– ಕೇವಲ ಮೂರು ನಿಮಿಷ ಗೋಚರಿಸಿದ ಸೂರ್ಯಗ್ರಹಣ
– ಶೇ. 80ರಷ್ಟು ಸೂರ್ಯಗ್ರಹಣ ಗೋಚರ
ಮಡಿಕೇರಿ: ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕುಟ್ಟ ಸಮೀಪದ ಕಾಯಿಮಾನಿಯಲ್ಲಿ ಶೇ.99 ರಿಂದ ಶೇ. 100ರಷ್ಟು ಸೂರ್ಯಗ್ರಹಣ ಕಾಣುತ್ತದೆ ಎಂದು ಖಗೋಳಶಾಸ್ತ್ರಜ್ಞರು ಕೊಡಗಿನತ್ತ ಮುಖ ಮಾಡಿದ್ದರು. ಆದರೆ ಇಂದು ಬೆಳಿಗ್ಗೆಯಿಂದಲೂ ಕಾಯಿಮಾನಿ ಗ್ರಾಮದಲ್ಲಿ ಮಂಜು ಮುಸುಕಿದ ವಾತಾವರಣದ ಕಂಡು ಬಂದ ಹಿನ್ನೆಲೆಯಲ್ಲಿ ಖಗೋಳ ಶಾಸ್ತ್ರಜ್ಞರಿಗೆ ಕೇಲ ಸಮಯ ಸೂರ್ಯಗ್ರಹಣ ಗೋಚರ ಆಗದೆ ಇರುವುದರಿಂದ ಕೇಲವರು ಬೇಸರ ವ್ಯಕ್ತಪಡಿಸಿದರು.
Advertisement
ಅನೇಕರು ಕಾಯಿಮಾನಿಯಿಂದ ಕುಟ್ಟ ಸಮೀಪದ ಮೇರಿ ಲ್ಯಾಂಡ್ ಎಸ್ಟೇಟ್‍ನಲ್ಲಿ ಸೂರ್ಯ ಗ್ರಹಣ ವೀಕ್ಷಣೆ ಮಾಡಿದರು. ಬೆಳಗ್ಗೆ 9:15 ನಿಮಿಷಕ್ಕೆ ಶೇ. 80ರಷ್ಟು ಮಾತ್ರ ಸೂರ್ಯ ಗ್ರಹಣ ಗೋಚರವಾಯಿತು. ಇದರಿಂದ ಖಗೋಳಶಾಸ್ತ್ರ ಅಧ್ಯಾಯನ ತಂಡ ಹಾಗೂ ವಿದ್ಯಾರ್ಥಿಗಳು ಬಾನಂಗಳದಲ್ಲಿ ನೆರಳು ಬೆಳಕಿನ ಆಟ ನೋಡಿ ಖುಷಿ ಪಟ್ಟರು. ನಂತರ 3 ನಿಮಿಷಗಳ ಕಾಲ ಸೂರ್ಯ ಗ್ರಹಣ ವೀಕ್ಷಣೆ ಮಾಡಿ ತೆರಳಿದರು.
Advertisement
Advertisement
ಮಡಿಕೇರಿಯಲ್ಲಿಯೂ ಶೇ. 90% ಸೂರ್ಯಗ್ರಹಣ ಗೋಚರಿಸಿದೆ. ಮಡಿಕೇರಿಯ ಎಫ್.ಎಂ.ಸಿ ಕಾಲೇಜಿನಲ್ಲಿ ಮೌಢ್ಯತೆ ತೊಲಗಿಸುವ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮ ಅಯೋಜನೆ ಮಾಡಲಾಗಿತ್ತು. ಗ್ರಹಣ ಸಮಯದಲ್ಲಿ ಉಪಹಾರ ಸೇವಿಸಿ ಮೌಢ್ಯತೆ ದೂರವಾಗಿಸೋ ಪ್ರಯತ್ನ ಮಾಡಲಾಯಿತು. ಕಾಲೇಜಿನ ಸಮಾಜಕಾರ್ಯ ವಿಭಾಗದಿಂದ ಗ್ರಹಣ ವೀಕ್ಷಕರಿಗೆ ಟೀ, ಕಾಫಿ, ಪಲಾವ್ ನೀಡಲಾಯಿತು. ಅಷ್ಟೇ ಅಲ್ಲದೇ ಕಾಲೇಜಿನ ಆವರಣದಲ್ಲಿಯೇ ಅಡುಗೆ ತಯಾರಿಸಿ ವಿದ್ಯಾರ್ಥಿಗಳಿಗೆ ನೀಡಲಾಯಿತು.