– ಇದ್ಯಾವುದು ವಕ್ಫ್ ಜಮೀನಲ್ಲ, ರೈತರ ಜಮೀನು ಎಂದ ಸಚಿವ
ಬೆಂಗಳೂರು: ಗೆಜೆಟ್ ನೋಟಿಫಿಕೇಷನ್‌ನಲ್ಲಿ ತಪ್ಪಾಗಿ ನಮೂದು ಆಗಿದೆ. ಇದು ಯಾವುದು ವಕ್ಫ್ ಜಮೀನಲ್ಲ. ರೈತರ ಜಮೀನು ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.
Advertisement
ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ ಬಹಳಷ್ಟು ಚರ್ಚೆ ಆಗುತ್ತಿದೆ. ವಕ್ಫ್ ಬೋರ್ಡ್ ನೋಟಿಸ್ ಕೊಟ್ಟಿದ್ದಾರೆ. ತಹಶೀಲ್ದಾರ್ ಜೊತೆ ರೈತರ ಜೊತೆಗೆ ಚರ್ಚೆ ಮಾಡಿ, ರೈತರ ಒಂದಿಂಚು ಜಮೀನು ತಪ್ಪಾಗಿ ವಕ್ಫ್‌ಗೆ ಹೋಗುವುದಿಲ್ಲ ಎಂದು ಟ್ವೀಟ್ ಮಾಡಿದ್ದೆ. ಇದಾದ ಮೇಲೆ ತೇಜಸ್ವಿ ಸೂರ್ಯ ಕೂಡ ಹೋಗಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಇದು ದೊಡ್ಡ ಸುದ್ದಿ ಆಗಿದೆ ಎಂದರು. ಇದನ್ನೂ ಓದಿ: ಆತುರದಲ್ಲಿ ಬಿಪಿಎಲ್ ಕಾರ್ಡ್‌ಗೆ ಆಹಾರ ಇಲಾಖೆ ಕೊಕ್ಕೆ- ತೆರಿಗೆ ಕಟ್ಟದಿದ್ದರೂ, ಆದಾಯ ಇಲ್ಲದಿದ್ದರೂ ರದ್ದು
Advertisement
Advertisement
ವಕ್ಫ್ ಆಸ್ತಿಗಳು 1974, 1978 ಗೆಜೆಟ್ ನೋಟಿಫಿಕೇಷನ್ ಆಗಿದೆ. 2016ರಲ್ಲೂ ಗೆಜೆಟ್ ನೋಟಿಫಿಕೇಷನ್ ಆಗಿದೆ. ಇದು ಮೂರನೇ ಬಾರಿಗೆ ನೋಟಿಫಿಕೇಷನ್ ಆಗಿದೆ. ಗೆಜೆಟ್ ನೋಟಿಫಿಕೇಷನ್‌ನಲ್ಲಿ ತಪ್ಪಾಗಿ ನಮೂದು ಆಗಿದೆ. ಇದು ಯಾವುದು ವಕ್ಫ್ ಜಮೀನಲ್ಲ. ರೈತರ ಜಮೀನು ಎಂದು ಹೇಳಿದರು.
Advertisement
ವಿಜಯಪುರದಲ್ಲಿ ಎಲ್ಲಾ ದಾಖಲಾತಿಗಳನ್ನು ಪರಿಶೀಲನೆ ಮಾಡಿ, ರೆವೆನ್ಯೂ ರೆಕಾರ್ಡ್ಸ್ ತೆಗೆದುಕೊಂಡು ನಾನೇ ಖುದ್ದಾಗಿ ಬಗೆಹರಿಸುತ್ತೇನೆ. ಮುಂದಿನ ದಿನಗಳಲ್ಲಿ ನಾನೇ ಸಭೆ ಮಾಡುತ್ತೇನೆ. ಹೊನ್ನಾವಡದಲ್ಲಿ 11 ಎಕರೆ ಮಾತ್ರ ವಕ್ಫ್ ಜಾಗ ಇದೆ. ಯಾವುದೇ ಕಾರಣಕ್ಕೂ ಒಂದೇ ಒಂದು ಇಂಚು ತಪ್ಪಾಗಿ ರೈತರ ಜಮೀನನ್ನು ನೀಡುವುದಿಲ್ಲ ಎಂದರು. ಇದನ್ನೂ ಓದಿ: ಸತೀಶ್ ಸೈಲ್‌ಗೆ 6 ಕೇಸ್‌ನಲ್ಲಿ 7 ವರ್ಷ ಜೈಲು – ಕೋರ್ಟ್ ಆದೇಶ ಕೇಳಿ ನನಗೆ ಶಾಕ್ ಆಗಿದೆ: ಡಿಕೆಶಿ
ತೇಜಸ್ವಿ ಸೂರ್ಯ ಆಗಲಿ ಯಾರೇ ಆಗಲಿ ರಾಜಕೀಯ ಮಾಡಬೇಡಿ. ಯತ್ನಾಳ್ ಅವರಿಗೂ ರಾಜಕೀಯ ಮಾಡಬೇಡಿ ಎಂದು ಹೇಳುತ್ತೇನೆ. ಯತ್ನಾಳ್ ಅವರು ಶೋ ಮಾಡಿದ್ದಾರೆ. ಕೆಲವರು ವೈಭವಿಕರಿಸಿದ್ದಾರೆ, ಇದು ರಾಷ್ಟ್ರೀಯ ಮಾಧ್ಯಮಗಳಲ್ಲಿ ಬಂದಿದೆ. ವಕ್ಫ್ ಆಸ್ತಿ ಇದ್ರೆ ಜಮೀರ್ ಅಹಮದ್ ತೆಗೆದುಕೊಳ್ಳಲಿ ನಾನು ಡಾಕ್ಯೂಮೆಂಟ್ ಕೊಡುತ್ತೇನೆ. ಗೆಜೆಟ್ ನೋಟಿಫಿಕೇಷನ್‌ನಲ್ಲಿ ಆಗಿರೋ ಎಡವಟ್ಟಿಗೆ ಈ ರೀತಿ ಆಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಶಿಗ್ಗಾಂವಿಯಲ್ಲಿ ಅಜ್ಜಂಪೀರ್ ಖಾದ್ರಿ ಬಂಡಾಯ ಶಮನವಾಗಿದೆ- ಡಿಕೆಶಿ
ಜಿಲ್ಲಾ ಉಸ್ತುವಾರಿ ಸಚಿವನಾಗಿ ನಾನು ಹೇಳುತ್ತೇನೆ ರೈತರದ್ದು ಆಗಲಿ ಅಥವಾ ಖಾಸಗಿ ಅವರದ್ದು ಆಗಲಿ, ಅದು ವಕ್ಫ್ ಬೋರ್ಡ್ದು ಆಗದೇ ಇದ್ದರೆ ಒಂದೇ ಒಂದು ಇಂಚು ಭೂಮಿ ಕೊಡುವುದಿಲ್ಲ. ಊರು ಅಂದ ಮೇಲೆ ಕಾಂಗ್ರೆಸ್ ಮತ್ತು ಬಿಜೆಪಿ ಎಂದು ಇದ್ದೇ ಇರುತ್ತೆ. ಏನು ಬೇಕಾದರೂ ಮಾಡಲಿ, ನಾನು ರೈತರ ಜೊತೆ ಮೀಟಿಂಗ್ ಮಾಡಿ ಮಾತಾಡಿದ್ದೇನೆ. 19 ನೇ ತಾರೀಕಿನಿಂದಲೇ ರೈತರ ಜೊತೆ ಸಭೆ ಮಾಡಿದ್ದೇನೆ. ಅಲ್ಲಿ ತಪ್ಪಾಗಿ ನಮೂದಾಗಿರೋದು ಗೊತ್ತಾಯಿತು. ಆಗ ತಹಶೀಲ್ದಾರ್‌ಗೆ ಪರಿಶೀಲನೆ ಮಾಡುವುದಕ್ಕೆ ಹೇಳಿದ್ದೇನೆ. ತೇಜಸ್ವಿ ಸೂರ್ಯ ಇವಾಗ ಬಂದಿದ್ದಾರೆ ಅಷ್ಟೇ ಎಂದು ಹರಿಯಾಯ್ದರು. ಇದನ್ನೂ ಓದಿ: ನ.15 ರೊಳಗೆ ರಾಜಕಾಲುವೆ ಒತ್ತುವರಿ ತೆರವುಗೊಳಿಸಿ: ಬಿಬಿಎಂಪಿ ಆಯುಕ್ತರ ಸೂಚನೆ