೂಡ ಮಾಡಿದ್ದಾರೆ. ಓಪನರ್ ಆಗಿ ಅವರು 5 ಪಂದ್ಯಗಳಲ್ಲಿ ಎರಡು ಅರ್ಧಶತಕಗಳೊಂದಿಗೆ 224 ರನ್ ಗಳಿಸಿದ್ದಾರೆ. ಈ ಸಮಯದಲ್ಲಿ ರಾಹುಲ್ 40+ ಗಳಿಸಿದ್ದರು. ಈ ಕಾರಣಕ್ಕಾಗಿ ಸರಣಿ ಶ್ರೇಷ್ಠ ಗೌರವಕ್ಕೆ ರಾಹುಲ್ ಪಾತ್ರರಾಗಿದ್ದರು. ಏಕದಿನ ಮತ್ತು ಟಿ 20 ಸೇರಿ ಕೆ.ಎಲ್.ರಾಹುಲ್ ಕಳೆದ 10 ಇನ್ನಿಂಗ್ಸ್ ಗಳಲ್ಲಿ ಐದು ಬಾರಿ ಐವತ್ತು ರನ್‍ಗಳ ಗಡಿ ದಾಟಿದ್ದಾರೆ.
Advertisement
ಭಾರತದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಅವರು ಈ ಹಿಂದೆ ಕೆ.ಎಲ್.ರಾಹುಲ್ ಅವರ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಪ್ರತಿಕ್ರಿಯಿಸಿ, ಆರಂಭಿಕ ಕ್ರಮಾಂಕದಿಂದ ತೆಗೆದುಹಾಕುವುದು ಒಳ್ಳೆಯದು ಎಂದು ನಾನು ಭಾವಿಸುವುದಿಲ್ಲ. ಬದಲಾಗಿ ತಂಡದ ಆಡಳಿತವು ರಾಹುಲ್ ಮತ್ತು ಮಾಯಾಂಕ್ ಅಗರ್ವಾಲ್ ಅವರೊಂದಿಗೆ ಇನ್ನಿಂಗ್ಸ್ ಪ್ರಾರಂಭಿಸಬಹುದು ಎಂದು ಅಭಿಪ್ರಾಯ ಪಟ್ಟಿದರು. ಇದನ್ನೂ ಓದಿ: ಕೊನೆಗೂ ತಂಡವನ್ನು ಗೆಲ್ಲಿಸಿದ ರಾಸ್ ಟೇಲರ್- 24 ವೈಡ್ ಎಸೆದ ಟೀಂ ಇಂಡಿಯಾ