ತೆಲಂಗಾಣ: ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯ ರೈತರು ತಮ್ಮ ಬೆಳೆಯನ್ನು ಮಂಗಗಳು ಮತ್ತು ಕಾಡುಹಂದಿಗಳಿಂದ ರಕ್ಷಿಸಲು ವಿಶಿಷ್ಟ ಉಪಾಯವೊಂದನ್ನು ಮಾಡಿದ್ದಾರೆ. ವ್ಯಕ್ತಿಯೊಬ್ಬನಿಗೆ ಕರಡಿ ವೇಷ ಹಾಕಿ ತಮ್ಮ ಹೊಲದಲ್ಲಿ ನಿಲ್ಲಿಸುವ ಮೂಲಕ ಅವರು ಕೋತಿಗಳಿಂದ ಬೆಳೆಯನ್ನು ರಕ್ಷಿಸಲು ಮುಂದಾಗಿದ್ದಾರೆ.
ತೆಲಂಗಾಣದ ಸಿದ್ದಿಪೇಟೆಯ ಕೋಹೆಡದ ರೈತ ಭಾಸ್ಕರ್ ರೆಡ್ಡಿ ಕೋತಿಗಳು ಮತ್ತು ಕಾಡುಹಂದಿಗಳು ಬೆಳೆ ಹಾನಿ ಮಾಡುವುದನ್ನು ತಡೆಯಲು ಕರಡಿಯ ವೇಷ ಧರಿಸಿ ಹೊಲದಲ್ಲಿ ಓಡಾಡಲು ವ್ಯಕ್ತಿಯನ್ನು ನೇಮಿಸಿದ್ದಾರೆ. ಈ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಷ್ಟೇ ಅಲ್ಲದೆ, ಕರಡಿ ವೇಷ ಧರಿಸಿ ಓಡಾಡುವ ವ್ಯಕ್ತಿಗೆ ದಿನಕ್ಕೆ 500 ರೂ. ವೇತನವನ್ನೂ ನಿಗದಿ ಮಾಡಲಾಗಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
Advertisement
Advertisement
ಹೊಲದ ಬೆಳೆಯನ್ನು ಸುರಕ್ಷಿತವಾಗಿಡಲು ವ್ಯಕ್ತಿಯೊಬ್ಬ ದಿನವಿಡೀ ಹೊಲದಲ್ಲಿ ತಿರುಗಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಕೆಲಸಕ್ಕಾಗಿ ಅವರಿಗೆ ದಿನದ ವೇತನ 500 ರೂಪಾಯಿ ನೀಡಲಾಗುತ್ತಿದೆ. ಸದ್ಯ ಜಾಲತಾಣದಲ್ಲಿ ಈ ಮಾಹಿತಿಗೆ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ. ಕೆಲವರು ಏನೇ ಆದರೂ ಪ್ರಾಣಿಗಳನ್ನು ನಿಯಂತ್ರಣಗೊಳಿಸಲು ಸಾಧ್ಯವೇ ಎಂಬ ಪ್ರಶ್ನೆ ಎತ್ತಿದರೆ, ಇನ್ನೂ ಕೆಲವರು ಕರಡಿ ವೇಷ ಹಾಕಿಕೊಳ್ಳಲು ತಿಂಗಳಿಗೆ 15,000 ರೂ. ಸಂಬಳವೇ? ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
Advertisement
₹15,000 per month to wear a costume & roam the fields to keep monkey & wild boars away. https://t.co/BmcCKAnlTT
— Singh Varun (@singhvarun) March 31, 2022
Advertisement
ಒಟ್ಟಿನಲ್ಲಿ ಇತ್ತೀಚಿನ ದಿನಗಳಲ್ಲಿ ಉದ್ಯೋಗಗಳು ಹೊರ ಆಯಾಮ ಪಡೆದುಕೊಳ್ಳುತ್ತಿವೆ. ಅವು ಅಚ್ಚರಿ ಎನಿಸಿದರೂ ಅದರಿಂದ ಬರುವ ವೇತನವೇನು ಕಡೆಮೆಯಿಲ್ಲವೆನ್ನುವುದು ಇದರಿಂದ ಗೊತ್ತಾಗಿದೆ.