ಅಯೋಧ್ಯೆ: 2024ರ ಜನವರಿ 22 ರಂದು ರಾಮಜನ್ಮಭೂಮಿಯಲ್ಲಿ ರಾಮಲಲ್ಲಾ ವಿಗ್ರಹದ ಪ್ರಾಣಪ್ರತಿಷ್ಠಾನೆ ಕಾರ್ಯಕ್ರಮ ನಡೆಯಲಿದ್ದು, ಸಿದ್ಧತೆಗಳು ಅಂತಿಮ ಹಂತಕ್ಕೆ ತಲುಪುತ್ತಿದೆ. ಪ್ರತಿಷ್ಠಾಪನಾ ಕಾರ್ಯಕ್ರಮದಂದು (Consecration Ceremony) ಕೇವಲ 5 ಜನರಿಗೆ ಮಾತ್ರ ರಾಮಮಂದಿರದ ಗರ್ಭಗುಡಿಗೆ (Sanctum) ಪ್ರವೇಶ ಮಾಡಲು ಅವಕಾಶ ನೀಡಲಾಗಿದೆ.
Advertisement
ಹೌದು. ಈ ಐದು ಜನರನ್ನು ಹೊರತುಪಡಿಸಿ ಯಾರಿಗೂ ಗರ್ಭಗುಡಿ ಒಳಗೆ ಪ್ರವೇಶ ಮಾಡಲು ಅವಕಾಶವಿಲ್ಲ. ಅಲ್ಲದೆ ಈ ಸಂದರ್ಭದಲ್ಲಿ ಗರ್ಭಗುಡಿಯನ್ನು ಪರದೆಯಿಂದ ಮುಚ್ಚಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ರಾಮಮಂದಿರ ಉದ್ಘಾಟನೆಗೆ ದೇಶಾದ್ಯಂತ 50,000 ಕೋಟಿ ರೂ. ವಹಿವಾಟು ಸಾಧ್ಯತೆ
Advertisement
Advertisement
ಆ ಐವರು ಯಾರು..?: ಗರ್ಭಗುಡಿ ಒಳಗೆ ನರೇಂದ್ರ ಮೋದಿ (Narendra Modi) ಸಹಿತ ಐವರಷ್ಟೇ ಒಳಗೆ ಪ್ರವೇಶಿಸಬಹುದಾಗಿದೆ. ಪ್ರಧಾನಿ ಜೊತೆಗೆ ಯುಪಿ ಗವರ್ನರ್ ಆನಂದಿ ಬೆನ್ ಪಟೇಲ್, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಹಾಗೂ ರಾಮಮಂದಿರದ ಮುಖ್ಯ ಅರ್ಚಕ ಸತ್ಯೇಂದ್ರ ಅವರು ಮಾತ್ರ ಉಪಸ್ಥಿತರಿರುತ್ತಾರೆ ಎಂದು ಮೂಲಗಳು ತಿಳಿಸಿವೆ.
Advertisement
ಅಂದು ಪೂಜಾ ಕಾರ್ಯಕ್ರಮಕ್ಕೆ ಅರ್ಚಕರ ಮೂರು ತಂಡಗಳನ್ನು ರಚಿಸಲಾಗಿದೆ. ಮೊದಲ ತಂಡದ ನೇತೃತ್ವವನ್ನು ಸ್ವಾಮಿ ಗೋವಿಂದ್ ದೇವ್ ಗಿರಿ ವಹಿಸಲಿದ್ದಾರೆ. ಕಂಚಿ ಕಾಮಕೋಟಿ ಶಂಕರಾಚಾರ್ಯ ವಿಜಯೇಂದ್ರ ಸರಸ್ವತಿ ನೇತೃತ್ವದಲ್ಲಿ ಎರಡನೇ ಅರ್ಚಕರ ತಂಡ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಿದೆ. ಇನ್ನು ಮೂರನೇ ತಂಡದಲ್ಲಿ ಕಾಶಿಯ 21 ಮಂದಿ ವಿದ್ವಾಂಸರು ಭಾಗವಹಿಸುತ್ತಾರೆ.
ನಂಬಿಕೆ ಏನು..?: ರಾಮಲಾಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾ ಸಮಯದಲ್ಲಿ ಗರ್ಭಗುಡಿಯ ಪರದೆಯು ಮುಚ್ಚಿರುತ್ತದೆ. ರಾಮನ ವಿಗ್ರಹಕ್ಕೆ ಕಟ್ಟಿದ ಪಟ್ಟಿಯನ್ನು ತೆಗೆದ ನಂತರ ವಿಗ್ರಹಕ್ಕೆ ಕನ್ನಡಿ ತೋರಿಸಲಾಗುತ್ತದೆ. ಇದರಿಂದ ಶ್ರೀರಾಮನು ಮೊದಲು ತನ್ನ ಮುಖವನ್ನು ತಾನೇ ನೋಡುತ್ತಾನೆ ಎಂಬ ನಂಬಿಕೆ ಇದ್ದು, ನಂತರ ಭಕ್ತರಿಗೆ ಶ್ರೀರಾಮನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂಬುದಾಗಿ ತಿಳಿದುಬಂದಿದೆ.