ಬೆಳಗಾವಿ: ಒಂದೆಡೆ ಖಾಸಗಿ ಆಸ್ಪತ್ರೆಗಳಿಗೆ ಮೂಗುದಾರ ತೊಡಿಸಲು ಸರ್ಕಾರ ಮುಂದಾಗಿದೆ. ಆದರೆ ಮತ್ತೊಂದೆಡೆ ಸರ್ಕಾರಿ ಆಸ್ಪತ್ರೆಗಳೇ ಐಸಿಯುನಲ್ಲಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಕಬ್ಬೂರು ಗ್ರಾಮದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸುತ್ತಮುತ್ತಲಿನ 10 ಹಳ್ಳಿಗಳಿಂದ ದಿನನಿತ್ಯ ಇನ್ನೂರರಿಂದ ಮುನ್ನೂರು ರೋಗಿಗಳು ಬರುತ್ತಾರೆ. ಆದ್ರೆ ಸೂಕ್ತ ಸಮಯದಲ್ಲಿ ಇಲ್ಲಿ ಚಿಕಿತ್ಸೆ ಸಿಗುವುದು ಮಾತ್ರ ಅಪರೂಪ.
Advertisement
ಇಲ್ಲಿರುವುದು ಕೇವಲ ಮೂರು ವೈದ್ಯರು ಹಾಗೂ ಮೂವರು ನರ್ಸ್‍ಗಳು ಮಾತ್ರ. ಡಿ ದರ್ಜೆ ಸಿಬ್ಬಂದಿಯಿರುವುದು ಕೇವಲ ಒಬ್ಬರು ಮಾತ್ರ. ಹಲವು ಬಾರಿ ಗರ್ಭಿಣಿಯರಿಗೆ ನರ್ಸಗಳೇ ಹೆರಿಗೆ ಮಾಡಿಸಿದ್ದಾರೆ. ಮತ್ತೊಂದಡೆ ವೈದ್ಯರಿಗಾಗಿ ನಿರ್ಮಿಸಲಾಗಿರುವ ವಸತಿ ಗೃಹಗಳು ಹಾವು ಚೇಳುಗಳ ಆವಾಸ ಸ್ಥಾನವಾಗಿದೆ.