– `ಸೌಂಡ್’ ಸಚಿವರ ಇಲಾಖೆಯಲ್ಲೇ ಕುಂಠಿತ
– ಗ್ಯಾರಂಟಿ ಸರ್ಕಾರದ ಬಳಿ ಅಭಿವೃದ್ಧಿಗೆ ಹಣ ಇಲ್ಲ?
ಬೆಂಗಳೂರು: ನಾಯಕತ್ವ ಬದಲಾವಣೆಯ ತಿಕ್ಕಾಟದಿಂದ ಕರ್ನಾಟಕ (Karnataka) ಅಭಿವೃದ್ಧಿಗೆ ತೊಡಕಾಯ್ತಾ? ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಗಣನೀಯ ಕುಸಿತ ಆಯ್ತಾ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ. ಕಳೆದ 6 ತಿಂಗಳ ಅವಧಿಯಲ್ಲಿ ಶೇ.30 ರಷ್ಟು ಮಾತ್ರ ಸರಾಸರಿ ಪ್ರಗತಿಯಾಗಿದೆ. ಅಬ್ಬರಿಸಿ ಮಾತನಾಡುವ ಸಚಿವರ ಇಲಾಖೆಯಲ್ಲಿ ಅಭಿವೃದ್ಧಿ ಕುಂಠಿತ ಆಗಿದ್ದು, ಕಂದಾಯ ಇಲಾಖೆ ಹೊರತುಪಡಿಸಿ ಉಳಿದ ಇಲಾಖೆಗಳಲ್ಲಿ ಅಭಿವೃದ್ಧಿಗೆ ಹಿನ್ನಡೆಯಾಗಿದೆ.
ಸದಾ ಹೇಳಿಕೆ ನೀಡಿ ಸುದ್ದಿಯಾಗುತ್ತಿರುವ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ನಿಭಾಯಿಸುತ್ತಿರುವ ಇಲಾಖೆಗಳು ಅಭಿವೃದ್ಧಿಯಲ್ಲಿ ಹಿನ್ನಡೆ ಅನುಭವಿಸಿದೆ. ಗ್ರಾಮೀಣಾಭಿವೃದ್ಧಿ, ಇಲಾಖೆಯಲ್ಲಿ ಶೇ.11.02 ರಷ್ಟು ಮಾತ್ರ ಪ್ರಗತಿ ಆಗಿದ್ದರೆ ಐಟಿ-ಬಿಟಿ, ವಿಜ್ಞಾನ ತಂತ್ರಜ್ಞಾನ ಇಲಾಖೆಯಲ್ಲಿ ಶೇ. 10.86ರಷ್ಟು ಮಾತ್ರ ಆಗಿದೆ.
ವಸತಿ ಸಚಿವ ಜಮೀರ್, ಡಿಸಿಎಂ ಡಿಕೆಶಿ ಇಲಾಖೆಗಳು ಹಿನ್ನಡೆ ಸಾಧಿಸಿವೆ. ಇದರಿಂದಾಗಿ ನಾಯಕತ್ವದ ಕುರಿತು ಚರ್ಚಿಸುವ ಸಚಿವರಿಂದ ಅಭಿವೃದ್ಧಿಯತ್ತ ಹೆಚ್ಚು ಗಮನವಿಲ್ಲವೋ? ಸರ್ಕಾರದ ಬಳಿ ಹಣವೇ ಇಲ್ಲವೋ? ಪವರ್‌ಶೇರ್ ಬಗ್ಗೆ ಹೈಕಮಾಂಡ್ ಮಂತ್ರ ಪಠಣ ಮಾಡುತ್ತಿರುವ ಸಚಿವರಿಂದ ಅಭಿವೃದ್ಧಿ ಹಿನ್ನಡೆ ಆಗುತ್ತಿದೆಯೋ ಎಂಬ ಪ್ರಶ್ನೆಗೆ ಅವರೇ ಉತ್ತರ ನೀಡಬೇಕಿದೆ. ಇದನ್ನೂ ಓದಿ: 5 ವರ್ಷವೂ ನಾನೇ ಸಿಎಂ ಎನ್ನುತ್ತಿದ್ದ ಸಿದ್ದರಾಮಯ್ಯ ಮಾತು ಮೊದಲ ಬಾರಿಗೆ ಬದಲಾಯ್ತು!
ಕುರ್ಚಿ ಕದನ; ಅಭಿವೃದ್ಧಿ ಪತನ
> ಪ್ರಸಕ್ತ ಬಜೆಟ್‌ನಲ್ಲಿ ಇಲಾಖಾವಾರು ಹಂಚಿಕೆ – 3,53,492 ಕೋಟಿ ರೂ.
> ಸೆಪ್ಟೆಂಬರ್ ತ್ರೈಮಾಸಿಕ ಅಂತ್ಯದಲ್ಲಿ ಬಿಡುಗಡೆಯಾದ ಮೊತ್ತ – 1,48,576 ಕೋಟಿ ರೂ.
> ಸೆಪ್ಟೆಂಬರ್ ಅಂತ್ಯದಲ್ಲಿ ಬಳಕೆಯಾದ ಅನುದಾನ – 1,06,611 ಕೋಟಿ ರೂ.
ಯಾವ ಇಲಾಖೆ ಎಷ್ಟು ಖರ್ಚು ಮಾಡಿದೆ?
> ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) -5,780 ಕೋಟಿ ರೂ. (ಶೇ.46.74)
(ಸಚಿವರು: ಕೃಷ್ಣ ಬೈರೇಗೌಡ)
> ಜಲಸಂಪನ್ಮೂಲ ಇಲಾಖೆ -4,496 ಕೋಟಿ ರೂ. (ಶೇ.23.9)
(ಸಚಿವರು: ಡಿ.ಕೆ. ಶಿವಕುಮಾರ್)
> ವಸತಿ ಇಲಾಖೆ – 807 ಕೋಟಿ ರೂ. (ಶೇ.18.38)
(ಸಚಿವರು: ಜಮೀರ್ ಅಹ್ಮದ್)
> ಗ್ರಾಮೀಣಾಭಿವೃದ್ಧಿ- ಪಂಚಾಯತ್‌ರಾಜ್ -2,964 ಕೋಟಿ ರೂ. (ಶೇ.11.02)
(ಸಚಿವರು: ಪ್ರಿಯಾಂಕ್ ಖರ್ಗೆ)
> ಐಟಿ-ಬಿಟಿ, ವಿಜ್ಞಾನ- ತಂತ್ರಜ್ಞಾನ -117 ಕೋಟಿ ರೂ. (ಶೇ.10.86)
(ಸಚಿವರು: ಪ್ರಿಯಾಂಕ್ ಖರ್ಗೆ) ಇದನ್ನೂ ಓದಿ: ಧರ್ಮಸ್ಥಳ ಕೇಸ್ – ಸುಜಾತ ಭಟ್ ಹೊರತುಪಡಿಸಿ ವಿಚಾರಣೆಗೆ ಗೈರಾದ ಬುರುಡೆ ಗ್ಯಾಂಗ್
ಯಾವ ಗ್ಯಾರಂಟಿ ಯೋಜನೆಗೆ ಎಷ್ಟು ಖರ್ಚು?
ಗೃಹಜ್ಯೋತಿ ಯೋಜನೆ
> ಹಂಚಿಕೆ ಮೊತ್ತ – 26,896 ಕೋಟಿ ರೂ. (ಶೇ.50.29)
ಇಂಧನ ಸಚಿವ : ಕೆಜೆ ಜಾರ್ಜ್)
* ಗೃಹಲಕ್ಷ್ಮೀ ಯೋಜನೆ
> ಹಂಚಿಕೆ ಮೊತ್ತ – 34,954 ಕೋಟಿ ರೂ. (ಶೇ.17.43)
ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ : ಲಕ್ಷ್ಮಿ ಹೆಬ್ಬಾಳ್ಕರ್
* ಶಕ್ತಿ ಯೋಜನೆ
> ಹಂಚಿಕೆ ಮೊತ್ತ – 7,169 ಕೋಟಿ ರೂ. ( ಶೇ.34.88)
ಸಾರಿಗೆ : ರಾಮಲಿಂಗಾರೆಡ್ಡಿ)
* ಅನ್ನಭಾಗ್ಯ ಯೋಜನೆ
> ಹಂಚಿಕೆ ಮೊತ್ತ – 8,274 ಕೋಟಿ ರೂ. (ಶೇ.28.23)
ಆಹಾರ ಕೆ.ಹೆಚ್. ಮುನಿಯಪ್ಪ

