– ಸರ್ಜಿಕಲ್ ಮಾಸ್ಕ್ 4.5 ಲಕ್ಷ
– ಥರ್ಮಲ್ ಸ್ಕ್ಯಾನರ್ 8,000
ಬೆಂಗಳೂರು: ವಿಶ್ವದೆಲ್ಲೆಡೆ ಆತಂಕ ಉಂಟುಮಾಡಿರುವ ಕೊರೊನಾ ವೈರಸ್‍ನಿಂದ ಈಗ ಕರ್ನಾಟಕ ಕೂಡ ಅಪಾಯದಲ್ಲಿದೆ. ಒಂದು ವೇಳೆ ಸೋಂಕು ಸ್ಟೇಜ್ 3 ತಲುಪಿದರೆ ಕರುನಾಡನ್ನು ಕಾಪಾಡಲು ಕಷ್ಟವಾಗುತ್ತದೆ ಎನ್ನಲಾಗಿದೆ.
Advertisement
ಶಸ್ತ್ರಾಸ್ತ್ರ ಇಲ್ಲದೇ ಕೊರೋನಾ ಸಮರಕ್ಕೆ ಸಜ್ಜಾದ್ದಂತೆ ಕರ್ನಾಟಕ ಸರ್ಕಾರ ತೋರಿಸಿಕೊಳ್ಳುತ್ತಿದೆಯಾ ಎಂಬ ಪ್ರಶ್ನೆ ಕೂಡ ಹುಟ್ಟುಕೊಂಡಿದೆ. ಕೊರೊನಾ ಸೋಂಕು ಪೀಡಿತರಲ್ಲಿ ಮುಖ್ಯವಾಗಿ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಇಂತಹ ಸಂದರ್ಭಗಳಲ್ಲಿ ವೆಂಟಿಲೇಟರ್ ಐಸಿಯು ವ್ಯವಸ್ಥೆ ರೋಗಿಗೆ ಬೇಕಾಗುತ್ತದೆ. ಕೊರೊನಾ ರೋಗಿ ಉಪಯೋಗಿಸಿದ ವೆಂಟಿಲೇಟರ್ ಬೆಡ್‍ನ್ನು ಅಷ್ಟು ಶೀಘ್ರವಾಗಿ ಬೇರೆ ಯಾವ ರೋಗಿಯೂ ಬಳಸುವಂತಿಲ್ಲ.
Advertisement
Advertisement
ರಾಜ್ಯದಲ್ಲಿ ಖಾಸಗಿ ಹಾಗೂ ಸರ್ಕಾರಿ ಎರಡೂ ಆಸ್ಪತ್ರೆಗಳು ಸೇರಿ ಒಟ್ಟು 1,200 ವೆಂಟಿಲೇಟರ್ ಮಾತ್ರವಿದೆ. ಬೆಂಗಳೂರಿನಲ್ಲಿ ಸುಮಾರು 700 ವೆಂಟಿಲೇಟರ್ ಇದ್ದು, ಬಹುಪಾಲು ವೆಂಟಿಲೇಟರ್‌ಗಳು ಖಾಸಗಿ ಆಸ್ಪತ್ರೆಯದ್ದೇ ಆಗಿದೆ. ಈಗ ಸದ್ಯ ಲಭ್ಯವಿರುವ ವೆಂಟಿಲೇಟರ್‌ನಲ್ಲಿ ಬೇರೆ ತುರ್ತು ರೋಗಿಗಳು ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
Advertisement
ಒಂದು ವೇಳೆ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾದರೆ ವೆಂಟಿಲೇಟರ್ ಎಮರ್ಜೆನ್ಸಿ ಎದುರಿಸಬೇಕಾಗುತ್ತದೆ. ಹೀಗಾಗಿ ಕೊರೊನಾ ಸಮರ ಎದುರಿಸಲು ಇರುವ ವೆಂಟಿಲೇಟರ್ ಸಾಕಾಗಲ್ಲ ಅನ್ನೋದನ್ನ ಪರಿಗಣನೆಗೆ ತೆಗೆದುಕೊಂಡು ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳಬೇಕಿದೆ.
ಯಾವ ಆಸ್ಪತ್ರೆಯಲ್ಲಿ ಎಷ್ಟು ವೆಂಟಿಲೇಟರ್‌ಗಳು ಇವೆ?
ವಿಕ್ಟೋರಿಯಾ ಆಸ್ಪತ್ರೆಯನ್ನು ಕೋವಿಡ್-19 ರೋಗಿಗಳಿಗೆ ಸೀಮಿತಗೊಳಿಸುವ ಯೋಚನೆಯಲ್ಲಿ ಸರ್ಕಾರ ಇದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೇವಲ 14 ವೆಂಟಿಲೇಟರ್ ಐಸಿಯು ಇದೆ. ಹಾಗೆಯೇ ವಾಣಿವಿಲಾಸ ಆಸ್ಪತ್ರೆಯಲ್ಲಿ 27, ಟ್ರಾಮಾ ಕೇರ್ ಆಸ್ಪತ್ರೆಯಲ್ಲಿ 40, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 33, ಜಯದೇವ ಆಸ್ಪತ್ರೆಯಲ್ಲಿ 113, ಬೌರಿಂಗ್ ಹಾಗೂ ಲೇಡಿ ಕರ್ಜನ್ ಆಸ್ಪತ್ರೆಯಲ್ಲಿ 33, ಇಂದಿರಾಗಾಂಧಿ ಆಸ್ಪತ್ರೆಯಲ್ಲಿ 45, ನಿಮ್ಹಾನ್ಸ್ ನಲ್ಲಿ 33 ವೆಂಟಿಲೇಟರ್ ಐಸಿಯುಗಳಿವೆ. ಹಾಗೆಯೇ 4.5 ಲಕ್ಷ ಸರ್ಜಿಕಲ್ ಮಾಸ್ಕ್‌ಗಳು, 6.5 ಲಕ್ಷ ಎನ್-95 ಮಾಸ್ಕ್‌ಗಳು ಹಾಗೂ 8,000 ಥರ್ಮಲ್ ಸ್ಕ್ಯಾನರ್‌ಗಳಿವೆ ಎಂದು ವರದಿಯಾಗಿದೆ.
ಈ ವೆಂಟಿಲೇಟರ್ ಐಸಿಯುಗಳಲ್ಲಿ ಈಗಾಗಲೇ ಬಹುಪಾಲು ರೋಗಿಗಳು ದಾಖಲಾಗಿದ್ದಾರೆ. ಇತ್ತ ಹೆಚ್ಚುವರಿಯಾಗಿ ಕೋವಿಡ್-19ಗೆ ಅಂತಾನೆ 273 ಪ್ರತ್ಯೇಕ ವೆಂಟಿಲೇಟರ್ ಪೂರೈಸುವ ಬಗ್ಗೆ ಆರೋಗ್ಯ ಇಲಾಖೆ ಕೇಳಿದ್ದು, ಸರ್ಕಾರ ಅತಿ ಶೀಘ್ರದಲ್ಲಿ ಈ ಬೇಡಿಕೆಯನ್ನು ಪೂರೈಸಬೇಕಿದೆ.